ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ. ಆದರೆ, ನೀವು ಒಳಾಂಗಣ ಅಥವಾ ಹೊರಾಂಗಣದಲ್ಲಿ ಕಿಕ್ಕಿರಿದ ಜಾಗದಲ್ಲಿದ್ದಾಗ ಮಾಸ್ಕ್ ಬಳಸಿ . ಅದರಲ್ಲೂ, ಕೋಮಾರ್ಬಿಡಿಟಿ ಹೊಂದಿರುವ ಅಥವಾ ಹೆಚ್ಚಿನ ವಯಸ್ಸಿನವರಿಗೆ ಇದು ಹೆಚ್ಚು ಮುಖ್ಯವಾಗಿದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ವಿಶ್ವದ ಹಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು (COVID - 19 Cases) ಹೆಚ್ಚಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ (Central Government) ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಇಂದು ಸಭೆ ನಡೆಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ (Mansukh Mandaviya) ಅವರು ಉನ್ನತ ಮಟ್ಟದ ಸಭೆಯ (High Level Meeting) ಅಧ್ಯಕ್ಷತೆ ವಹಿಸಿದ್ದು, ಜನರಿಗೆ ಮಾಸ್ಕ್ (Mask) ಹಾಕಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇನ್ನು, ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ. ಆದರೆ, ನೀವು ಒಳಾಂಗಣ ಅಥವಾ ಹೊರಾಂಗಣದಲ್ಲಿ ಕಿಕ್ಕಿರಿದ ಜಾಗದಲ್ಲಿದ್ದಾಗ ಮಾಸ್ಕ್ ಬಳಸಿ . ಅದರಲ್ಲೂ, ಕೋಮಾರ್ಬಿಡಿಟಿ ಹೊಂದಿರುವ ಅಥವಾ ಹೆಚ್ಚಿನ ವಯಸ್ಸಿನವರಿಗೆ ಇದು ಹೆಚ್ಚು ಮುಖ್ಯವಾಗಿದೆ ಎಂದೂ ನೀತಿ ಆಯೋಗದ ಆರೋಗ್ಯ ಇಲಾಖೆಯ ಸದಸ್ಯ ಡಾ. ವಿ.ಕೆ. ಪಾಲ್, COVID ಕುರಿತು ಕೇಂದ್ರ ಆರೋಗ್ಯ ಸಚಿವರ ಸಭೆಯ ನಂತರ ಹೇಳಿಕೆ ನೀಡಿದ್ದಾರೆ.
"ಕೇವಲ 27-28% ಜನರು ಮಾತ್ರ ಮೂರನೇ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳಲು ನಾವು ಇತರರಿಗೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಮನವಿ ಮಾಡುತ್ತೇವೆ. ಮೂರನೇ ಲಸಿಕೆಯ ಪ್ರಮಾಣವನ್ನು ಕಡ್ಡಾಯವಾಗಿದೆ ಮತ್ತು ಎಲ್ಲರಿಗೂ ತೆಗೆದುಕೊಳ್ಳುವಂತೆ ಮಾರ್ಗದರ್ಶನ ನೀಡಲಾಗುತ್ತದೆ ಎಂದೂ ಡಾ. ವಿ.ಕೆ. ಪಾಲ್ ಹೇಳಿದ್ದಾರೆ.
ಇದನ್ನು ಓದಿ: Covid-19: ಚೀನಾದಲ್ಲಿ ಕೋವಿಡ್ ತೀವ್ರ ಉಲ್ಬಣ: ಬೆಂಗಳೂರಲ್ಲಿ ಮಾಸ್ಕ್ ಕಡ್ಡಾಯಕ್ಕೆ ಚಿಂತನೆ?
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀತಿ ಆಯೋಗ ಸದಸ್ಯರಾದ ಡಾ. ವಿ. ಕೆ ಪಾಲ್, ಕೋವಿಡ್-19 ವರ್ಕಿಂಗ್ ಗ್ರೂಪ್ NTAGIನ ಮುಖ್ಯಸ್ಥ ಡಾ. ಎನ್‌ಕೆ ಅರೋರಾ, ಐಸಿಎಂಆರ್ ಡಿಜಿ ಡಾ. ರಾಜೀವ್ ಬಹ್ಲ್, ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಡಾ. ರಾಜೇಶ್ ಗೋಖಲೆ, ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಡಿಜಿಎಚ್‌ಎಸ್ ಡಾ. ಅತುಲ್ ಗೋಯೆಲ್ ಅವರು ಉಪಸ್ಥಿತರಿದ್ದರು.
ಈ ಸಭೆಯ ನಂತರ ಟ್ವೀಟ್ ಮಾಡಿದ ಕೇಂದ್ರ ಸಚಿವರು, "ಕೆಲವು ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಇಂದು ಪರಿಸ್ಥಿತಿಯನ್ನು ಪರಿಶೀಲಿಸಿದ್ದೇವೆ. ಕೋವಿಡ್ ಇನ್ನೂ ಮುಗಿದಿಲ್ಲ. ನಾನು ಎಲ್ಲರನ್ನೂ ಎಚ್ಚರಿಕೆಯಿಂದ ಇರಲು ಮತ್ತು ಹೆಚ್ಚು ಕಣ್ಗಾವಲು ಸೂಚಿಸಿದ್ದೇನೆ. ನಾವು ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ಸಿದ್ಧರಿದ್ದೇವೆ.
ಇದನ್ನೂ ಓದಿ: ಕೋವಿಡ್ ಉಲ್ಬಣ: ಚೀನಾ ಆಸ್ಪತ್ರೆಗಳು ಹೌಸ್ ಫುಲ್..!
In view of the rising cases of in some countries, reviewed the situation with experts and officials today.
COVID is not over yet. I have directed all concerned to be alert and strengthen surveillance.
We are prepared to manage any situation. pic.twitter.com/DNEj2PmE2W
ಪ್ರಪಂಚದಾದ್ಯಂತ ಕೋವಿಡ್ - 19 ಪ್ರಕರಣಗಳಲ್ಲಿ ಹಠಾತ್ ಉಲ್ಬಣ
ಇನ್ನು, ಜಪಾನ್, ಯುಎಸ್ಎ, ಕೊರಿಯಾ, ಬ್ರೆಜಿಲ್ ಮತ್ತು ಚೀನಾದಲ್ಲಿ ಹಠಾತ್ ಪ್ರಕರಣಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ನೆಟ್‌ವರ್ಕ್ ಮೂಲಕ ಕೊರೊನಾ ರೂಪಾಂತರಗಳನ್ನು ಪತ್ತೆಹಚ್ಚಲು ಪಾಸಿಟಿವ್ ಪ್ರಕರಣದ ಮಾದರಿಗಳ ಸಂಪೂರ್ಣ ಜೀನೋಮ್ ಸೀಕ್ವೆನ್ಸ್ ಸಜ್ಜುಗೊಳಿಸುವುದು ಅತ್ಯಗತ್ಯ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. "ಇಂದು ನಾವು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸುತ್ತಿದ್ದೇವೆ. ಇತರ ದೇಶಗಳಲ್ಲಿ ಕೋವಿಡ್ ಪರಿಸ್ಥಿತಿ ಏನು ಮತ್ತು ಭಾರತಕ್ಕೆ ಏನು ಮಾಡಬೇಕು ಎಂದು ನಾವು ಪರಿಶೀಲಿಸುತ್ತೇವೆ. ಜೀನೋಮ್ ಸೀಕ್ವೆನ್ಸಿಂಗ್ ಮಾಡಲು ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ರಾಜ್ಯ ಖಾತೆಯ ಡಾ. ಬಿ. ಪವಾರ್ ಮಾಹಿತಿ ನೀಡಿದ್ದಾರೆ.