ಕೊರೋನಾ ಚಿಕಿತ್ಸೆ ಮತ್ತೊಂದು ಔಷಧ: ತುರ್ತು ಬಳಕೆಗೆ ಅನುಮತಿ!

By Kannadaprabha News  |  First Published Apr 24, 2021, 8:29 AM IST

ಕೊರೋನಾ ಚಿಕಿತ್ಸೆಗೆ ಝೈಡಸ್‌ನ ವಿರಾಫಿನ್‌ ಔಷಧ| ವಿರಾಫಿನ್‌ ತುರ್ತು ಬಳಕೆಗೆ ಡಿಸಿಜಿಐ ಅನುಮತಿ| ಇದನ್ನು ಪಡೆದ ರೋಗಿಗಳಿಗೆ 7 ದಿನದಲ್ಲಿ ನೆಗೆಟಿವ್‌| ಈಗಾಗಲೇ ಹೆಪಟೈಟಿಸ್‌ಗೆ ಬಳಸುವ ಔಷಧವಿದು


ನವದೆಹಲಿ(ಏ.24): ಕೊರೋನಾ ರೋಗಿಗಳ ಚಿಕಿತ್ಸೆಗೆ ಝೈಡಸ್‌ ಕ್ಯಾಂಡಿಲಾದ ‘ವಿರಾಫಿನ್‌’ ಔಷಧದ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ಅನುಮೋದನೆ ನೀಡಿದೆ.

ಈಗಾಗಲೇ ಹೆಪಟೈಸಿಸ್‌ ಬಿ ಹಾಗೂ ಹೆಪಟೈಸಿಸ್‌ ಸಿ ರೋಗಿಗಳಿಗೆ ವಿರಾಫಿನ್‌ ಬಳಕೆ ಅನೇಕ ವರ್ಷಗಳಿಂದ ಇದೆ. ಈಗ ಕೊರೋನಾ ರೋಗಿಗಳ ಚಿಕಿತ್ಸೆಗೆ ವಿರಾಫಿನ್‌ನ ಸಿಂಗಲ್‌ ಡೋಸ್‌ ಇಂಜೆಕ್ಷನ್‌ ಪರಿಣಾಮಕಾರಿ ಆಗಿದೆ ಎಂಬುದು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಸಾಬೀತಾಗಿದೆ. ಈ ಔಷಧವನ್ನು ಆರಂಭದಲೇ ತೆಗೆದುಕೊಳ್ಳುವುದರಿಂದ ರೋಗಿಗಳು ಗಂಭೀರ ಸ್ಥಿತಿಗೆ ತಲುಪುವುದನ್ನು ತಡೆಯಬಹುದಾಗಿದೆ. ಜೊತೆಗೆ ಆಸ್ಪತ್ರೆಗಳಲ್ಲಿ ಆಮ್ಲಜನಕಗಳ ಅಗತ್ಯತೆಯನ್ನೂ ಗಣನೀಯ ಪ್ರಮಾಭದಲ್ಲಿ ತಗ್ಗಿಸಲಿದೆ.

Latest Videos

‘ಭಾರತದ ವಿವಿಧೆಡೆಯ 20ರಿಂದ 25 ಕೇಂದ್ರಗಳಲ್ಲಿ ವಿರಾಫಿನ್‌ ಔಷಧವನ್ನು ಪ್ರಯೋಗಿಕವಾಗಿ ಬಳಕೆ ಮಾಡಿಲಾಗಿದ್ದು, ಈ ವೇಳೆ ಶೇ.91.15ರಷ್ಟುಕೊರೋನಾ ರೋಗಿಗಳಿಗೆ 7 ದಿನಗಳ ಒಳಗಾಗಿ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಈ ಔಷಧ ನೆರವಾಗಲಿದೆ’ ಎಂದು ಕ್ಯಾಡಿಲಾ ಹೆಲ್ತ್‌ಕೇರ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ| ಶಾರ್ವಿಲ್‌ ಪಟೇಲ್‌ ತಿಳಿಸಿದ್ದಾರೆ.

click me!