ಅಂತ್ಯ ಸಂಸ್ಕಾರವೂ ಇಲ್ಲ, ಶವಾಗಾರದಲ್ಲಿ ಜಾಗವಿಲ್ಲ; ದೆಹಲಿ ಸ್ಥಿತಿ ಯಾರಿಗೂ ಬೇಡ!

Suvarna News   | Asianet News
Published : May 29, 2020, 06:16 PM IST
ಅಂತ್ಯ ಸಂಸ್ಕಾರವೂ ಇಲ್ಲ, ಶವಾಗಾರದಲ್ಲಿ ಜಾಗವಿಲ್ಲ; ದೆಹಲಿ ಸ್ಥಿತಿ ಯಾರಿಗೂ ಬೇಡ!

ಸಾರಾಂಶ

ಕೊರೋನಾ ವೈರಸ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಂಭೀರ ಸ್ವರೂಪ ತಾಳುತ್ತಿದೆ. ಈಗಾಗಲೇ ದೆಹಲಿಯಲ್ಲಿ 18,281 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದೆ. ಇತ್ತ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಇದೀಗ ಅಸ್ಪತ್ರೆ ತುಂಬ ಶವಗಳ ರಾಶಿಯೇ ಇದೆ. ಇತ್ತ ಶವಾಗಾರದಲ್ಲೂ ಸ್ಥವಿಲ್ಲ, ಅತ್ತ ಅಂತ್ಯ ಸಂಸ್ಕಾರವೂ ಇಲ್ಲದೆ ಶವಗಳು ಅನಾಥವಾಗಿ ಬಿದ್ದಿದೆ.  

ದೆಹಲಿ(ಮೇ.29): ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿದೆ. ಇದೇ ಮೊದಲ ಬಾರಿಗೆ ಗರಿಷ್ಠ ಪ್ರಕರಣಗಳು ದೆಹೆಲಯಲ್ಲಿ ದಾಖಲಾಗಿದೆ. ಬರೋಬ್ಬರಿ 1,024 ಕೊರೋನಾ ಪ್ರಕರಣ 24 ಗಂಟೆಯಲ್ಲಿ ದಾಖಲಾಗಿದೆ. ಇಷ್ಟೇ ಅಲ್ಲ 316 ಮಂದಿ ಕೊರೋನಾ ವೈರಸ್‌ನಿಂದ ಮೃತಪಟ್ಟಿದ್ದಾರೆ. ನಗರದ ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ಸೇರಿದಂತೆ ಹಲವು ಕಾರಣಗಳಿಂದ ಮೃತಪಟ್ಟ ಶವಗಳೇ ತುಂಬಿಹೋಗಿದೆ.

ಲೋಕನಾಯಕ ಜಯಪ್ರಕಾಶ್ ಆಸ್ಪತ್ಪೆಯ ಶವಗಾರದಲ್ಲಿ ಗರಿಷ್ಠ 45 ಮೃತ ದೇಹಗಳನ್ನಿಡಲು ವ್ಯವಸ್ಥೆ ಇದೆ. ಆದರೆ ಇದೀಗ 108 ಶವಗಳನ್ನು ಇಡಲಾಗಿದೆ. ಇನ್ನು 28 ಶವಗಳಿಗೆ ಜಾಗವಿಲ್ಲದೆ ಆಸ್ಪತ್ರೆಯ ಪ್ಯಾಸೇಜ್‌ನಲ್ಲಿ ಇಡಲಾಗಿದೆ. ಅತ್ತ ಮೃತ ದೇಹವಿಡಲು ಶವಾಗಾರವೂ ಇಲ್ಲ, ಇತ್ತ ಅಂತ್ಯ ಸಂಸ್ಕಾರ ಮಾಡುವವರೂ ಇಲ್ಲದೆ ಶವಗಳು ಅನಾಥವಾಗಿ ಬಿದ್ದಿದೆ. 

ಘಾಟ್‌ನಲ್ಲಿ ಸಿಬ್ಬಂದಿ ಕೊರತೆಯಿಂದ ಅಂತ್ಯಸಂಸ್ಕಾರ ತಡವಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ದೆಹಲಿಯಲ್ಲಿ 18,281 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಂಡಮಾನ್‌ ದ್ವೀಪದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ
ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!