ಇಡುಕ್ಕಿ ಗುಡ್ಡ ಕುಸಿತ: ಮೃತರ ಸಂಖ್ಯೆ 26ಕ್ಕೇರಿಕೆ!

By Suvarna News  |  First Published Aug 9, 2020, 12:39 PM IST

ಇಡುಕ್ಕಿ ಗುಡ್ಡ ಕುಸಿತ: ಮೃತರ ಸಂಖ್ಯೆ 26ಕ್ಕೇರಿಕೆ| 5 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌| ಶನಿವಾರ 12 ಮಂದಿಯ ಮೃತದೇಹ ಪತ್ತೆ| 5 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌


ಇಡುಕ್ಕಿ(ಆ.09): ಇಲ್ಲಿನ ಪೆಟ್ಟಿಮುಡಿಯ ರಾಜಮಲೆಯಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ ಮತ್ತೆ 12 ಮಂದಿಯ ಮೃತದೇಹ ಪತ್ತೆಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. 50ಕ್ಕೂ ಹೆಚ್ಚು ಮಂದಿ ಕಾಣೆಯಾಗಿರುವ ಶಂಕೆ ಇದ್ದು, ಎಷ್ಟುಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಸ್ಪಷ್ಟಸಂಖ್ಯೆ ಇನ್ನೂ ಗೊತ್ತಾಗಿಲ್ಲ. 2 ಕೇಂದ್ರ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಜ್ಯ ಅಗ್ನಿ ಶ್ಯಾಮಕ ಪಡೆ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆಸಿವೆ. ಭಾರೀ ಮಳೆ ರಕ್ಷಣಾ ಕಾರ್ಯಗಳಿಗೆ ಅಡ್ಡಿ ಪಡಿಸಿದೆ.

ಗುಡ್ಡ ಕುಸಿದು 14 ಸಾವು, 50 ಜನ ನಾಪತ್ತೆ: ಕಣ್ಣನ್‌ದೇವನ್‌ ಟೀ ಎಸ್ಟೇಟ್‌ನಲ್ಲಿ ದುರಂತ!

Latest Videos

undefined

ಇದೇ ವೇಳೆ ಇಡುಕ್ಕಿ, ಕಲ್ಲಿಕೋಟೆ, ಮಲಪ್ಪುರಂ, ವಯನಾಡ್‌ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ತಿರುವನಂತಪುರಂ ಹಾಗೂ ಕೊಲ್ಲಂ ಜಿಲ್ಲೆಗಳನ್ನು ಹೊರೆತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಇಡುಕ್ಕಿಯ ಮುಲ್ಲಪೆರಿಯಾರ್‌ ನದಿ ಅಪಾಯದ ಮಟ್ಟಮೀರಿ ಹರಿಯುತ್ತಿದ್ದು, ಪಂಪಾ ಜಲಾಶಯ ತುಂಬಿ ಹೋಗಿದೆ. ರಾಜ್ಯದ ಹಲವು ನದಿಗಳು ಅಪಾಯದ ಮಟ್ಟಮೀರಿದ್ದು, ಕೇಂದ್ರ ನೀರಾವರಿ ಆಯೋಗ ಅವುಗಳನ್ನು ಕೆಂಪು ಬಣ್ಣದಿಂದ ಗುರುತಿಸಿದೆ. ಮಳೆ ಜತೆ ಭಾರೀ ವೇಗದ ಗಾಳಿಯೂ ಬೀಸುತ್ತಿದ್ದು, ಮತ್ತಷ್ಟುಅಪಾಯದ ಮುನ್ಸೂಚನೆ ನೀಡಿದೆ.

ಕಲಬುರಗಿ: ಭಾರೀ ಮಳೆ, ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಅನ್ವಯ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 95 ಮಿಮಿ ಮಳೆ ಸುರಿದಿದ್ದು, ವಡಗರ ಹಾಗೂ ಕಲ್ಲಿಕೋಟೆಯಲ್ಲಿ ಅತೀ ಹೆಚ್ಚು ಅಂದರೆ 32.7 ಸೆಂ.ಮಿ ಮಳೆಯಾಗಿದೆ. ಮುಂದಿನ 24 ಗಂಟೆ ಮಳೆ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.

click me!