
ತೆಲಂಗಾಣ (ನ.15): ಸೈಬರ್ ವಂಚಕರು ತೆಲಂಗಾಣ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಕನ್ನ ಹಾಕಿದ್ದು, ಮಂಗಳವಾರ ಬೆಳಿಗ್ಗೆ ಸಿಬ್ಬಂದಿ ಅನಿಯಮಿತ ಚಟುವಟಿಕೆಯನ್ನು ಗಮನಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಹೈಕೋರ್ಟ್ ರಿಜಿಸ್ಟ್ರಾರ್ (ಐಟಿ) ಟಿ. ವೆಂಕಟೇಶ್ವರ ರಾವ್ ಅವರು ಕೂಡಲೇ ಪೊಲೀಸ್ ಮಹಾನಿರ್ದೇಶಕರಿಗೆ ಮಾಹಿತಿ ನೀಡಿ, ನ್ಯಾಯಾಲಯದ ವೆಬ್‌ಸೈಟ್ ಸೈಬರ್ ದಾಳಿ ಮಾಡಿರುವ ಬಗ್ಗೆ ವರದಿ ಮಾಡಿದ್ದಾರೆ.
ಸೈಬರ್ ವಂಚಕರು ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್ ಹ್ಯಾಕರ್‌ಗಳ ದಾಳಿ ಮಾಡಿ, ವೆಬ್‌ಸೈಟ್‌ನಲ್ಲಿ ಕಾನೂನು ದಾಖಲೆಗಳ ಬದಲಿಗೆ ಬಳಕೆದಾರರಗೆ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗೆ ತೋರಿಸಿದೆ. ನ್ಯಾಯಾಲಯದ ಆದೇಶಗಳ PDF ಪ್ರತಿಗಳನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸಿದಾ ಬಳಕೆದಾರರನ್ನು 'BDG SLOT' ಎಂಬ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗೆ ರಿಡೈರೆಕ್ಟ್ ಮಾಡುತ್ತಿದೆ. ಇದು ನ್ಯಾಯಾಂಗ ದತ್ತಾಂಶದ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನ್ಯಾಯಾಲಯದ ಪೋರ್ಟಲ್‌ನಲ್ಲಿ ತೀರ್ಪುಗಳ ಹೈಪರ್‌ಲಿಂಕ್‌ಗಳು ಈಗ ಅಕ್ರಮ ಜೂಜಿನ ಪುಟಗಳಿಗೆ ಸಂಬಂಧಿಸಿವೆ. ಕಾನೂನು ವೃತ್ತಿಪರರು ಮತ್ತು ಕಕ್ಷಿದಾರರು ಈ ಬದಲಾವಣೆ ಗುರುತಿಸಿ, ಡೇಟಾ ಲೀಕ್ ಅಥವಾ ಮಾಲ್‌ವೇರ್ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ದೂರು ಮತ್ತು ತನಿಖೆ ಆರಂಭ:
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸೈಬರ್ ಅಪರಾಧ ತಂಡ ಹ್ಯಾಕರ್‌ಗಳನ್ನು ಗುರುತಿಸಲು ಡಿಜಿಟಲ್ ಫೋರೆನ್ಸಿಕ್ ತನಿಖೆಯನ್ನು ಪ್ರಾರಂಭಿಸಲಾಗಿದೆ.
ತಜ್ಞರು ಹೇಳೂದೇನು?
ಹೆಚ್ಚಿನ ಈ ರೀತಿಯ ದಾಳಿಗಳು ಹಳೆಯ ಸಾಫ್ಟ್‌ವೇರ್ ಅಥವಾ ದುರ್ಬಲ ಪಾಸ್‌ವರ್ಡ್‌ಗಳಿಂದ ಸಾಧ್ಯವಾಗುತ್ತವೆ ಎಂದು ಸೈಬರ್ ತಜ್ಞರು ಹೇಳುತ್ತಾರೆ. ಇದರಿಂದ ಹ್ಯಾಕರ್‌ಗಳು ಅಪಾಯಕಾರಿ ಲಿಂಕ್‌ಗಳನ್ನು ಹಾಕಿರುವ ಸಾಧ್ಯತೆಯಿದೆ.. ಆನ್‌ಲೈನ್ ಜೂಜಾಟ ಹಗರಣಗಳು ತಲೆ ಎತ್ತುತ್ತಿರುವ ಈ ಪ್ರದೇಶದಲ್ಲಿ, ಸರ್ಕಾರಿ ವೆಬ್‌ಸೈಟ್‌ಗಳ ಭದ್ರತೆ – ವಿಶೇಷವಾಗಿ ಕಾನೂನು ಸಂಬಂಧಿತ ವೆಬ್‌ಸೈಟ್‌ಗಳ ಸುರಕ್ಷತೆ ಬಗ್ಗೆ ಈ ಘಟನೆ ಹೊಸ ಚರ್ಚೆ ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ