ಭಾರತದ ಸ್ಥಿತಿ ಹೃದಯವಿದ್ರಾವಕ, ನೆರವು ನೀಡ್ತೇವೆ: ಕಮಲಾ!

By Kannadaprabha News  |  First Published May 8, 2021, 8:37 AM IST

ಕೋವಿಡ್‌: ಭಾರತಕ್ಕೆ ಅಮೆರಿಕ 732 ಕೋಟಿ ರು. ನೆರವು| 6 ವಿಮಾನಗಳಲ್ಲಿ ಜೀವ ರಕ್ಷಕ ಸಾಮಗ್ರಿಗಳ ರವಾನೆ| ಭಾರತದ ಸ್ಥಿತಿ ಹೃದಯವಿದ್ರಾವಕ, ನೆರವು ನೀಡ್ತೇವೆ: ಕಮಲಾ!


ವಾಷಿಂಗ್ಟನ್‌(ಮೇ.08): ಭಾರತದ ಕೊರೋನಾ ಪರಿಸ್ಥಿತಿ ಹೃದಯವಿದ್ರಾವಕವಾಗಿದೆ ಎಂದು ಹೇಳಿರುವ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌, ಭಾರತಕ್ಕೆ ನೆರವು ನೀಡಲು ಅಮೆರಿಕ ಕಟಿಬದ್ಧವಾಗಿದೆ ಎಂದು ಹೇಳಿದ್ದಾರೆ.

ಶುಕ್ರವಾರ, ಭಾರತಕ್ಕೆ ಕೊರೋನಾ ನೆರವು ನೀಡಲು ಮುಂದಾಗೊರುವ ಭಾರತೀಯ ಸಮುದಾಯ ಉದ್ದೇಶಿಸಿ ಮಾತನಾಡಿದ ಅವರು ಮಾತನಾಡಿದ ಅವರು, ‘ಅಮೆರಿಕದಲ್ಲಿ ಕೊರೋನಾ ಅಲೆ ಆರಂಭವಾದಾಗ ಭಾರತವು ಸಹಾಯ ನೀಡಿತ್ತು. ಈಗ ನಾವು ಕೂಡ ಭಾರತಕ್ಕೆ ನೆರವು ನೀಡಲು ಬದ್ಧವಾಗಿದೆ’ ಎಂದರು.

Latest Videos

undefined

ಭಾರತಕ್ಕೆ ಅಮೆರಿಕ 732 ಕೋಟಿ ರು. ನೆರವು

ಕೊರೋನಾ 2ನೇ ಅಲೆಯಿಂದ ತತ್ತರಿಸಿರುವ ಭಾರತಕ್ಕೆ ಅಮರಿಕ ನೆರವಿನ ಹಸ್ತಚಾಚಿದೆ. ಕಳೆದ ಆರು ದಿನಗಳ ಅವಧಿಯಲ್ಲಿ ಆರು ಸರಕು ಸಾಗಣೆ ವಿಮಾನಗಳ ಮೂಲಕ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿದೆ.

"

ಭಾರತ ಸರ್ಕಾರದ ಕೋರಿಕೆಯ ಹಿನ್ನೆಲೆಯಲ್ಲಿ ಅಮೆರಿಕ ಈ ನೆರವನ್ನು ನೀಡಿದ್ದು, 100 ಮಿಲಿಯನ್‌ ಡಾಲರ್‌ (732 ಕೋಟಿ ರು.) ವೈದ್ಯಕೀಯ ನೆರವನ್ನು ಒದಗಿಸಿದೆ. ಜೊತೆಗೆ ಭಾರತೀಯ ಅಧಿಕಾರಿಗಳ ಜೊತೆ ಅಮೆರಿಕ ನಿರಂತರ ಸಂಪರ್ಕದಲ್ಲಿದ್ದು, ಆರೋಗ್ಯ ತಜ್ಞರ ನೆರವನ್ನು ಒದಗಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಮೆರಿಕದಿಂದ ಭಾರತಕ್ಕೆ ರವಾನೆ ಆಗಿರುವ ವೈದ್ಯಕೀಯ ಸಾಮಗ್ರಿಗಳಲ್ಲಿ 20,000 ಕೋರ್ಸ್‌ ರೆಮ್‌ಡೆಸಿವಿರ್‌ (125,000 ಬಾಟಲ್‌ಗಳು), 1,500 ಆಮ್ಲಜನಕ ಸಿಲಿಂಡರ್‌ಗಳು, 550 ಮೊಬೈಲ್‌ ಆಕ್ಸಿಜನ್‌ ಕಾಂನ್ಸಟ್ರೇಟರ್‌ಗಳು, 10 ಲಕ್ಷ Rapid ಟೆಸ್ಟ್‌ ಕಿಟ್‌ಗಳು, 25 ಲಕ್ಷ ಮಾಸ್ಕ್‌ಗಳು ಹಾಗೂ ಬೃಹತ್‌ ಆಮ್ಲಜನಕ ಕಂಟೇನರ್‌ಗಳು ಸೇರಿವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!