ಜನವರಿ 22, 2024 ರಂದು ರಾಮಮಂದಿರ ಉದ್ಘಾಟನೆಯಾಗಲಿದೆ. ಈ ಕಾರ್ಯಕ್ರಮಕ್ಕಾಗಿ ಅಧಿಕೃತ ಆಹ್ವಾನ ಪತ್ರವನ್ನು ಪ್ರಧಾನಿ ಮೋದಿಯವರಿಗೆ ನೀಡಲಾಗಿದೆ. ಉದ್ಘಾಟನೆಗೂ ಮುನ್ನ ಅಯೋಧ್ಯೆಯ ಪ್ರಸಿದ್ಧ ದೀಪೋತ್ಸವದ ಬಗ್ಗೆಯೂ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ.
ನವದೆಹಲಿ (ನ.1): ದೀಪಾವಳಿ ಹಾಗೂ ಅಯೋಧ್ಯೆಗೆ ಬಹಳ ಹಳೆಯ ನಂಟಿದೆ. ವರ್ಷದಲ್ಲಿ ಹಿಂದುಗಳ ಅತೀದೊಡ್ಡ ಹಬ್ಬವಾಗಿ ದೀಪಾವಳಿಯನ್ನು ಆಚರಣೆ ಮಾಡಲಾಗುತ್ತದೆ. ದೀಪಾವಳಿಯ ದಿನದಂದೆ ಭಗವಾನ್ ಶ್ರೀರಾಮ ಚಂದ್ರ 14 ವರ್ಷಗಳ ವನವಾಸ ಪೂರೈಸಿ, ಶ್ರೀಲಂಕಾದಲ್ಲಿ ರಾವಣನನ್ನು ವಧೆ ಮಾಡಿ ಅಯೋಧ್ಯೆಗೆ ವಾಪಾಸಾದ ಎಂದ ಹೇಳಲಾಗುತ್ತದೆ. ಇದೇ ಕಾರಣಕ್ಕಾಗಿ ಅಯೋಧ್ಯೆಯಲ್ಲಿ ಆಚರಣೆ ಮಾಡಲಾಗುವ ದೀಪಾವಳಿಯನ್ನು ಬಹಳ ವಿಶೇಷ ಎನ್ನಲಾಗುತ್ತದೆ. ಶ್ರೀರಾಮನ ಸ್ವಾಗತಕ್ಕೆ ಅಂದು ಇಡೀ ಅಯೋಧ್ಯೆಯನ್ನು ಸಿಂಗರಿಸಿದ ರೀತಿಯಲ್ಲಿಯೇ ದೀಪಾವಳಿಯಂದು ಈಗ ಪ್ರತಿ ವರ್ಷ ದೀಪೋತ್ಸವದ ದಿನವನ್ನಾಗಿ ಮಾಡಲಾಗುತ್ತದೆ. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ಬಳಿಕವಂತೂ ಅಯೋಧ್ಯೆಯಲ್ಲಿ ದೀಪಾವಳಿಯನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ. ಈ ಬಾರಿಯೂ ಕೂಡ ದೀಪಾವಳಿಯಂದು ಅಯೋಧ್ಯೆಯಯಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧತೆ ನಡೆಸುತ್ತಿದೆ.
ನವೆಂಬರ್ 11 ರಂದು ಅಯೋಧ್ಯೆ ನಗರದಲ್ಲಿ ಬೆಳಕಿನ ಮಹಾ ಹಬ್ಬವನ್ನು ಆಯೋಜಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರದ ಸಚಿವ ಜೈವೀರ್ ಸಿಂಗ್ ಹೇಳಿದ್ದಾರೆ. ಪ್ರತಿ ವರ್ಷ ನಾವು ಹೊಸ ದಾಖಲೆಗಳನ್ನು ಮಾಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಬಾರಿ 21 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಿಸಿ ನಮ್ಮದೇ ದಾಖಲೆಯನ್ನು ಮುರಿಯುವ ಸಾಹಸ ಮಾಡಲಿದ್ದೇವೆ ಎಂದು ಹೇಳಿದರು. 2020 ರಲ್ಲಿ 5.51 ಲಕ್ಷ ದೀಪಗಳು, 2021 ರಲ್ಲಿ 7.50 ಲಕ್ಷ ದೀಪಗಳು ಮತ್ತು 2022 ರಲ್ಲಿ 15.76 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ದಾಖಲೆಯನ್ನು ಈಗಾಗಲೇ ಸ್ಥಾಪಿಸಲಾಗಿದೆ.
ಶ್ರೀ ರಾಮ ಜನ್ಮಭೂಮಿ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಇತ್ತೀಚೆಗೆ ರಾಮ ಮಂದಿರದ ಉದ್ಘಾಟನೆಯ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. 2024 ರ ಜನವರಿ 22 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ರಾಮ ಲಲ್ಲಾ ವಿಗ್ರಹದ ಶಂಕುಸ್ಥಾಪನೆ ನಡೆಯಲಿದೆ ಎಂದು ಚಂಪತ್ ರೈ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಅಧಿಕೃತ ಆಹ್ವಾನ ಪತ್ರಿಕೆಯನ್ನು ಪ್ರಧಾನಿ ಮೋದಿ ಅವರಿಗೆ ನೀಡಲಾಗಿದೆ.
Deepavali; ಅಯೋಧ್ಯೆಯಲ್ಲಿ 12 ಲಕ್ಷ ದೀಪಗಳು.. ಗಿನ್ನಿಸ್ ದಾಖಲೆ ನಿರ್ಮಾಣ
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುವವರೆಗೆ ದೇಶದ ವಿವಿಧ ರಾಜ್ಯಗಳ ತಂಡಗಳಿಂದ ರಾಮಲೀಲಾ ಪ್ರದರ್ಶನ ನಡೆಯಲಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಸಚಿವ ಜೈವೀರ್ ಸಿಂಗ್ ತಿಳಿಸಿದ್ದಾರೆ. ಅಯೋಧ್ಯೆಗೆ ಬರುವ ಯಾವುದೇ ಭಕ್ತಾಧಿಗಳಿಗೆ ಯಾವುದೇ ತೊಂದರೆ ಅಥವಾ ಅನಾನುಕೂಲತೆ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದರು.
Diwali 2021: ಅಯೋಧ್ಯೆಯಲ್ಲಿ ಇಂದು 9 ಲಕ್ಷ ದೀಪಗಳಿಂದ ದೀಪೋತ್ಸವ!
| Lucknow, UP: On Ayodhya Deepotsav, UP Minister Jaiveer Singh says, "On November 11, grand Deepotsav will be organized in Ayodhya... Every year, we try to make new records. This time we will light more than 21 lakh diyas to break our own record... Ram Leela will be… pic.twitter.com/ZAOYrk8h4d
— ANI UP/Uttarakhand (@ANINewsUP)