ಯೋಧರ ನೆರವಿನಿಂದ ಮೆಟ್ರೋ ನಿಲ್ದಾಣದಲ್ಲಿ ಪೋಷಕರ ಮಡಿಲು ಸೇರಿದ ಬಾಲಕ, ಕಣ್ಣೀರಿಟ್ಟ ತಾಯಿ

Published : Sep 28, 2026, 04:27 PM IST
Delhi Metro Viral Video | 'Don’t Worry, We Are Here’: CISF Jawan Helps Lost Little Boy Find His Parents (WATCH)

ಸಾರಾಂಶ

ಪ್ರಯಾಣದ ವೇಳೆ ತಂದೆ ತಾಯಿಯಿಂದ ಅಚಾನಕ್ಕಾಗಿ ಬಾಲಕ ಬೇರ್ಪಟ್ಟಿದ್ದಾನೆ. ಬಾಲಕನ ಗಮನಿಸಿದ CISF ಯೋಧರು ನೆರವಿಗೆ ಬಂದಿದ್ದಾರೆ. ಮಗು ಮರಳಿ ಸಿಗುತ್ತಿದ್ದಂತೆ ತಾಯಿ ಬಿಗಿದಪ್ಪಿ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಯೋಧರು ಹೇಳಿದ ಮಾತು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ನವದೆಹಲಿ (ಸೆ.28) ಮೆಟ್ರೋ ಪ್ರಯಾಣದ ಸಂಚಾರ ದಟ್ಟಣೆ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ನಿಲ್ದಾಣ, ಮೆಟ್ರೋ ಹತ್ತುವಾಗ, ಇಳಿಯುವಾಗ ಪ್ರಯಾಣಿಕರು ತುಂಬಿರುತ್ತಾರೆ. ಹೀಗೆ ಅವರಸರದ ಪ್ರಯಾಣದ ನಡುವೆ ಪೋಷಕರಿಂದ ಬಾಲಕನ ಬೇರ್ಪಟ್ಟಿದ್ದಾನೆ. ಮೆಟ್ರೋ ನಿಲ್ದಾಣದಲ್ಲಿ ಬಾಲಕ ಒಬ್ಬಂಟಿಯಾಗಿದ್ದಾನೆ. ಆತಂಕ,ಭಯದಲ್ಲಿ ಅಳುತ್ತಿದ್ದ ಬಾಲಕನ ಗಮನಿಸಿದ CISF ಯೋಧರು ನೆರವಿಗೆ ಧಾವಿಸಿದ್ದಾರೆ. ಪರಿಣಾಮ ಬಾಲಕನನ್ನು ಪೋಷಕರ ಮಡಿಲು ಸೇರಿಸಿದ್ದಾರೆ. ಬಾಲಕ ಪತ್ತೆಯಾಗುತ್ತಿದ್ದಂತೆ ಓಡೋಡಿ ಬಂದ ತಾಯಿ ಬಿಗಿದಪ್ಪಿ ಕಣ್ಣೀರಿಟ್ಟಿದ್ದಾರೆ. ಈ ವೇಳೆ CISF ಯೋಧ ಹೇಳಿದ ಮಾತು ಇದೀಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಅವರಸದ ಪ್ರಯಾಣದಲ್ಲಿ ಬಾಲಕ ಪೋಷಕರಿಂದ ಬೇರ್ಪಟ್ಟಿದ್ದಾನೆ. ಆತಂಕ, ಯಾರಲ್ಲಿ ಏನು ಕೇಳಬೇಕು ಅನ್ನೋದು ಗೊತ್ತಿಲ್ಲ. ಇತ್ತ ಪೋಷಕರಿಂದ ಬೇರ್ಪಟ್ಟು ತೀವ್ರ ಭಯದಿಂದ ನಲುಗಿದ ಬಾಲಕನ ಆತಂಕವನ್ನು CISF ಯೋಧರು ಗಮನಿಸಿದ್ದಾರೆ. ತಕ್ಷಣವೇ ಬಾಲಕನ ಬಳಿಗೆ ಬಂದಿದ್ದಾರೆ. ಮೊದಲೇ ಅಳುತ್ತಿದ್ದ ಬಾಲಕ CISF ಯೋಧರ ನೋಡಿ ಭಯ ಹೆಚ್ಚಾಗಿದೆ. ಆದರೆ CISF ಯೋಧರು ಬಾಲಕನ ಸಮಾಧಾನಿಸಿದ್ದಾರೆ. ತಂದೆ ತಾಯಿಯನ್ನು ಪತ್ತೆ ಹಚ್ಚಿ ಸೇರಿಸುವುದಾಗಿ ಭರವಸೆ ನೀಡಿದ್ದಾರೆ. ಕೆಲವೇ ಹೊತ್ತಲ್ಲಿ ಪೋಷಕರು ಇಲ್ಲಿಗೆ ಆಗಮಿಸುತ್ತಾರೆ, ಭಯ ಬೇಡ, ನಾವಿದ್ದೇವೆ ಎಂದು ಬಾಲಕನ ಜೊತೆಗೆ ನಿಂತಿದ್ದಾರೆ. ಬಳಿಕ ಬಾಲಕನಿಂದ ಪೋಷಕರ ಕುರಿತು ಮಾಹಿತಿ ಕಲೆಹಾಕಲು ಆರಂಭಿಸಿದ್ದಾರೆ. ಬಾಲಕನಿಗೆ ಪೋಷಕರ ಫೋನ್ ನಂಬರ್ ಗೊತ್ತಿಲ್ಲ. ಆದರೆ ಹೆಸರು, ವಿಳಾಸಗಳು ಗೊತ್ತಿದೆ. CISF ಯೋಧರು ತಕ್ಷಣವೇ ಮೆಟ್ರೋ ಸಿಬ್ಬಂದಿಗಳ ನೆರವಿನಿಂದ ಎಲ್ಲಾ ನಿಲ್ದಾಣಗಳಿಗೆ ಸೂಚನೆ ನೀಡಿದ್ದಾರೆ. ಪರಿಣಾಮ ಪೋಷಕರಿಗೆ ಮಾಹಿತಿ ಸಿಕ್ಕಿದೆ.

ಪೋಷಕರ ಮಡಿಲು ಸೇರಿದ ಬಾಲಕ

ಈ ಭಾವುಕ ಘಟನೆಯನ್ನು ರೋಶನ್ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಬಾಲಕ ಮೆಟ್ರೋ ನಿಲ್ದಾಣದಲ್ಲಿ ಆತಂಕದಿಂದ ನಿಂತಿದ್ದರೆ, ಆತನ ಜೊತೆಗೆ CISF ಯೋಧರು, ಮೆಟ್ರೋ ಸಿಬ್ಬಂದಿಗಳು ನಿಂತಿದ್ದಾರೆ. ಅತ್ತ ತಾಯಿ ಹಾಗೂ ತಂದೆ ಮೆಟ್ರೋದಲ್ಲಿ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಮೆಟ್ರೋದ ಬಾಗಿಲು ತೆರೆಯುವುದನ್ನೇ ಕಾಯುತ್ತಿದ್ದ ನಿಂತಿದ್ದ ಬಾಲಕನ ತಾಯಿ ನೇರವಾಗಿ ಓಡೋಡಿ ಬಂದಿದ್ದಾರೆ. ಯೋಧರ ಪಕ್ಕ ನಿಂತಿದ್ದ ಬಾಲಕ ಬಿಗಿದಪ್ಪಿ ಕಣ್ಣೀರಿಟ್ಟಿದ್ದಾರೆ. ಅತ್ತ ಬಾಲಕ ಕೂಡ ಪೋಷಕರನ್ನು ಕಂಡೊಡನೆ ಭಾವುಕನಾಗಿದ್ದಾನೆ. ಕಣ್ಣೀರಿಡುತ್ತಾ ತಾಯಿ ಯೋಧರಿಗೆ ಧನ್ಯವಾದ ಹೇಳಿದ್ದಾರೆ.

ನಾವಿರುವುದೇ ನಿಮ್ಮ ಸೇವೆಗಾಗಿ

ಓಡೋಡಿ ಬಂದ ತಾಯಿ ಕಣ್ಣೀರಿಡುತ್ತಾ ಬಾಲಕನ ಬಿಗಿದಪ್ಪಿದ್ದಾರೆ. ಈ ವೇಳೆ ಆತಂಕ ಪಡಬೇಡಿ, ಟೆನ್ಶನ್ ಮಾಡಿಕೊಳ್ಳಬೇಡಿ, ನಾವಿರುವುದೇ ನಿಮ್ಮ ಸೇವೆಗಾಗಿ ಎಂದು CISF ಯೋಧ ಪೋಷಕರಿಗೆ ಹೇಳಿದ್ದಾರೆ. ಒಂದೆಡೆ ಬಾಲಕ ಪೋಷಕರ ಮಡಿಲು ಸೇರಿದ ಆನಂದಬಾಷ್ಪ, ಮತ್ತೊಂದೆಡೆ ಯೋಧನ ಮಾತುಗಳು ವಿಡಿಯೋ ನೋಡಿದ ಹಲವರ ಕಣ್ಣಾಲಿ ತೇವಗೊಳಿಸಿದೆ. ಯೋಧರ ಮಾತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ ನೆರೆದಿದ್ದ ಮೆಟ್ರೋ ಸಿಬ್ಬಂದಿಗಳು, ಮಗನಿಗೆ ಪೋಷಕರ ಫೋನ್ ನಂಬರ್ ಹೇಳಿಕೊಂಡಿ. ಫೋನ್ ನಂಬರ್ ಇದ್ದರೆ ತ್ವರಿತವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಅಪಾಯದ ತೀವ್ರತೆ ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

"ChatGPT Astra ಗೆ ತಿರುಪತಿ ರೂಮ್ ಬುಕ್ ಮಾಡು ಎಂದ ಟೆಕ್ಕಿ! ಮುಂದೆ ನಡೆದಿದ್ದೇ ವೈರಲ್!"
ರಾಜಧಾನಿಯಲ್ಲಿ ನವೆಂಬರ್ 1ರಿಂದ ಖಾಸಗಿ, ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ವರ್ಕ್ ಫ್ರಮ್ ಕಡ್ಡಾಯ