ಹರ್ಯಾಣ(ಜೂ.11): ಕೀರ್ತಿ ಚಕ್ರ ಪಡೆದ ವೀರ ಯೋಧ, ಚೀತಾ ಎಂದೇ ಖ್ಯಾತಪಡೆದಿರುವ ಯೋಧ ಚೇತನ್ ಇದೀಗ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವ ಕಾರಣ ಚೇತನ್ ಹರಿಯಾಣದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
45 ವರ್ಷದ ಚೇತನ್ ಆರೋಗ್ಯ ಕಳೆದ 9 ದಿನಗಳಿಂದ ಕ್ಷೀಣಿಸಿದೆ. ಮೇ. 9 ರಂದು ಚೇತನ್ ಆಸ್ಪತ್ರೆ ದಾಖಲಾಗಿದ್ದಾರೆ. ಕೊರೋನಾ ಕಾರಣ ಆಮ್ಲಜನಕ ಪ್ರಮಾಣ ದಿಢೀರ್ ಕುಸಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತನ್ ಚೀತಾ ಆರೋಗ್ಯ ಸುಧಾರಣೆಗೆ ನಿಮ್ಮೆಲ್ಲರ ಪ್ರಾರ್ಥನೆ ಅಗತ್ಯ ಎಂದು ಪತ್ನಿ ಮನವಿ ಮಾಡಿದ್ದಾರೆ. ಚೇತನ್ ಆರೋಗ್ಯ ಕೊಂಚ ಸುಧಾರಿಸಿದೆ ಎಂದು ಏಮ್ಸ್ ಆಸ್ಪತ್ರೆಯ ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತರ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ ಚೇತನ್ ಚೀತಾ, ಕೊರೋನಾ ವಿರುದ್ಧವೂ ಗೆಲುವು ಸಾಧಿಸಲಿದ್ದಾರೆ. ಕೆಚ್ಚೆದೆಯ ಹೋರಾಟಗಾರ ಚೇತನ್ ಈ ಕೊರೋನಾ ಹೋರಾಟದಲ್ಲೂ ವಿಜಯಶಾಲಿಯಾಗಲಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ ಇರಲಿ ಎಂದು ಪತ್ನಿ ಹೇಳಿದ್ದಾರೆ.
ಫೆಬ್ರವರಿ 14, 2017ರಲ್ಲಿ ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾದ ಹಜಿನ್ ವಲಯದಲ್ಲಿ ನಡೆದ ಉಗ್ರರ ಎನ್‌ಕೌಂಟರ್‌ನಲ್ಲಿ ಚೇತನ್ ಪರಾಕ್ರಮ ಯಾರು ಮರೆತಿಲ್ಲ. ಉಗ್ರರ ಜೊತೆಗಿನ ಕಾಳಗದಲ್ಲಿ ಉಗ್ರರ 9 ಗುಂಡುಗಳು ಚೇತನ್ ಚೀತಾ ದೆೇಹ ಹೊಕ್ಕಿತ್ತು. ಆದರೂ ಹೋರಾಟ ಮಾಡಿ ಉಗ್ರರ ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದರು.
ಉಗ್ರರ ಸಂಹರಿಸಿದ ಚೇತನ್ ಚೀತಾಗೆ ಸರ್ಜರಿ ಮಾಡಲಾಗಿತ್ತು. 9 ಗುಂಡು ಹೊಕ್ಕರೂ ಸಾವನ್ನೇ ಗೆದ್ದು ಬಂದ ಚೇತನ್‌ಗೆ ಕೀರ್ತಿ ಚಕ್ರ ಗೌರವ ನೀಡಲಾಗಿದೆ.