Asianet Suvarna News Asianet Suvarna News

ಅಪರಿಚಿತ ಮತ್ತೆ ಟ್ರೆಂಡ್, ಉಧಮಪುರ ಉಗ್ರ ದಾಳಿ ಮಾಸ್ಟರ್ ಮೈಂಡ್ ಪಾಕಿಸ್ತಾನದಲ್ಲಿ ಹತ್ಯೆ!

ಭಾರತಕ್ಕೇ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರು ವಿವಿಧ ದೇಶದಲ್ಲಿ ಅಪರಿಚಿತರ ದಾಳಿಗೆ ಹತ್ಯೆಯಾಗುತ್ತಿದ್ದಾರೆ. ಇದೀಗ Unknown Man ಮತ್ತೆ ಟ್ರೆಂಡ್ ಆಗಿದ್ದಾನೆ. ಪಾಕಿಸ್ತಾನದ ಕರಾಚಿಯಲ್ಲಿ ಭಾರತಕ್ಕೆ ಬೇಕಾದ, 2015ರ ಉಧಮಪುರ ಉಗ್ರ ದಾಳಿ ಮಾಸ್ಟರ್ ಮೈಂಡ್ ಹಂಝ್ಲ ಅದ್ನನ್ ಅಪರಿಚಿತರ ದಾಳಿಗೆ ಹತ್ಯೆಯಾಗಿದ್ದಾನೆ.

Udhampur Terror Attack master mind LET terrorist Hanzla Adnan shot dead in Karachi by Unknown Man ckm
Author
First Published Dec 6, 2023, 3:33 PM IST

ಕರಾಚಿ(ಡಿ.06) ಭಾರತದ ಮೇಲೆ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್‌ಗಳಿಗೆ ಇದೀಗ ಚಳಿಜ್ವರ ಆರಂಭಗೊಂಡಿದೆ. ಪಾಕಿಸ್ತಾನ, ಕೆನಡಾ, ಅಮೆರಿಕ ಸೇರಿದಂತೆ ವಿವಿಧ ದೇಶದಲ್ಲಿದ್ದುಕೊಂಡು ಭಾರತದ ಮೇಲೆ ದಾಳಿಗೆ ಸಂಚು ರೂಪಿಸುತ್ತಿರುವ ಮಾಸ್ಟರ್ ಮೈಂಡ್, ಉಗ್ರ ನಾಯಕರ ಒಬ್ಬರ ಹಿಂದೆ ಒಬ್ಬರು ಹತ್ಯೆಯಾಗುತ್ತಿದ್ದಾರೆ. ಇವರೆಲ್ಲ ವಿವಿಧ ದೇಶದಲ್ಲಿ ಅಪರಿಚಿತರ ದಾಳಿಗೆ ಬಲಿಯಾಗುತ್ತಿದ್ದಾರೆ. ಕಳೆದೊಂದು ವರ್ಷದಿಂದ 20ಕ್ಕೂ ಹೆಚ್ಚು ಮೋಸ್ಟ್ ವಾಂಟೆಡ್ ಉಗ್ರರು ಅಪರಿಚಿತರ ದಾಳಿಗೆ ಬಲಿಯಾಗಿದ್ದಾರೆ. ಇದೀಗ 2015ರ ಉಧಮಪುರ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಭಾರತದಲ್ಲಿ ನಡೆದ ಹಲವು ಉಗ್ರ ಚಟುವಟಿಕೆಗಳಿಗೆ ನೆರವು ನೀಡಿದ ಲಷ್ಕರ್ ಇ ತೈಬಾ ಭಯೋತ್ರಾದಕ ಹಂಝ್ಲ ಅದ್ನನ್ ಅಪರಿಚಿತರ ದಾಲಿಗೆ ಬಲಿಯಾಗಿದ್ದಾನೆ.

ಪಾಕಿಸ್ತಾನದ ಕರಾಚಿಯಲ್ಲಿ ಅಪರಿಚಿತರು ಹಂಝ್ಲಾ ಅದ್ನನ್ ಮನೆಯ ಹೊರಭಾಗದಲ್ಲೇ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಹಲವು ಸುತ್ತು ಗುಂಡಿನ ದಾಳಿ ನಡೆಸಿರುವ ಅಪರಿಚಿತರು ಹಂಝ್ಲಾನ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಾಕಿಸ್ತಾನ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತ ಪಾಕಿಸ್ತಾನ ಸೀಕ್ರೆಟ್ ಎಜೆಂಟ್ ಐಎಸ್ಐಗೂ ತಲೆನೋವು ಹೆಚ್ಚಾಗುತ್ತಿದೆ. ಒಬ್ಬೊಬ್ಬ ಉಗ್ರರು ಪಾಕಿಸ್ತಾನ ನೆಲದಲ್ಲಿ ಅಪರಿಚಿತರ ದಾಳಿಗೆ ಹತ್ಯೆಯಾಗುತ್ತಿದ್ದಾರೆ. ಇದು ಆತಂರಿಕ ಭದ್ರತೆಗೆ ಸವಾಲಾಗುತ್ತಿದೆ. 

 

ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಬಿಂದ್ರನ್‌ವಾಲೆ ಸಂಬಂಧಿ ಲಕ್ಬೀರ್ ಸಿಂಗ್ ಪಾಕಿಸ್ತಾನದಲ್ಲಿ ಮೃತ!

 ಈ ದಾಳಿ ಬೆನ್ನಲ್ಲೇ ಪಾಕಿಸ್ತಾನದಲ್ಲಿ ನೆಲೆಸಿರುವ ಬಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರಿಗೆ ಭಯ ಹೆಚ್ಚಾಗಿದೆ. ಇದೀಗ 26/11 ಮುಂಬೈ ದಾಳಿಯ ರೂವಾರಿ, ಎಲ್ಲಾ ನೆರವು ನೀಡಿ ಭಾರತಕ್ಕೆ ಉಗ್ರರನ್ನು ಕಳುಹಿಸಿದ ಲಷ್ಕರ್ ಇ ತೈಬಾ ಮುಖ್ಯಸ್ಥ ಹಫೀಜ್ ಸಯೀದ್‌ ಪಾಕಿಸ್ತಾನ ತೊರೆಯಲು ನಿರ್ಧರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 

ಜಮ್ಮು ಮತ್ತು ಕಾಶ್ಮೀರ ಉಧಮಪುರದಲ್ಲಿ ಬಿಎಸ್‌ಎಪ್ ಯೋಧರ ಕಾನ್ವಾಯ್ ಮೇಲೆ ಭೀಕರ ಉಗ್ರದಾಳಿಯಾಗಿತ್ತು. 2015ರಲ್ಲಿ ನಡೆದ ಈ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಯೋಧರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. 2016ರಲ್ಲಿ ಕಾಶ್ಮೀರದ ಪ್ಯಾಂಪೋರ್‌ನಲ್ಲಿನ ಸಿಆರ್‌ಎಫ್ ತರಬೇತಿ ಕೇಂದ್ರದ ಮೇಲೆ ಉಗ್ರ ದಾಳಿ ನಡೆದಿತ್ತು. ಈ ದಾಳಿಯಲ್ಲಿ 8 ಯೋಧರು ಮೃತಪಟ್ಟು, 22 ಯೋಧರು ಗಾಯಗೊಂಡಿದ್ದರು. ಈ ಎಲ್ಲಾ ದಾಳಿಯ ಮಾಸ್ಟರ್ ಮೈಂಡ್ ಇದೇ ಹಂಝ್ಲಾ ಅದ್ನನ್.

ಇತ್ತೀಚಗಷ್ಟೆ 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನಿ ಉಗ್ರ ಸಾಜಿದ್ ಮೀರ್‌ಗೆ ಪಾಕಿಸ್ತಾನದ ಡೇರಾ ಘಾಜಿ ಖಾನ್‌ ನಗರದ ಜೈಲಲ್ಲೇ ವಿಷವುಣಿಸಲಾಗಿದೆ. ಹೀಗಾಗಿ ಆತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೃಢೀಕರಿಸದ ವರದಿಗಳು ಹೇಳಿವೆ.ಕೆಲವು ತಿಂಗಳ ಹಿಂದೆ ಮೀರ್‌ನನ್ನು ಲಾಹೋರ್ ಸೆಂಟ್ರಲ್ ಜೈಲಿನಿಂದ ಡೇರಾ ಘಾಜಿ ಖಾನ್‌ನ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೇ ಆತನನ್ನು ವಿಷವುಣಿಸಲಾಗಿದೆ ಎನ್ನಲಾಗಿದೆ. ಪಾಕಿಸ್ತಾನಿ ಅಧಿಕಾರಿಗಳು ಈ ಹಿಂದೆ ಮೀರ್ ಸತ್ತಿದ್ದಾನೆ ಎಂದು ಹೇಳಿದ್ದರು. ಆದರೆ ಪಾಶ್ಚಿಮಾತ್ಯ ದೇಶಗಳು ಈ ಹೇಳಿಕೆ ಪ್ರಶ್ನಿಸಿ, ಆತನ ಸಾವಿಗೆ ಸಾಕ್ಷ್ಯ ನೀಡುವಂತೆ ಆಗ್ರಹಿಸಿದ್ದವು.

ಪಾಕ್‌ ಮಾಜಿ ಯೋಧರು ಈಗ ಉಗ್ರರು: ಐವರ ಬಲಿ ಪಡೆದ ರಜೌರಿ ದಾಳಿ ಹಿಂದೆ ಪಾಕ್ ಸೈನಿಕರು

Follow Us:
Download App:
  • android
  • ios