ಮುಂದಿನ ವರ್ಷ ದೇಶದ ಮೊದಲ ಹೈಡ್ರೋಜನ್‌ ಚಾಲಿತ ರೈಲಿಗೆ ಚಾಲನೆ

By Kannadaprabha News  |  First Published Dec 21, 2022, 11:49 AM IST

: ದೇಶೀಯವಾಗಿ ತಯಾರಿಸಲಾಗುತ್ತಿರುವ ಹೈಡ್ರೋಜನ್‌ ಚಾಲಿತ ರೈಲುಗಳನ್ನು ಮುಂದಿನ ವರ್ಷ ಡಿಸೆಂಬರ್‌ನಿಂದ ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ. ಈ ರೈಲುಗಳಿಗೆ ‘ವಂದೇ ಮೆಟ್ರೋ’ ಎಂದು ಹೆಸರಿಡಲಾಗಿದ್ದು, ಇವು 1950 ಮತ್ತು 60ರ ದಶಕಗಳಲ್ಲಿ ತಯಾರು ಮಾಡಲಾದ ರೈಲುಗಳನ್ನು ಬದಲಾಯಿಸಲಿವೆ ಎಂದು ಅವರು ಹೇಳಿದ್ದಾರೆ.


ನವದೆಹಲಿ: ದೇಶೀಯವಾಗಿ ತಯಾರಿಸಲಾಗುತ್ತಿರುವ ಹೈಡ್ರೋಜನ್‌ ಚಾಲಿತ ರೈಲುಗಳನ್ನು ಮುಂದಿನ ವರ್ಷ ಡಿಸೆಂಬರ್‌ನಿಂದ ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ. ಈ ರೈಲುಗಳಿಗೆ ‘ವಂದೇ ಮೆಟ್ರೋ’ ಎಂದು ಹೆಸರಿಡಲಾಗಿದ್ದು, ಇವು 1950 ಮತ್ತು 60ರ ದಶಕಗಳಲ್ಲಿ ತಯಾರು ಮಾಡಲಾದ ರೈಲುಗಳನ್ನು ಬದಲಾಯಿಸಲಿವೆ ಎಂದು ಅವರು ಹೇಳಿದ್ದಾರೆ.

ಈ ರೈಲುಗಳು (Train) ಹೇಗಿರಲಿವೆ ಎಂಬ ಡಿಸೈನ್‌ ಮುಂದಿನ ವರ್ಷ ಮೇ ಅಥವಾ ಜೂನ್‌ ವೇಳೆಗೆ ಲಭ್ಯವಾಗಲಿದೆ. ಈ ರೈಲುಗಳನ್ನು ಮಧ್ಯಮ ವರ್ಗ (middle class) ಮತ್ತು ಬಡ ಜನರನ್ನು ಆಧಾರವಾಗಿರಿಸಿಕೊಂಡು ಓಡಿಸಲಾಗುತ್ತದೆ. ಈ ರೈಲುಗಳನ್ನು ಬೃಹತ್‌ ಸಂಖ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ವಿಶ್ವಾದ್ಯಂತ ಹಲವು ದೇಶಗಳು ಇಂಧನ ಉಳಿತಾಯ ಹಾಗೂ ಹಸಿರು ಮನೆ ಅನಿಲಗಳನ್ನು ಕಡಿಮೆ ಮಾಡುವುದಕ್ಕಾಗಿ ಹೈಡ್ರೋಜನ್‌ ಬಳಕೆಯನ್ನು ಉತ್ತೇಜಿಸುತ್ತಿವೆ. ಈ ನಿಟ್ಟಿನಲ್ಲಿ ಭಾರತವೂ ಈ ರೈಲುಗಳನ್ನು ನಿರ್ಮಾಣ ಮಾಡುತ್ತಿದೆ ಎಂದಿದ್ದಾರೆ. ಆದರೆ, ಈ ರೈಲುಗಳು ನಗರ ಸಂಚಾರದ ರೈಲುಗಳಾ ಅಥವಾ ದೂರದ ಊರಿನ ರೈಲುಗಳಾ ಎಂಬುದನ್ನು ಅವರು ಹೇಳಿಲ್ಲ.

Tap to resize

Latest Videos

ದೇಶದ ಅತಿ ಉದ್ದದ ರೈಲ್ವೆ ಸುರಂಗ ನಿರ್ಮಾಣ ಪೂರ್ಣ

ದೇಶದಲ್ಲಿರುವ ಬಹುತೇಕ ರೈಲುಗಳು ಈಗ ವಿದ್ಯುತ್‌ ಅಥವಾ ಡೀಸೆಲ್‌ ಚಾಲಿತವಾಗಿವೆ. ಕಳೆದ ಆಗಸ್ಟ್‌ನಲ್ಲಿ ಜರ್ಮನಿ (Germany) ವಿಶ್ವದ ಮೊದಲ ಹೈಡ್ರೋಜನ್‌ ಚಾಲಿತ ರೈಲನ್ನು ಬಿಡುಗಡೆ ಮಾಡಿದೆ. ಈ ರೈಲುಗಳು ಯಾವುದೇ ಮಲಿನಕಾರಕಗಳನ್ನು ಬಿಡುಗಡೆ ಮಾಡುವುದಿಲ್ಲ. ಕೇವಲ ಆವಿ ಮತ್ತು ನೀರನ್ನು ಮಾತ್ರ ಬಿಡುಗಡೆ ಮಾಡಲಿವೆ. ಅಲ್ಲದೇ ಇವುಗಳಿಂದ ಉಂಟಾಗುವ ಶಬ್ದದ ಪ್ರಮಾಣ ಸಹ ಕಡಿಮೆ ಇರುತ್ತದೆ.

ವಂದೇ ಭಾರತ್ ರೈಲಿನ ಕಂಟಕ ನಿವಾರಿಸಲು 264 ಕೋಟಿ ರೂಪಾಯಿ ಖರ್ಚು!

click me!