
ನವದೆಹಲಿ(ಮಾ.24): ಒಮಿಕ್ರೋನ್ ಹಾವಳಿ ಕಡಿಮೆಯಾಯ್ತು, ಇನ್ನೇನು 4ನೇ ಅಲೆ ಭೀತಿ ಇಲ್ಲ ಅನ್ನುವ ಹಂತದಲ್ಲೇ, ಹೊಸ ರೀತಿಯ ಕೋವಿಡ್ ರೂಪಾಂತರಿ ತಳಿಗಳ ಮಿಶ್ರಣದಿಂದ 4ನೇ ಅಲೆ ಬರುವ ಸಾಧ್ಯತೆಯಿದೆಯೇ ಹೊರತು ಒಮಿಕ್ರೋನ್‌ನಿಂದ ಹೊಸ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಕಡಿಮೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೂಡ ಕೊರೋನಾ ವೈರಸ್‌ನ ಬೇರೆ ಬೇರೆ ರೂಪಾಂತರಿಗಳ ಮಿಶ್ರ ತಳಿಯ ಮೇಲೆ ನಿಗಾ ವಹಿಸಿದೆ.
ಜಗತ್ತಿನಾದ್ಯಂತ ಈಗ ಕೋವಿಡ್ ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಆ ಪೈಕಿ ಅಮೆರಿಕ ಮತ್ತು ಇಸ್ರೇಲ್‌ನಲ್ಲಿ ಡೆಲ್ಟಾಹಾಗೂ ಒಮಿಕ್ರೋನ್ ರೂಪಾಂತರಿಗಳ ಮಿಶ್ರ ತಳಿ ಪತ್ತೆಯಾಗಿದೆ. ಇದು ಈ ಹಿಂದೆಯೇ ಪತ್ತೆಯಾಗಿ, ನಂತರ ಹೆಚ್ಚೇನೂ ಸುದ್ದಿ ಮಾಡದೆ ತೆರೆಯ ಮರೆಗೆ ಸರಿದ ರೂಪಾಂತರಿಯಾಗಿತ್ತು. ಇದೀಗ ಮತ್ತೆ ಹರಡತೊಡಗಿದೆ. ಹೀಗಾಗಿ ವಿಜ್ಞಾನಿಗಳು ಕೊರೋನಾದ ಹೊಸ ಹೊಸ ರೂಪಾಂತರಿಗಳು ಸೇರಿಕೊಂಡು ಹೊಸ ಮಿಶ್ರ ತಳಿಯೊಂದು ಮುಂದಿನ ಅಲೆಗಳನ್ನು ಸೃಷ್ಟಿಸಬಹುದು ಎಂದು ನಿರೀಕ್ಷಿಸಿದ್ದಾರೆ.
ಕೊರೋನಾ ಹೆಚ್ಚೆಚ್ಚು ಹರಡಿದಂತೆ ಹೊಸ ತಳಿಗಳು ಹುಟ್ಟಿಕೊಳ್ಳುವ ಸಾಧ್ಯತೆಗಳು ಕೂಡ ಹೆಚ್ಚುತ್ತವೆ. ಹೀಗೆ ಹುಟ್ಟಿಕೊಳ್ಳುವ ಅಥವಾ ಬೇರೆ ಬೇರೆ ತಳಿಗಳ ಮಿಶ್ರಣದಿಂದ ಹುಟ್ಟಿಕೊಳ್ಳುವ ಹೊಸ ರೂಪಾಂತರಿಗಳು ಈಗಾಗಲೇ ಕೋವಿಡ್ ಬಂದು ಹೋದವರಿಗೂ ಅಥವಾ ಲಸಿಕೆ ತೆಗೆದುಕೊಂಡವರಿಗೂ ಸೋಂಕು ಉಂಟುಮಾಡುವ ಶಕ್ತಿ ಹೊಂದಿರಬಹುದು. ಹೀಗಾಗಿ ಜೀನೋಮ್ ಸೀಕ್ವೆನ್ಸಿಂಗ್ ಮೂಲಕ ಹೊಸ ತಳಿಗಳ ಮೇಲೆ ನಿರಂತರವಾಗಿ ನಿಗಾ ಇರಿಸಿರಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಭಾರತದಲ್ಲಿ ಒಮಿಕ್ರೋನ್-ಡೆಲ್ಟಾರೂಪಾಂತರಿಗಳ ಮಿಶ್ರ ತಳಿ ಇನ್ನೂ ಪತ್ತೆಯಾಗಿಲ್ಲ. ಆದರೆ ಅಂತಹ ಮಿಶ್ರ ತಳಿಗಳ ಮೇಲೆ ಕಣ್ಣಿಡಬೇಕು. ಸದ್ಯ ದೇಶದಲ್ಲಿರುವ ಕೊರೋನಾ ಸೋಂಕಿನ ಶೇ.98ರಷ್ಟುಪಾಲು ಬಿಎ.2 ಒಮಿಕ್ರೋನ್ ತಳಿಯದ್ದಾಗಿದೆ. ಇನ್ನುಳಿದ ಪಾಲು ಬಿಎ.1 ಒಮಿಕ್ರೋನ್ ಆಗಿದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ