ದಾವೂದ್ ಇಬ್ರಾಹಿಂನ ಹಿರಿಯ ಸೋದರ ಸಬೀರ್ ಕಸ್ಕರ್ ಪುತ್ರ. ಸಿರಾಜ್ ಸಾವು | ತೀವ್ರ ಉಸಿರಾಟ ಸಮಸ್ಯೆ ಎದುರಿಸುತ್ತಿದ್ದ ಸಿರಾಜ್
ಕರಾಚಿ(ಡಿ.26): ಭೂಗತ ಪಾತಕಿ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಅಣ್ಣನ ಮಗ ಕೊರೋನಾ ಸೋಂಕು ತಗುಲಿ ಪಾಕಿಸ್ತಾನದ ಕರಾಚಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾನೆ ಎಂದು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಮಾಹಿತಿ ನೀಡಿದ್ದಾರೆ.
38 ವರ್ಷದ ಸಿರಾಜ್ ಕಸ್ಕರ್ ಎಂಬಾತನೇ ಸಾವಿಗೀಡಾದವ. ಈತ ದಾವೂದ್ ಇಬ್ರಾಹಿಂನ ಹಿರಿಯ ಸೋದರ ಸಬೀರ್ ಕಸ್ಕರ್ ಪುತ್ರ. ಸಿರಾಜ್ ಕಳೆದ ವಾರದಿಂದ ಕೋವಿಡ್ ಸೋಂಕಿಗೆ ತುತ್ತಾಗಿ ತೀವ್ರ ಉಸಿರಾಟ ಸಮಸ್ಯೆ ಎದುರಿಸುತ್ತಿದ್ದ. ಕರಾಚಿ ಆಸ್ಪತ್ರೆಗೆ ದಾಖಲಿಸಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.
ಪಾತಕಿ ದಾವೂದ್‌ನ ಪೂರ್ವಜರ ಮನೆ ಸೇರಿ 6 ಆಸ್ತಿಗಳು ಹರಾಜು!
ಭಾರತದ ಭದ್ರತಾ ಏಜೆನ್ಸಿಗಳು ಸಂಶಯಾಸ್ಪದ ಕರೆಗಳ ಮೇಲೆ ನಿಗಾ ಇರಿಸಿದ್ದ ವೇಳೆ ಈ ವಿಷಯ ಗೊತ್ತಾಗಿದೆ. ಪಠಾಣ್ ಗ್ಯಾಂಗ್‌ನಿಂದ ಸಾವಿಗೀಡಾದ ಸಬೀರ್‌ನ ಏಕೈಕ ಪುತ್ರ ಸಿರಾಜ್. ಮುಂಬೈನ ಅಂಡರ್‌ವಲ್ರ್ಡ್ ಇತಿಹಾಸದಲ್ಲಿ ಅಬೀರ್ ಮುಖ್ಯ ಹೆಸರಾಗಿತ್ತು.