ಯಪ್ಪಾ, ದಿಂಬಿನ ಒಳಗಿತ್ತು ಬುಸ್ ಬುಸ್ ನಾಗರ, ಮಲಗೋ ಮುಂಚೆ ಎಚ್ಚರ!

Published : Feb 25, 2025, 12:59 PM ISTUpdated : Feb 25, 2025, 01:33 PM IST
ಯಪ್ಪಾ,  ದಿಂಬಿನ ಒಳಗಿತ್ತು ಬುಸ್ ಬುಸ್ ನಾಗರ, ಮಲಗೋ ಮುಂಚೆ ಎಚ್ಚರ!

ಸಾರಾಂಶ

ಬೇಸಿಗೆಯಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇತ್ತೀಚೆಗೆ ದಿಂಬಿನ ಕವರ್‌ನಲ್ಲಿ ಹಾವು ಪತ್ತೆಯಾದ ವಿಡಿಯೋ ವೈರಲ್ ಆಗಿದೆ. ಹಾವು ಎಲ್ಲಿ ಬೇಕಾದರೂ ಅಡಗಿರಬಹುದು, ಎಚ್ಚರಿಕೆಯಿಂದ ಇರಬೇಕು ಎಂದು ವಿಡಿಯೋ ಸಂದೇಶ ನೀಡುತ್ತದೆ. ಭಾರತದ ನಾಗರ ಹಾವು ಅಪಾಯಕಾರಿ, ತೊಂದರೆಯಾದಾಗ ಕಚ್ಚುತ್ತದೆ. ಕಚ್ಚಿದ ಒಂದು ಗಂಟೆಯೊಳಗೆ ಚಿಕಿತ್ಸೆ ಪಡೆಯುವುದು ಮುಖ್ಯ.  

ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಹಾವು (Snake) ಸೇರಿದೆ. ಯಾವ ಮೂಲೆಯಲ್ಲಿ ಹಾವು ಅಡಗಿರುತ್ತೆ ಹೇಳೋದು ಕಷ್ಟ. ಬೇಸಿಗೆ ಶುರುವಾಗ್ತಾ ಇದ್ದಂತೆ ಬಿಲದಿಂದ ಏಳುವ ಹಾವುಗಳು ಅಲ್ಲಲ್ಲಿ ಕಾಣಿಸಿಕೊಳ್ತಿರುತ್ತವೆ. ರಸ್ತೆ ಮಧ್ಯೆ, ಪೊದೆಯಲ್ಲಿ ಮಾತ್ರವಲ್ಲ ಮನೆಯೊಳಗೆ ನುಗ್ಗವು ಹಾವು, ಸದ್ದಿಲ್ಲದೆ ದಾಳಿ ನಡೆಸುತ್ತದೆ. ವಿಜಪೂರಿತ ನಾಗರ ಹಾವು (cobra) ಕಚ್ಚಿದ್ರೆ ಬದುಕೋದು ಬಹಳ ಕಷ್ಟ. ಈಗ ಸೋಶಿಯಲ್ ಮೀಡಿಯಾದಲ್ಲಿ ಹಾವಿನ ವಿಡಿಯೋ ಒಂದು ವೈರಲ್ ಆಗಿದೆ.

ಮನೆಯ ಮೂಲೆಯಲ್ಲಿ, ಹೆಲ್ಮೆಟ್ ಒಳಗೆ, ಶೂ ಒಳಗೆ ಹಾವಿರೋದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದ್ರೆ ಇಲ್ಲಿ ಹಾವು ದಿಂಬಿನ ಕವರ್ ಒಳಗೆ ಕಾಣಿಸಿಕೊಂಡಿದೆ. ಈ ವಿಡಿಯೋ ನೋಡಿದ್ರೆ ಭಯವಾಗೋದು ಗ್ಯಾರಂಟಿ. ಸೋಫಾ ಮೇಲೆ ಇರಿಸಿದ್ದ ದಿಂಬಿನ ಕವರ್ ಒಳಗೆ ಹಾವು ಸೇರಿಕೊಂಡಿದೆ. ದಿಂಬಿನ ಕವರ್ (pillow cover) ಎತ್ತುತ್ತಿದ್ದಂತೆ ಹಾವು ಬುಸ್ ಗುಡೋದನ್ನು ಕೇಳಬಹುದು. ಈ ವಿಡಿಯೋ ನೋಡಿದ ಬಳಕೆದಾರರ ಎದೆ ನಡುಗಿದೆ.

ಸಾಯೋಕೆ ಹಾವಿನ ಇಷ್ಟು ವಿಷ ಸಾಕು, ಯಾವ ಹಾವು ಡೇಂಜರ್‌ ?

ಇನ್ಸ್ಟಾಗ್ರಾಮ್ ನ reenagarg_hr06 ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ದಿಂಬಿನೊಳಗೆ ಹಾವಿರಬಹುದು ಎಂಬ ಕಲ್ಪನೆ ಇರೋಕೆ ಸಾಧ್ಯವಿಲ್ಲ. ಮಕ್ಕಳಾಗಿ ಇಲ್ಲ ದೊಡ್ಡವರಾಗ್ಲಿ ಸೋಫಾ ಮೇಲೆ ಕುಳಿತುಕೊಳ್ತಿದ್ದಂತೆ ಪಕ್ಕದಲ್ಲಿದ್ದ ದಿಂಬನ್ನು ಕೈನಲ್ಲಿ ಹಿಡಿತಾರೆ ಇಲ್ಲ ಕಾಲಿನ ಮೇಲಿಟ್ಟುಕೊಳ್ತಾರೆ. ಈ ಮಹಿಳೆ ದಿಂಬಿನಿಂದ ಬರ್ತಿದ್ದ ಶಬ್ಧ ಕೇಳಿ ಅದ್ರಲ್ಲಿ ಹಾವಿದೆ ಎಂಬುದನ್ನು ಊಹಿಸಿದ್ದಾಳೆ. ದಿಂಬಿನ ಕವರನ್ನು ನಿಧಾನವಾಗಿ ತೆಗೆಯುತ್ತಾಳೆ. ಅಡಗಿ ಕುಳಿತಿದ್ದ ನಾಗರ ಹಾವು ಬುಸ್ ಗುಡ್ತಾ ಮೇಲೆ ಬರುತ್ತದೆ. ನಂತ್ರ ನಿಧಾನವಾಗಿ ದಿಂಬಿನಿಂದ ಹೊರಗೆ ಬರುತ್ತದೆ. ಇದು ಹಿಂದಿನ ವರ್ಷದ ವಿಡಿಯೋ. ಸೋಶಿಯಲ ಮೀಡಿಯಾದಲ್ಲಿ ಈಗ್ಲೂ ವೈರಲ್ ಆಗ್ತಾನೆ ಇದೆ. 

ಹಾವು ಎಲ್ಲಿ ಬೇಕಾದ್ರೂ ಅಡಗಿರಬಹುದು. ಮನೆಯ ಪ್ರತಿಯೊಂದು ವಸ್ತುವನ್ನು ಬಳಸುವಾಗ್ಲೂ ಎಚ್ಚರಿಕೆಯಿಂದ ಇರಿ ಎಂಬ ಸಂದೇಶವನ್ನು ಈ ವಿಡಿಯೋ ಹೇಳ್ತಿದೆ. ವಿಡಿಯೋ ನೋಡಿದ ಜನರು ಸಾಕಷ್ಟು ಕಮೆಂಟ್ ಹಾಕಿದ್ದಾರೆ. ಯಾಕೆ ರಿಸ್ಕ್ ತೆಗೆದುಕೊಂಡಿದ್ದೀರಿ, ದಿಂಬನ್ನೇ ಹೊರಗೆ ಎಸೆಯಿರಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದು ದಿಂಬಿನೊಳಗೆ ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾರೆ. ಮಹಿಳೆಯೇ ದಿಂಬಿನ ಒಳಗೆ ಹಾವನ್ನು ಹಾಕಿ ಈಗ ತೆಗೆಯುತ್ತಿದ್ದಾರೆ ಎನ್ನುವ ಅನುಮಾನವನ್ನೂ ಜನರು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಹೇಳೋಕೆ ಸಾಧ್ಯವಿಲ್ಲ. ಆದ್ರೆ ಹಾವು ಎಲ್ಲಿ ಬೇಕಾದ್ರೂ ಅಡಗಿರುತ್ತೆ. ಮನೆಯೊಳಗೆ ಇರಲಿ, ಮನೆ ಹೊರಗೆ ಇರಲಿ, ಬೇಸಿಗೆ ಹಾಗೂ ಮಳೆಗಾಲದಲ್ಲಿ ನೀವು ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹಾವಿನ ಚಲನೆ ಅಥವಾ ಶಬ್ಧ ಕೇಳಿ ಬರ್ತಿದ್ದರೆ ಅದನ್ನು ಟಚ್ ಮಾಡುವ ಸಾಹಸಕ್ಕೆ ಹೋಗ್ಬೇಡಿ. ತಜ್ಞರನ್ನು ಕರೆಸಿ. 

ಭಾರತದ ಈ ರಾಜ್ಯದಲ್ಲಿ ಹಾವುಗಳೇ ಇಲ್ಲ, ಇದು ಭಾರತದ ಅತ್ಯಂತ ಸುಂದರ ತಾಣ

ಭಾರತದಲ್ಲಿರುವ ನಾಗರ ಹಾವು ಅತ್ಯಂತ ಅಪಾಯಕಾರಿ ಹಾಗೂ ವಿಷಕಾರಿ ಹಾವು. ಅದು ತಾನಾಗಿಯೇ ಮನುಷ್ಯನ ಮೇಲೆ ದಾಳಿ ಮಾಡುವುದಿಲ್ಲ. ತನಗೆ ತೊಂದರೆಯಾಗ್ತಿದೆ ಅನ್ನಿಸಿದಾಗ ಇಲ್ಲವೆ ತನ್ನ ಮೇಲೆ ದಾಳಿಯಾದಾಗ ಅದ್ರಿಂದ ರಕ್ಷಿಸಿಕೊಳ್ಳಲು ಕಚ್ಚುತ್ತದೆ. ನಾಗರ ಹಾವಿನ ವಿಷ ಬಹುಬೇಗ ದೇಹವನ್ನು ಸೇರುತ್ತದೆ. ಹಾವು ಕಚ್ಚಿ ಒಂದು ಗಂಟೆಯಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ, ಹಾವಿನ ವಿಷ ಇಡೀ ದೇಹ ಸೇರಲು 8 ಗಂಟೆ ಬೇಕಾಗುವ ಕಾರಣ, ಅದಕ್ಕಿಂತ ಮೊದಲೇ ಚಿಕಿತ್ಸೆ ಪಡೆದಲ್ಲಿ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!