
ಬೆಂಗಳೂರು (ಜ.15): ಜಮ್ಮು, ಪಂಜಾಬ್ ಡ್ರೋನ್ ಸಹಾಯದಿಂದ ಹದ್ದಿನ ಕಣ್ಣು ಇಡಲಾಗಿದೆ. ಸೆಕ್ಯುರಿಟಿ ಪ್ರೊಟೆಕ್ಷನ್ ನಿಂದ ಸಾವು ನೋವುಗಳು ಕಡಿಮೆ ಆಗಿದೆ. ಗ್ಲೋಬಲ್ ಸೆಕ್ಯುರಿಟಿ ನಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಭಾರತೀಯ ಸೇನಾ ಸದಾ ಸಿದ್ಧವಿರುತ್ತದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಮನೋಜ್ ಸಿ. ಪಾಂಡೆ ತಿಳಿಸಿದ್ದಾರೆ.
ಸೇನಾದಿವಸ್ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇದೇ ಮೊದಲ ಬಾರಿಗೆ ಸೇನಾ ದಿವಸ್ ಕಾರ್ಯಕ್ರಮವನ್ನು ದೆಹಲಿಯಿಂದ ಹೊರ ಭಾಗದ ನಗರದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಅದರಲ್ಲಿಯೂ ದೇಶದ ಮೊದಲ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ತವರೂರು ಮಡಿಕೇರಿಯ ಸಮೀಪವಿರುವ ಬೆಂಗಳೂರಿನಲ್ಲಿ ಆಚರಣೆ ಮಾಡುತ್ತಿರುವುದು ಸಂತಸವಾಗಿದೆ. ದೇಶದ ಜನರ ಜತೆ ಸೇರಿಸುವ ಪ್ರಯತ್ನ ಇದಾಗಿದೆ ಎಂದು ನಾನು ನಂಬುತ್ತೇನೆ. ಸೇನಾ ದಿವಸ್ ದಿನವಾದ ಇಂದು ವೀರ ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ವೀರ ಸೈನಿಕರ ಬಲಿದಾನ, ಶೌರ್ಯ ರಿಂದ ಮುಂದಿನ ಜನಾಂಗ ಪ್ರೇರಣೆ ಆಗುತ್ತದೆ. ವೀರ ಸೇನಾ ಪ್ರಶಸ್ತಿ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿಂದು ಸೇನಾ ಪಡೆ ಶಕ್ತಿ, ಶಿಸ್ತು ಪ್ರದರ್ಶನ
ಮಾರ್ಚ್‌ನಿಂದ ಮಹಿಳಾ ಅಗ್ನಿವೀರ್ ತರಬೇತಿ ಆರಂಭ: ಪುರುಷರ ಅಗ್ನಿವೀರ್ ನಲ್ಲಿ ಮೊದಲ ಟ್ರೈನಿಂಗ್ ಶುರುವಾಗಿದೆ. ಮಹಿಳಾ ಅಗ್ನಿವೀರ್ ತರಬೇತಿ ಮುಂದಿನ ಮಾರ್ಚ್ ತಿಂಗಳಿಂದ ಶುರುವಾಗಲಿದೆ. ನಾರಿ ಶಕ್ತಿ ಅಡಿ ಮಹಿಳೆಯರನ್ನು ಶಸಕ್ತ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ಮಹಿಳಾ ಅಧಿಕಾರಿಗಳು, ಸೈನಿಕರು ಇಂದು ಪ್ರಮುಖ ಆಪರೇಷನ್ ಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಸೈನ್ಯದಲ್ಲಿರುವ ಸೈನಿಕರಿಗೆ ಉಪಕರಣ, ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸೇನೆಯಲ್ಲಿ ಅತ್ಯಾಧುನಿಕ ಉಪಕರಣಗಳು ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಅಭಿವೃದ್ಧಿ ಮಾಡುವ ಕಡೆ ಗಮನ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಭಾರತೀಯ ಸೇನೆಯ 75 ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಸೇನಾ ದಿನಾಚರಣೆಯನ್ನು ದೆಹಲಿಯಿಂದ ಹೊರಭಾಗ ಬೆಂಗಳೂರಿನಲ್ಲಿ ಆಚರಣೆ ಮಾಡಲಾಯಿತು. ಜೊತೆಗೆ ಭಾರತೀಯ ಸೇನೆಯ 8 ರೆಜಿಮೆಂಟ್ ಪಡೆದಗಳಿಂದ ಪರೇಡ್ ಮಾಡಲಾಯಿತು.
ಆರ್ಥಿಕ ಬಿಕ್ಕಟ್ಟು : ಲಂಕಾ ಸೇನೆಯಲ್ಲಿ ಯೋಧರ ಸಂಖ್ಯೆಯಲ್ಲಿ ಭಾರಿ ಕಡಿತ
ವೀರ ಯೋಧರಿಗೆ ಸೇನಾ ಮೆಡಲ್ ಪುರಸ್ಕಾರ (ಪುರಸ್ಕೃತರ ಪಟ್ಟಿ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ