ಸೋಂಕಿತರ ರಕ್ಷಿಸಲು ಆಗದೇ ನೊಂದು ವೈದ್ಯ ಆತ್ಮಹತ್ಯೆ!

By Suvarna NewsFirst Published May 3, 2021, 12:05 PM IST
Highlights

 ಕೊರೋನಾ ನಿಗ್ರಹದಲ್ಲಿ ಮುಂಚೂಣಿಯಲ್ಲಿ ತೊಡಗಿರುವ ವೈದ್ಯರು| ಸೋಂಕಿತರ ರಕ್ಷಿಸಲು ಆಗದೇ ನೊಂದು ವೈದ್ಯ ಆತ್ಮಹತ್ಯೆ

ನವದೆಹಲಿ(ಮೇ.03): ಕೊರೋನಾ ನಿಗ್ರಹದಲ್ಲಿ ಮುಂಚೂಣಿಯಲ್ಲಿ ತೊಡಗಿರುವ ವೈದ್ಯರು ಯಾವ ಮಟ್ಟಿಗೆ ಹತಾಶಗೊಂಡಿದ್ದಾರೆ ಎಂಬ ನಿದರ್ಶನ ಇಲ್ಲಿದೆ. ತಮ್ಮ ಕಣ್ಣೆದುರೇ ನಿತ್ಯ 5-6 ಸೋಂಕಿತರು ಸಾವನ್ನಪ್ಪುತ್ತಿರುವುದನ್ನು ನೋಡಲಾಗದೇ ದಿಲ್ಲಿಯ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.

"

ಮ್ಯಾಕ್ಸ್‌ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಕೆಲಸ ಮಾಡುವ ಸ್ಥಾನಿಕ ವೈದ್ಯ ಡಾ. ವಿವೇಕ್‌ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. ‘ಐಸಿಯುನಲ್ಲಿ ಅವಿರತ ಶ್ರಮದ ಬಳಿಕವೂ ಜನರ ಜೀವ ರಕ್ಷಣೆ ಮಾಡಲಾಗದೇ ನಾನು ನೊಂದಿದ್ದೇನೆ’ ಎಂದು ಅವರು ಆತ್ಮಹತ್ಯಾ ಪತ್ರ ಬರೆದಿದ್ದಾರೆ ಎಂದು ವರದಿಗಳು ಹೇಳಿವೆ.

ಡಾ. ವಿವೇಕ್‌ ಕೇವಲ 5 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು, ಅವರ ಪತ್ನಿ 2 ತಿಂಗಳ ಗರ್ಭಿಣಿ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!