ಬೇರೆ ಧರ್ಮದ ಬಗ್ಗೆ ಮಾತನಾಡಲು ಧೈರ್ಯವಿದೆಯೇ?: ಉದಯನಿಧಿ ಸ್ಟಾಲಿನ್‌ ವಿರುದ್ಧ ನಿರ್ಮಲಾ ಸೀತಾರಾಮನ್‌ ಚಾಟಿ

By BK Ashwin  |  First Published Sep 17, 2023, 3:39 PM IST

ಸಚಿವರೊಬ್ಬರು ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದರ ಪರಿಣಾಮಗಳ ಬಗ್ಗೆ ಕೇಂದ್ರ ವಿತ್ತ ಸಚಿವೆ ಕಳವಳ ವ್ಯಕ್ತಪಡಿಸಿದರು. ಹಾಗೂ, ಬೇರೆ ಧರ್ಮಗಳ ಬಗ್ಗೆಯೂ ಹೀಗೆ ಮಾತನಾಡುವ ಧೈರ್ಯವಿದ್ಯಾ ಎಂದೂ ನಿರ್ಮಲಾ ಸೀತಾರಾಮನ್‌ ಪ್ರಶ್ನೆ ಮಾಡಿದರು.


ಚೆನ್ನೈ (ಸೆಪ್ಟೆಂಬರ್ 17, 2023): ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ಸನಾತನ ಧರ್ಮದ ವಿರುದ್ಧ ನೀಡಿದ ಹೇಳಿಕೆ ವಿರುದ್ಧ ಕೆಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಕಿಡಿ ಕಾರಿದ್ದಾರೆ. ಸಚಿವರೊಬ್ಬರು ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದರ ಪರಿಣಾಮಗಳ ಬಗ್ಗೆ ಕೇಂದ್ರ ವಿತ್ತ ಸಚಿವೆ ಕಳವಳ ವ್ಯಕ್ತಪಡಿಸಿದರು. ಹಾಗೂ, ಬೇರೆ ಧರ್ಮಗಳ ಬಗ್ಗೆಯೂ ಹೀಗೆ ಮಾತನಾಡುವ ಧೈರ್ಯವಿದ್ಯಾ ಎಂದೂ ನಿರ್ಮಲಾ ಸೀತಾರಾಮನ್‌ ಪ್ರಶ್ನೆ ಮಾಡಿದರು.

"ನೀವು (ಉದಯನಿಧಿ ಸ್ಟಾಲಿನ್) ಸಂವಿಧಾನದ ಪ್ರಕಾರ ಪ್ರಮಾಣ ವಚನ ಸ್ವೀಕರಿಸಿ ಸಚಿವರಾಗಿದ್ದೀರಿ. ಪ್ರಮಾಣ ವಚನದ ವೇಳೆ ಇತರರ ಭಾವನೆಗಳಿಗೆ ಧಕ್ಕೆ ತರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೀರಿ. ಅದು ನಿಮ್ಮ ಸಿದ್ಧಾಂತವಾಗಿದ್ದರೂ ಸಹ ನೀವು ಧರ್ಮವನ್ನು ನಾಶಪಡಿಸುತ್ತೀರಿ ಎಂದು ಹೇಳುವ ಅಧಿಕಾರ ನಿಮಗೆ ಇಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Tap to resize

Latest Videos

ಇದನ್ನು ಓದಿ: ಸನಾತನ ಧರ್ಮ ಆಯ್ತು, ಈಗ ರಾಮಚರಿತಮಾನಸ್‌ ವಿರುದ್ಧ I.N.D.I.A ಕೂಟ ವಾಗ್ದಾಳಿ: ಬಿಹಾರ ಶಿಕ್ಷಣ ಸಚಿವರ ವಿವಾದ

ಅದೇ ವೇದಿಕೆಯಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಸಚಿವ ಪಿ ಸೇಕರ್ ಬಾಬು ಅವರ ಉಪಸ್ಥಿತಿಯನ್ನು ಸಹ ಕೇಂದ್ರ ಹಣಕಾಸು ಸಚಿವೆ ಪ್ರಶ್ನಿಸಿದ್ದಾರೆ. "[ಹಿಂದೂ ದೇವಾಲಯಗಳನ್ನು] ನಾಶಪಡಿಸುವ ಉದ್ದೇಶದಿಂದ ಭಾಷಣ ಮಾಡುವಾಗ ನೀವು ಹೇಗೆ ಅದನ್ನು ರಕ್ಷಿಸುತ್ತೀರಿ? ನೀವು ಸಹ ಪ್ರಮಾಣ ವಚನ ಸ್ವೀಕರಿಸಿದ್ದೀರಿ ಮತ್ತು ದೇವಾಲಯದ ಹುಂಡಿಗಳಲ್ಲಿ (ಸಂಗ್ರಹ ಪೆಟ್ಟಿಗೆ) ಸನಾತನ ಹಿಂದೂಗಳು ನೀಡಿದ ದೇಣಿಗೆಯಿಂದ ತೃಪ್ತರಾಗಿದ್ದೀರಿ" ಎಂದೂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಉದಯನಿಧಿಯ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಸ್ವಾಮೀಜಿಯನ್ನು ಸಹ ನಿರ್ಮಲಾ ಸೀತಾರಾಮನ್ ಖಂಡಿಸಿದ್ದಾರೆ. ಅವರು ಅಹಿಂಸೆಯಲ್ಲಿ ತಮ್ಮ ನಂಬಿಕೆಯನ್ನು ಒತ್ತಿಹೇದ್ದು, "ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ ಎಂದು ನಾನು ದೃಢವಾಗಿ ನಂಬಿರುವಾಗ ಅಂತಹ ಕೃತ್ಯಗಳನ್ನು ನಾನು ಹೇಗೆ ಕ್ಷಮಿಸಬಲ್ಲೆ, ಅದು ಮಾತಿನಲ್ಲಾಗಲಿ ಅಥವಾ ಕ್ರಿಯೆಯಲ್ಲಿರಲಿ? ವೈವಿಧ್ಯತೆಯನ್ನು ಗೌರವಿಸುವುದು ಎಂದರೆ ಹಿಂಸೆಯಿಂದ ದೂರವಿರುವುದು’’ ಎಂದೂ ಕೇಂದ್ರ ಸಚಿವೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸನಾತನ ಧರ್ಮ ನಿರ್ಮೂಲನೆಗೆಂದೇ I.N.D.I.A ಬಣ ರಚಿಸಲಾಗಿದೆ: ಮತ್ತೊಬ್ಬ ಡಿಎಂಕೆ ಸಚಿವನ ವಿಡಿಯೋ ವೈರಲ್‌

ಅಲ್ಲದೆ, ಸನಾತನ ಧರ್ಮದ ಅನುಯಾಯಿಗಳ ವಿರುದ್ಧ ಇಂತಹ ದ್ವೇಷದ ಮಾತುಗಳು ಹೆಚ್ಚು ಪ್ರಚಲಿತದಲ್ಲಿ ಕಂಡುಬರುತ್ತವೆ ಏಕೆಂದರೆ ಅವರು ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದೂ ನಿರ್ಮಲಾ ಸೀತಾರಾಮನ್ ಸೂಚಿಸಿದರು. “ಇತರ ಧರ್ಮದವರ ಬಗ್ಗೆ ಈ ರೀತಿ ಕೆಟ್ಟದಾಗಿ ಮಾತನಾಡುವಷ್ಟು ಧೈರ್ಯ ಅವರಿಗಿಲ್ಲ, ಅವರು ಮಾಡುತ್ತಾರೋ ನೋಡೋಣ. ಬೇರೆ ಧರ್ಮಗಳಲ್ಲಿ ಸಮಸ್ಯೆ ಇಲ್ಲವೇ? ಇತರ ಧರ್ಮಗಳಲ್ಲಿ ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಳ್ಳುವುದಿಲ್ಲವೇ? ನೀವು ಅದರ ಬಗ್ಗೆ ಮಾತನಾಡುವ ಧೈರ್ಯ ಮಾಡುತ್ತೀರಾ? ನಿಮಗೆ ಧೈರ್ಯವಿದೆಯೇ?" ಎಂದೂ ತಮಿಳುನಾಡು ರಾಜಧಾನಿಯಲ್ಲಿ ನಿರ್ಮಲಾ ಸೀತಾರಾಮನ್‌ ಕಿಡಿ ಕಾರಿದ್ದಾರೆ. 

ಇದನ್ನೂ ಓದಿ: ರಾಹುಲ್‌ ಗಾಂಧಿ ಉತ್ತರ ಭಾರತದ ಪಪ್ಪು ಆದ್ರೆ ಉದಯನಿಧಿ ದಕ್ಷಿಣ ಭಾರತದ ಪಪ್ಪು: ಅಣ್ಣಾಮಲೈ ವ್ಯಂಗ್ಯ

click me!