ಕೋವಿಡ್‌ ಕೇಸು 9 ತಿಂಗಳ ಕನಿಷ್ಠ ಸಕ್ರಿಯ ಕೇಸು ಇಳಿಕೆ

By Kannadaprabha News  |  First Published Nov 17, 2021, 7:33 AM IST
  • ಕಳೆದ ಬೇಸಿಗೆಯಲ್ಲಿ ಅಬ್ಬರಿಸಿದ್ದ ಕೊರೋನಾ ಈಗ ಇಳಿಕೆ ಹಾದಿಯತ್ತ
  •  ದೇಶದಲ್ಲಿ ಹೊಸದಾಗಿ 8,865 ಪ್ರಕರಣಗಳು ದಾಖಲಾಗಿದ್ದು, ಇದು 287 ದಿನದ (9 ತಿಂಗಳ) ಕನಿಷ್ಠ ಸಂಖ್ಯೆ

ನವದೆಹಲಿ (ನ.17): ಕಳೆದ ಬೇಸಿಗೆಯಲ್ಲಿ ಅಬ್ಬರಿಸಿದ್ದ ಕೊರೋನಾ ಈಗ ಇಳಿಕೆ ಹಾದಿಯತ್ತ ಸಾಗಿದೆ. ಮಂಗಳವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 8,865 ಪ್ರಕರಣಗಳು ದಾಖಲಾಗಿದ್ದು, ಇದು 287 ದಿನದ (9 ತಿಂಗಳ) ಕನಿಷ್ಠ ಸಂಖ್ಯೆಯಾಗಿದೆ.

ಇನ್ನು ಕೋವಿಡ್‌ ಪ್ರಕರಣಗಳ ಸಂಖ್ಯೆ 9 ಸಾವಿರಕ್ಕಿಂತ ಕೆಳಗೆ ಇಳಿದಿದ್ದು, ಕೂಡ ಕಳೆದ 9 ತಿಂಗಳಲ್ಲಿ ಇದೇ ಮೊದಲು. ಅದೇ ರೀತಿ ಸಕ್ರಿಯ ಪ್ರಕರಣಗಳು ಸಹ 1.30 ಲಕ್ಷಕ್ಕೆ ಇಳಿದಿದ್ದು ಇದು ಒಂದೂವರೆ ವರ್ಷ (525 ದಿನದ) ಕನಿಷ್ಠವಾಗಿದೆ. ಸೋಮವಾರ ಒಂದೇ ದಿನ 11,971 ಸೋಂಕಿತರು ಗುಣಮುಖರಾಗಿದ್ದಾರೆ.

Latest Videos

undefined

ಆದರೆ, ಒಟ್ಟು 8865 ಕೇಸುಗಳ ಪೈಕಿ ಕೇರಳವೊಂದರಲ್ಲೇ 4547 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಕೇರಳದ 127 ಸಾವು ಸೇರಿ 197 ಸೋಂಕಿತರು ಬಲಿಯಾಗಿದ್ದಾರೆ.

ದೇಶದಲ್ಲಿ ದೈನಂದಿನ ಪಾಸಿಟಿವಿಟಿ ದರ ಶೇ. 0.38ರಷ್ಟುದಾಖಲಾಗಿದೆ. ಇದೂ ಸಹಾ ಒಂದೂವರೆ ವರ್ಷಗಳ ಕನಿಷ್ಠವಾಗಿದೆ. ಸತತ 39 ದಿನಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದೆ. ಈವರೆಗೆ ದೇಶದಲ್ಲಿ 112.97 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.

click me!