ಕುಕು ಕಾಗೆಯನ್ನು ಮನೆಯ ಮಗುವಿನಂತೆಯೇ ಸಾಕ್ತಾರೆ ಈ ಮನೆಯ ಜನ

By Suvarna NewsFirst Published Dec 26, 2020, 1:46 PM IST
Highlights

ನಾಯಿ, ಬೆಕ್ಕು ಅಲ್ಲ, ಕರ್ಕಶವಾಗಿ ಕೂಗೋ ಕಾಗೆ ಈ ಮನೆಯ ನೆಚ್ಚಿನ ಸಾಕುಪ್ರಾಣಿ

ಮುಂಬೈ(ಡಿ.26): ಮನೆಯಲ್ಲಿ ನಾಯಿ ಅಥವಾ ಬೆಕ್ಕನ್ನು ಮುದ್ದಿನ ಪ್ರಾಣಿಯಾಗಿ ಸಾಕುತ್ತೇವೆ. ಆದರೆ, ಯಾರಾದರೂ ಶನಿಯ ರೂಪವಾಗಿರುವ ಕಾಗೆಯನ್ನು ತಮ್ಮ ಸಾಕುಪ್ರಾಣಿಯನ್ನಾಗಿ ಸಾಕಿದ್ದನ್ನು ನೋಡಿದ್ದೀರಾ?

ಮುಂಬೈನ ದಾದರ್‌ ಪ್ರದೇಶದಲ್ಲಿರುವ ಕುಟುಂಬವೊಂದು ತಮ್ಮ ಮನೆಯಲ್ಲಿ ಕಾಗೆಯೊಂದನ್ನು ಸಾಕುವ ಮೂಲಕ ಸುದ್ದಿಯಾಗಿದೆ. ಎರಡು ವರ್ಷದಿಂದ ಈ ಕಾಗೆ ಮನೆಯ ಸಂಗಾತಿ ಆಗಿದೆ. ಇತ್ತೀಚೆಗೆ ಕುಟುಂಬ ಸದಸ್ಯರು ಕಾಗೆಯೊಂದಿಗೆ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡಿದ್ದು, ವೈರಲ್‌ ಆಗಿದೆ.

ದಾವೂದ್‌ ಇಬ್ರಾಹಿಂ ಅಣ್ಣನ ಮಗ ಕೊರೋನಾ ವೈರಸ್‌ ಸೋಂಕಿಗೆ ಬಲಿ

ಈ ಕಾಗೆ ದಾದರ್‌ನ ಎಲ್ಲ ಮನೆಗೂ ಬರುತ್ತಾದರೂ ಗ್ರೇಸ್‌ ಫ್ಯಾಮಿಲಿಯ ಪರ್ಮನೆಂಟ್ ಸದಸ್ಯ ಇದು. ಕುಕು ಹೆಸರಿನ ಕಾಗೆ ಉಣ್ಣುತ್ತೆ, ಕುಡಿಯುತ್ತೆ, ನಿದ್ರೇನೂ ಮಾಡುತ್ತೆ. ಇದು ಒಂದೆರಡು ದಿನದ ವಿಷಯವಲ್ಲ, ಇದೇ ರೀತಿ ಕಳೆದ ಕೆಲವು ವರ್ಷದಿಂದ ಅದೇ ಮನೆಯಲ್ಲಿ ಮದುಕುತ್ತಿದೆ.

ಹಿಂದಿ ಮತ್ತು ಮರಾಠಿಯಲ್ಲಿ ಹೇಳೋ ಮುಖ್ಯ ಮಾತುಗಳನ್ನು ಅರ್ಥೈಸಿಕೊಳ್ಳುತ್ತೆ ಈ ಕಾಗೆ. ಪುಟ್ಟ ಮಗುವಿನಂತೆಯೇ ಕುಕುವನ್ನು ಮನೆಯ ಸದಸ್ಯರು ನೋಡಿಕೊಳ್ತಾರೆ. ಕುಕು ತನ್ನದೆ ರೀತಿಯಲ್ಲಿ ಮನೆಯವರ ಜೊತೆಗೆ ಮಾತನಾಡುತ್ತದೆ.

click me!