Wayanad Landslide: ಆರೆಸ್ಸೆಸ್‌ನ ರಕ್ಷಣಾ ಕಾರ್ಯಕ್ಕೆ ಕ್ರಿಶ್ಚಿಯನ್‌ ಸಮುದಾಯದಿಂದ ಮೆಚ್ಚುಗೆ

By Santosh Naik  |  First Published Aug 5, 2024, 1:54 PM IST

ವಯನಾಡ್‌ನ ಮೆಪ್ಪಾಡಿಯಲ್ಲಿರುವ ಕ್ರಿಶ್ಚಿಯನ್ ಸೇವಾ ಸಂಸ್ಥೆ (ಸಿಎಸ್‌ಐ) ಆಲ್ ಇಮ್ಯಾನ್ಯುಯೆಲ್ ಚರ್ಚ್ ಪಾದ್ರಿ ಸೇವಾಭಾರತಿಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘನೆ ಮಾಡಿದ್ದಾರೆ. ಸಂಘ-ಪ್ರೇರಿತ ಸಂಸ್ಥೆ ವಿಪತ್ತಿನ ಸಮಯದಲ್ಲಿ ಸೇವೆಗೆ ಹೆಸರುವಾಸಿಯಾಗಿದೆ. 


ಮೆಪ್ಪಾಡಿ (ಆ.5): ಏಕತೆ ಮತ್ತು ನಿಸ್ವಾರ್ಥತೆಯ ಹೃದಯಸ್ಪರ್ಶಿ ಕ್ಷಣ ಎನ್ನುವಂತೆ  ವಯನಾಡಿನ ಮೆಪ್ಪಾಡಿಯಲ್ಲಿರುವ ಕ್ರಿಶ್ಚಿಯನ್ ಸೇವಾ ಸಂಸ್ಥೆ (ಸಿಎಸ್‌ಐ) ಆಲ್ ಇಮ್ಯಾನ್ಯುಯೆಲ್ ಚರ್ಚ್‌ನ ಪಾದ್ರಿ, ಭೂಕುಸಿತದ ಸಂದರ್ಭದಲ್ಲಿ ಸಂಘ ಪ್ರೇರಿತ ಸಂಸ್ಥಯಾದ ಸೇವಾಭಾರತಿಯ ಅವಿರತ ಪ್ರಯತ್ನಗಳನ್ನು ಮುಕ್ತಕಂಠದಿಂದ ಸಾರ್ವಜನಿಕವಾಗಿ ಶ್ಲಾಘನೆ ಮಾಡಿದ್ದಾರೆ. ವಿಪತ್ತಿನ ಸಮಯದಲ್ಲಿ ತನ್ನ ಮಾನವೀಯ ರಕ್ಷಣಾ ಕೆಲಸಗಳ ಕಾರಣಕ್ಕೆ ಸೇವಾ ಭಾರತಿ ಪ್ರಸಿದ್ಧವಾಗಿದೆ. ವಯನಾಡ್‌ನಲ್ಲಿ ಭೀಕರ ಭೂಕುಸಿತ ಸಂಭವಿಸಿ ಸರಿಸುಮಾರಿ 400 ಜನರನ್ನು ಬಲಿ ಪಡೆದುಕೊಂಡಿದೆ. ಈಗಲೂ ಕೂಡ ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಈ ಹಂತದಲ್ಲಿ ಸೇವಾ ಭಾರತಿ ಮಾಡಿರುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ತನ್ನ ಸೇವೆ ಹಾಗೂ ಅಚಲ ಬದ್ಧತೆಯ ಕಾರಣಕ್ಕಾಗಿ ಸೇವಾ ಭಾರತಿ ದೀರ್ಘಕಾಲದಿಂದ ಗೌರವಿಸಲ್ಪಟ್ಟ ಸಂಸ್ಥೆಯಾಗಿದೆ. ಯಾವುದೇ ವಿಪತ್ತು ಸಂಭವಿಸಿದರೂ, ಮೊದಲಿಗರಾಗಿ ಸ್ಪಂದನೆ ನೀಡುವ ಸಂಸ್ಥೆ ಎನಿಸಿಕೊಂಡಿದೆ.

ಅದೇ ರೀತಿ ವಯನಾಡ್‌ ಭೂಕುಸಿತ ಸಂಭವಿಸಿದಾದರೂ, ಮೊದಲ ದಿನವೇ ಸೇವಾ ಭಾರತಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದರು. ಭೂಕುಸಿತದಲ್ಲಿ ಬದುಕುಳಿದವರ ರಕ್ಷಣೆ ಬಳಿಕ, ರಕ್ಷಣಾ ತಂಡಗಳು ಹುಡುಕಿದ ಮೃತದೇಹಗಳನ್ನು ಸೂಕ್ತವಾಗಿ ಇಡುವ ಕೆಲಸಗಳನ್ನು ಸೇವಾ ಭಾರತಿ ಕಾರ್ಯಕರ್ತರು ಮಾಡಿದ್ದರು. ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಕೇರಳ ಪೊಲೀಸ್ ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ನೇತೃತ್ವದ ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡುವಲ್ಲಿ ಪ್ರಮುಖವಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಯಾರ ನಿರ್ದೇಶನಕ್ಕೂ ಕಾಯದೆ ಸ್ವಯಂಪ್ರೇರಿತವಾಗಿ ಸೇವಾ ಭಾರತಿಯ ಕಾರ್ಯಕರರ್ತರು ಸ್ಥಳಕ್ಕೆ ಬಂದಿದ್ದರು.

Tap to resize

Latest Videos

ವಿಕಾರ್ ಫಾ. ಪಿ.ವಿ. ಚೆರಿಯನ್‌, ಸೇವಾ ಭಾರತಿಗೆ ನೀಡಿದ ಪ್ರಶಂಸೆ ಗಮನಾರ್ಹವಾಗಿದೆ. ಸೇವಾ ಭಾರತಿ ಕಾರ್ಯಕರ್ತರು ತಾತ್ಕಾಲಿಕವಾಗಿ ಉಳಿದುಕೊಂಡಿದ್ದರು. ಅದಲ್ಲದೆ, ತಮ್ಮ ವಸ್ತುಗಳನ್ನು ಇರಿಸಿಕೊಳ್ಳಲು ಆವರಣವನ್ನು ಬಳಸುವಲ್ಲೂ ಬಹಳ ಶಿಸ್ತು ತೋರಿದಿದ್ದರು. ಸೇವಾ ಭಾರತಿಯ ಬಗ್ಗೆ ನನ್ನ ಗ್ರಹಿಕೆ ಬದಲಾಗಿದೆ. ಸಂಕಷ್ಟದ ಸಮಯದಲ್ಲಿ ಸಂಸ್ಥೆಯ ಮಾದರಿ ನಡವಳಿಕೆಯನ್ನು ಪ್ರತಿಬಿಂಬಿಸುತ್ತದೆ, ವೃತ್ತಿಪರತೆ,  ಮತ್ತು ಮಾನವೀಯತೆಯ ಅಪರೂಪದ ಮಿಶ್ರಣವನ್ನು ಉದಾಹರಿಸುತ್ತದೆ. ವಯನಾಡ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡುವ ವೇಳೆ ಸೇವಾ ಭಾರತಿಯ ಇಬ್ಬರು ಕಾರ್ಯಕರ್ತರು ಕೂಡ ಪ್ರಾಣ ಕಳೆದುಕೊಂಡರು. ಇದು ಈ ಸಂಘಟನೆಯ ಬದ್ಧತೆನ್ನು ಪ್ರದರ್ಶನ ಮಾಡಿದೆ.

ಮೆಕ್ಕಾ ಯಾತ್ರೆಗೆ ಕೂಡಿಟ್ಟ 5 ಲಕ್ಷ ರೂ. ಆರೆಸ್ಸೆಸ್‌ಗೆ ನೀಡಿದ ಮಹಿಳೆ!

ಹಾಗಂತ ಸೇವಾ ಭಾರತಿಯ ಇಂಥ ಕಾರ್ಯಗಳು ಇದು ಮೊದಲೇನಲ್ಲ. 2004ರ ಡಿಸೆಂಬರ್‌ನಲ್ಲಿ ಎರಗಿದ ಸುನಾಮಿ ಹಾಗೂ 2018ರ ಕೇರಳ ಪ್ರವಾಹದ ಸಂದರ್ಭದಲ್ಲಿಯೂ ಸೇವಾ ಭಾರತಿ ತನ್ನ ಕೆಲಸದಿಂದಲೇ ಮೆಚ್ಚುಗೆ ಸಂಪಾದನೆ ಮಾಡಿತ್ತು. 2016ರ ಏಪ್ರಿಲ್‌ನಲ್ಲಿ ಕೊಲ್ಲಂನಲ್ಲಿ ದೇವಸ್ಥಾನಕ್ಕೆ ಬೆಂಕಿ ಬಿದ್ದು 111 ಮಂದಿ ಸಾವಿಗೀಡಾದಾಗಲೂ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿತ್ತು. ವಯನಾಡ್‌ನಲ್ಲೂ ಸೇವಾ ಭಾರತಿಯ ಕಾರ್ಯಕರ್ತರು ಕೊಳೆತ ಶವಗಳ ಸಂಸ್ಕಾರವನ್ನೂ ಮಾಡಿದ್ದಾರೆ. 2016 ಹಾಗೂ 2018ರ ದುರಂತದಲ್ಲೂ ಸೇವಾ ಭಾರತಿ ಇದೇ ಕೆಲಸವನ್ನು ಮಾಡಿತ್ತು.

‘ಸಮಾಜವಾದಿ’ ಮುಖಂಡನಿಂದ RSSಗೆ ಕೋಟಿ ಕೋಟಿ ದಾನ: ಸಂಘಟನೆಯ ಗುಣಗಾನ!

click me!