Supreme Court: ಇತರೆ ರಾಜ್ಯದ ಲಾಟರಿ ಮೇಲೆ ತೆರಿಗೆಗೆ ಕರ್ನಾಟಕ ಸರ್ಕಾರಕ್ಕೆ ಹಕ್ಕಿದೆ

Kannadaprabha News   | Asianet News
Published : Mar 24, 2022, 02:30 AM IST
Supreme Court: ಇತರೆ ರಾಜ್ಯದ ಲಾಟರಿ ಮೇಲೆ ತೆರಿಗೆಗೆ ಕರ್ನಾಟಕ ಸರ್ಕಾರಕ್ಕೆ ಹಕ್ಕಿದೆ

ಸಾರಾಂಶ

ಇತರೆ ರಾಜ್ಯಗಳು ನಡೆಸುವ ಲಾಟರಿಗಳ ಮೇಲೂ ರಾಜ್ಯ ಶಾಸಕಾಂಗವು ತೆರಿಗೆಯನ್ನು ವಿಧಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ತಿಳಿಸಿದೆ. ಅನ್ಯ ರಾಜ್ಯಗಳ ಲಾಟರಿ ಮೇಲೆ ಕರ್ನಾಟಕ ಮತ್ತು ಕೇರಳ ಸರ್ಕಾರಗಳು ಹೇರಿದ್ದ ತೆರಿಗೆಯನ್ನು ವಿವಿಧ ರಾಜ್ಯಗಳು ಪ್ರಶ್ನಿಸಿದ್ದವು. ಇದನ್ನು ಉಭಯ ರಾಜ್ಯಗಳ ಹೈಕೋರ್ಟ್‌ ಎತ್ತಿಹಿಡಿದಿತ್ತು.

ನವದೆಹಲಿ (ಮಾ.24): ಇತರೆ ರಾಜ್ಯಗಳು ನಡೆಸುವ ಲಾಟರಿಗಳ (Lotteries) ಮೇಲೂ ರಾಜ್ಯ ಶಾಸಕಾಂಗವು (State Legislatures) ತೆರಿಗೆಯನ್ನು (Tax) ವಿಧಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್‌ (Supreme Court) ಬುಧವಾರ ತಿಳಿಸಿದೆ. ಅನ್ಯ ರಾಜ್ಯಗಳ ಲಾಟರಿ ಮೇಲೆ ಕರ್ನಾಟಕ (Karnataka) ಮತ್ತು ಕೇರಳ (Kerala) ಸರ್ಕಾರಗಳು ಹೇರಿದ್ದ ತೆರಿಗೆಯನ್ನು ವಿವಿಧ ರಾಜ್ಯಗಳು ಪ್ರಶ್ನಿಸಿದ್ದವು. ಇದನ್ನು ಉಭಯ ರಾಜ್ಯಗಳ ಹೈಕೋರ್ಟ್‌ (High Court) ಎತ್ತಿಹಿಡಿದಿತ್ತು. ಇದನ್ನು ಉಭಯ ರಾಜ್ಯಗಳು ಸುಪ್ರೀಂಕೋರ್ಟಲ್ಲಿ ಪ್ರಶ್ನಿಸಿದ್ದವು.

ಈ ಪ್ರಕರಣ ಕುರಿತು ಬುಧವಾರ ತೀರ್ಪು ನೀಡಿರುವ ನ್ಯಾ.ಎಂ.ಆರ್‌.ಶಾ ಹಾಗೂ ಬಿ.ವಿ. ನಾಗರತ್ನಾರನ್ನೊಳಗೊಂಡ ನ್ಯಾಯಪೀಠವು ‘ಭಾರತ ಸರ್ಕಾರ, ರಾಜ್ಯಗಳು ಹಾಗೂ ರಾಜ್ಯದಿಂದ ಅಧಿಕೃತಗೊಳಿಸಿದ ಅಥವಾ ಖಾಸಗಿ ಸಂಸ್ಥೆಗಳು ಲಾಟರಿಯನ್ನು ಘೋಷಿಸುವುದು ಬೆಟ್ಟಿಂಗ್‌ ಹಾಗೂ ಜೂಜಾಟದ ಪ್ರಕ್ರಿಯೆಯಡಿಯಲ್ಲಿ ಬರುತ್ತದೆ. ಹೀಗಾಗಿ ಭಾರತ ಸರ್ಕಾರ, ರಾಜ್ಯಗಳು ಹಾಗೂ ರಾಜ್ಯದಿಂದ ಅಧಿಕೃತಗೊಳಿಸಿದ ಅಥವಾ ಖಾಸಗಿ ಸಂಸ್ಥೆಗಳು ಘೋಷಿಸಿದ ಲಾಟರಿಗಳ ಮೇಲೆ ತೆರಿಗೆ ಹೇರುವ ಅಧಿಕಾರ ರಾಜ್ಯಕ್ಕಿದೆ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ ಈ ಹಿಂದೆ ಲಾಟರಿ ಮೇಲೆ ತೆರಿಗೆ ವಿಧಿಸುವುದಕ್ಕೆ ತಡೆಯೊಡ್ಡಿದ ಕರ್ನಾಟಕ ಹಾಗೂ ಕೇರಳ ಹೈಕೋರ್ಟಿನ ಆದೇಶವನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

Fake Covid Claims: ಕೋವಿಡ್‌ ಪರಿಹಾರಕ್ಕಾಗಿ ನಕಲಿ ದಾಖಲೆ, ಅಧಿಕಾರಿಗಳೂ ಸಾಥ್‌!

ತಾಂತ್ರಿಕ ಒಪ್ಪಂದಗಳು, ಟೆಂಡರ್ ಗಳಲ್ಲಿ ಕೋರ್ಟ್ ಹಸ್ತಕ್ಷೇಪ ಬೇಡ: ತಾಂತ್ರಿಕ ಸಮಸ್ಯೆಗಳನ್ನು ಒಳಗೊಂಡಿರುವ ಒಪ್ಪಂದಗಳಲ್ಲಿ ನ್ಯಾಯಾಲಯಗಳು ಸುಮ್ಮನೆ ಮಧ್ಯಪ್ರವೇಶ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ, ಏಕೆಂದರೆ ಅಂತಹ ವಿಷಯಗಳ ಬಗ್ಗೆ ತೀರ್ಪು ನೀಡಲು ಅಗತ್ಯವಾದ ಪರಿಣತಿಯ ಅವಶ್ಯಕತೆಯಿರುತ್ತದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮಸುಬ್ರಮಣಿಯನ್ ಅವರ ಪೀಠವು ರಾಜ್ಯದ ಇಂದಿನ ಆರ್ಥಿಕ ಚಟುವಟಿಕೆಗಳ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ನ್ಯಾಯಾಲಯಗಳಿಗೆ ಪರಿಣತಿಯನ್ನು ಹೊಂದಿಲ್ಲ ಮತ್ತು ಅಂತಹ ಒಪ್ಪಂದಗಳು / ಟೆಂಡರ್‌ಗಳಿಂದ ಉಂಟಾಗುವ ಪ್ರಕರಣಗಳನ್ನು ವ್ಯವಹರಿಸುವಾಗ ಈ ಮಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದೆ. ಆದ್ದರಿಂದ, ಸಾರ್ವಜನಿಕ ಒಳಿತಿಗಾಗಿ ಉದ್ದೇಶಿಸಿರುವ ಸೇವೆಗಳು ಮತ್ತು ಯೋಜನೆಗಳನ್ನು ಹಳಿತಪ್ಪಿಸುವಂತಹ ವಿಷಯಗಳಲ್ಲಿ ಮಧ್ಯಂತರ ಆದೇಶಗಳನ್ನು ನೀಡಬಾರದು ಎಂದು ಪೀಠವು ಒತ್ತಿ ಹೇಳಿದೆ.

"ಸಾರ್ವಜನಿಕ ಸೇವೆಯ ಯಾವುದೇ ಒಪ್ಪಂದವನ್ನು ಲಘುವಾಗಿ ಮಧ್ಯಪ್ರವೇಶಿಸಬಾರದು ಮತ್ತು ಯಾವುದೇ ಸಂದರ್ಭದಲ್ಲಿ, ದೊಡ್ಡ ಸಾರ್ವಜನಿಕ ಒಳಿತಿಗಾಗಿ ಉದ್ದೇಶಿಸಲಾದ ಸೇವೆಗಳ ಸಂಪೂರ್ಣ ಪ್ರಕ್ರಿಯೆಯನ್ನು ಹಳಿತಪ್ಪಿಸುವ ಯಾವುದೇ ಮಧ್ಯಂತರ ಆದೇಶ ಇರಬಾರದು ಎಂಬ ಎಚ್ಚರಿಕೆಯನ್ನು ನಾವಿಲ್ಲಿ ಹೊಂದಿರಬೇಕು' ಎಂದು ನ್ಯಾಯಾಲಯವು ಹೇಳಿದೆ.ಟೆಂಡರ್‌ಗಳಲ್ಲಿ ಹೈಕೋರ್ಟ್‌ಗಳ ತಡೆಯಾಜ್ಞೆಗಳು ಅಥವಾ ಹಸ್ತಕ್ಷೇಪವು ಸಾರ್ವಜನಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಮತ್ತು ಅಂತಹ ಹಸ್ತಕ್ಷೇಪವು ರಾಜ್ಯದ ಮೇಲೆ ಹೆಚ್ಚುವರಿ ವೆಚ್ಚಗಳಿಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. 

Farm Law ಕೇಂದ್ರದ ಕೃಷಿ ಕಾಯ್ದೆ ರೈತ ಪರ, ಸುಪ್ರೀಂಗೆ ತಜ್ಞರ ಸಮಿತಿ ಅಧ್ಯಯನ ವರದಿ!

"ತಾಂತ್ರಿಕ ಸಮಸ್ಯೆಗಳನ್ನು ಒಳಗೊಂಡಿರುವ ಒಪ್ಪಂದಗಳಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯಗಳು ಹೆಚ್ಚು ಹಿಂಜರಿಯಬೇಕು ಏಕೆಂದರೆ ಅಂತಹ ವಿಷಯಗಳ ಬಗ್ಗೆ ತೀರ್ಪು ನೀಡಲು ಅಗತ್ಯವಾದ ಪರಿಣತಿಯ ಅವಶ್ಯಕತೆಯಿದೆ. ನ್ಯಾಯಾಲಯದ ವಿಧಾನವು ಅದರ ಕೈಯಲ್ಲಿ ಭೂತಗನ್ನಡಿಯಿಂದ ದೋಷವನ್ನು ಕಂಡುಹಿಡಿಯಬಾರದು, ಬದಲಿಗೆ ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಟೆಂಡರ್ ಷರತ್ತುಗಳ ಮೂಲಕ ಪರಿಗಣಿಸಲಾದ ಕಾರ್ಯವಿಧಾನವನ್ನು ಅನುಸರಿಸಿದೆಯೇ ಎಂಬುದನ್ನು ಮಾತರ ಪರಿಶೀಲಿಸಬೇಕು, ”ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು