
ಶ್ರೀನಗರ(ಡಿ.11): ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಜೋರಾಗಿದೆ. ಅದರಲ್ಲೂ ಅಸ್ಸಾಂ ರಾಜ್ಯದಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದೆ.
ಈ ಹಿನ್ನೆಲೆಯಲ್ಲಿ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯ ಜವಾಬ್ದಾರಿ ಹೊತ್ತಿದ್ದ CRPF,ಇದೀಗ ಅಸ್ಸಾಂ ರಾಜ್ಯದತ್ತ ಪಯಣ ಬೆಳೆಸಿದೆ.
ಕೆಲವರ ನಾಲಿಗೆ ಮೇಲೆ ಪಾಕ್ ಕುಣಿದಾಡುತ್ತಿದೆ: ಪ್ರಧಾನಿ ಮೋದಿ!
ಅಸ್ಸಾಂ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರ ತಹಬದಿಗೆ ತರಲು CRPFನ ಸುಮಾರು 20 ತುಕಡಿಗಳನ್ನು ಕಣಿವೆ ರಾಜ್ಯದಿಂದ ಕರೆಸಿಕೊಳ್ಳಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ CRPF ತುಕಡಿಗಳನ್ನು ಅಸ್ಸಾಂ ರಾಜ್ಯಕ್ಕೆ ರವಾನಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ.
CRPF ಯೋಧರನ್ನು ಅಸ್ಸಾಂಗೆ ರವಾನಿಸಲು ವಿಶೇಷ ರೈಲನ್ನು ಓಡಿಸಲು ರೈಲ್ವೇ ಇಲಾಖೆ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಇವುಗಳಲ್ಲಿ ಮೂರರು ತುಕಡಿಗಳನ್ನು ದಿಸ್‌ಪುರ್‌ನಿಂದ ಮಣಿಪುರಕ್ಕೆ ರವಾನಿಸಲು ಗೃಹ ಇಲಾಖೆ ನಿರ್ಧರಿಸಿದೆ.
ಅಮಿತ್ ಶಾ CAB: ವಾಷಿಂಗ್ಟನ್ ಟು ದಿಲ್ಲಿ, ಪಿಕ್ಚರ್ ಅಬಿ ಬಾಕಿ ಹೈ....!
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಎನ್‌ಆರ್‌ಸಿ ಜಾರಿಯಿಂದ ಖುಷಿಯಾಗಿದ್ದ ಅಸ್ಸಾಂ ಇದೀಗ CAB ಜಾರಿಯಿಂದ ಉದ್ವಿಗ್ನಗೊಂಡಿರುವುದು ವಿಪರ್ಯಾಸ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ