Cyclone Arnab Updates: ಅರ್ನಬ್‌ ದಾಳಿಗೆ 5 ಬಲಿ; ಆಂಧ್ರ, ಒಡಿಶಾದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತ

Published : Oct 29, 2026, 10:14 AM IST
Cyclone Arnab Update

ಸಾರಾಂಶ

ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ಆಂಧ್ರದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಲಾ 20-26 ಸೆ.ಮೀನವರೆಗೆ ಭಾರೀ ಮಳೆ ಸುರಿದಿದ್ದು ಸಾಮಾನ್ಯ ಜನಜೀವನವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಹಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಸಾವಿರಾರು ಜನರು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಅಮರಾವತಿ/ಭುವನೇಶ್ವರ: ದೇಶದ ಪೂರ್ವ ಕರಾವಳಿ ರಾಜ್ಯಗಳಲ್ಲಿ ತೀವ್ರ ಆತಂಕ ಮೂಡಿಸಿದ್ದ ‘ಅರ್ನಬ್‌’ (ಬಂಗಾಳಿಯಲ್ಲಿ ಸಮುದ್ರ ಎಂದರ್ಥ) ಚಂಡಮಾರುತವು ಬುಧವಾರ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ್ದು, ವ್ಯಾಪಕ ನಷ್ಟವನ್ನು ಉಂಟುಮಾಡಿದೆ. ಒಡಿಶಾ, ಪುದುಚೇರಿ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ವ್ಯಾಪಕ ಮಳೆ ಸುರಿದಿದ್ದು, 5 ಜನ ಸಾವನ್ನಪ್ಪಿದ್ದಾರೆ. ಗಂಟೆಗೆ 120 ಕಿಮೀ ವೇಗದ ಬಿರುಗಾಳಿ ಬೀಸಿದ್ದು, ಮರ-ವಿದ್ಯುತ್‌ ಕಂಬಗಳು ಉರುಳಿ ಅಪಾರ ಹಾನಿ ಆಗಿದೆ.

ಆಂಧ್ರ ಕರಾವಳಿಗೆ ಅಪ್ಪಳಿಸಿದ ಬಳಿಕ ಚಂಡಮಾರುತ ದುರ್ಬಲ

ಭಾರೀ ತೀವ್ರತೆಯೊಂದಿಗೆ ಚಂಡಮಾರುತ ಅಪ್ಪಳಿಸಿದ ಪರಿಣಾಮ ಲಕ್ಷಾಂತರ ಮರ, ಸಾವಿರಾರು ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿವೆ. ಚಂಡಮಾರುತ ಸಂಬಂಧಿ ಅವಘಡಗಳಿಗೆ ರಾಜ್ಯದಲ್ಲಿ 5 ಜನ ಸಾವನ್ನಪ್ಪಿದ್ದು, ಸಾಮಾನ್ಯ ಜನಜೀವನಕ್ಕೆ ಅಡ್ಡಿಯಾಗಿದೆ.

ಬಂಗಾಳ, ಜಾರ್ಖಂಡ್‌, ತಮಿಳ್ನಾಡು, ಛತ್ತೀಸ್‌ಗಡದಲ್ಲೂ ಮಳೆ

ರಾಜ್ಯಾದ್ಯಂತ ವಾಹನ, ರೈಲು, ವಿಮಾನ ಸಂಚಾರಕ್ಕೆ ಅಡ್ಡಿಯಾಗಿದೆ. ಇದೇ ವೇಳೆ ನೆರೆಯ ಒಡಿಶಾದಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನಕ್ಕೆ ಅಡ್ಡಿಯಾಗಿದೆ. ಉಳಿದಂತೆ ತಮಿಳುನಾಡು, ಪಶ್ಚಿಮ ಬಂಗಾಳ ಜಾರ್ಜಂಡ್‌ ಮತ್ತು ಛತ್ತೀಸ್‌ಗಢದ ಹಲವು ಪ್ರದೇಶಗಳಲ್ಲೂ ಭಾರೀ ಮಳೆ ಸುರಿಯುತ್ತಿದೆ.

ಮುಂಜಾನೆ ದಾಳಿ

ಬುಧವಾರ ಮುಂಜಾವು 2 ಗಂಟೆಗೆ ಆಂಧ್ರ ಕರಾವಳಿ ಮೇಲೆ ಆರಂಭವಾದ ಚಂಡಮಾರುತ ಅಪ್ಪಳಿಸುವಿಕೆ ಬೆಳಗಿನ ಜಾವ 8 ಗಂಟೆಯವರೆಗೆ ನಡೆದು ಬಳಿಕ ಆಂಧ್ರಪ್ರದೇಶ ದಾಟಿ ಮುಂದೆ ಸಾಗಿದೆ. ಬಳಿಕ ಅರ್ನಬ್‌ನ ತೀವ್ರತೆ ಇಳಿಕೆ ಕಂಡಿದೆ.

ಭಾರೀ ಮಳೆ

ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ಆಂಧ್ರದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಲಾ 20-26 ಸೆ.ಮೀನವರೆಗೆ ಭಾರೀ ಮಳೆ ಸುರಿದಿದ್ದು ಸಾಮಾನ್ಯ ಜನಜೀವನವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಹಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಸಾವಿರಾರು ಜನರು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಾರೆ.

13 ಜಿಲ್ಲೆಗಳಿಗೆ ಪ್ರವಾಹ

ಇದೇ ವೇಳೆ 13 ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹದ ಎಚ್ಚರಿಕೆ ನೀಡಿದ್ದು, ತಗ್ಗು ಪ್ರದೇಶಗಳ ಜನರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.

ಬಿರುಗಾಳಿ ಭೀತಿ

ಚಂಡಮಾರುತದ ಪ್ರಭಾವದಿಂದ ನ.3ರವರೆಗೆ ಆಂಧ್ರಪ್ರದೇಶದಾದ್ಯಂತ ಭಾರೀ ಮಳೆ ಹಾಗೂ ಗುಡುಗು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗಂಟೆಗೆ 50ರಿಂದ 120 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಕರಾವಳಿ ತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದೆ. ಭಾರೀ ಮಳೆಗೆ ಉರುಳಿಬಿದ್ದ ವಿದ್ಯುತ್‌ ತಂತಿ ತಗುಲಿ ಮೂವರು, ಮರ ಬಿದ್ದು ಒಬ್ಬರು ಮತ್ತು ಗೋಡೆ ಕುಸಿದು ಒಬ್ಬರು ಸಾವನ್ನಪ್ಪಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೀಟಿಂಗ್ ನಡುವೆಯೂ ಮೊಮ್ಮಗನಿಗೆ ಮೊಬೈಲ್ ಕೊಟ್ಟ ಮುಕೇಶ್ ಅಂಬಾನಿ ವಿಡಿಯೋ ಸಖತ್ ವೈರಲ್
ಬಿನ್ ಲಾಡೆನ್ ಮುಗಿಸಲು ನೆರವಾದ ಬೆಲ್ಜಿಯಂ ನಾಯಿಗಳು ಈಗ ಮುಂಬೈ ಶ್ವಾನ ದಳಕ್ಕೆ! ಇವುಗಳ ಸ್ಪೆಷಾಲಿಟಿ ಏನು?