ಮತ್ತೆ ದಾಖಲೆಯ 4.14 ಲಕ್ಷ ಕೇಸ್‌, ಒಂದೇ ದಿನ 3915 ಸಾವು!

By Kannadaprabha NewsFirst Published May 8, 2021, 8:20 AM IST
Highlights

ಮತ್ತೆ ದಾಖಲೆಯ 4.14 ಲಕ್ಷ ಕೇಸ್‌| ಒಂದೇ ದಿನ 3915 ಸಾವು| ಸಕ್ರಿಯ ಕೇಸ್‌ 36 ಲಕ್ಷಕ್ಕೇರಿಕೆ| ಚೇತರಿಕೆ ಪ್ರಮಾಣ ಶೇ.81.95ಕ್ಕೆ ಇಳಿಕೆ| ಒಟ್ಟು ಸೋಂಕು 2.14 ಕೋಟಿ| ಒಟ್ಟು ಸಾವು 2.34 ಲಕ್ಷ

ನವದೆಹಲಿ(ಮೇ.08): ಭಾರತದಲ್ಲಿ ಕೊರೋನಾ 2ನೇ ಅಲೆ ಆರ್ಭಟ ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದ್ದು, ಶುಕ್ರವಾರವೂ ಸೋಂಕು ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದಾಖಲೆಯ 4,14,188 ಕೇಸುಗಳು ವರದಿಯಾಗಿವೆ. ಇದೇ ವೇಳೆ 3915 ಸಾವು ಸಂಭವಿಸಿದೆ.

ಹೊಸ ಸೋಂಕಿನೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 36.45ಲಕ್ಷಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ ಶೇ.81.95ಕ್ಕೆ ಇಳಿಕೆಯಾಗಿದೆ.

"

ಒಟ್ಟು ಸೋಂಕಿತರ ಸಂಖ್ಯೆ 2.14 ಕೋಟಿಗೆ ಏರಿಕೆಯಾಗಿದ್ದರೆ, ಒಟ್ಟು ಸೋಂಕಿಗೆ ಬಲಿಯಾದವರ ಸಂಖ್ಯೆ 2,34,083ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 1.76 ಕೋಟಿ ಮಂದಿ ಗುಣಮುಖರಾಗಿದ್ದಾರೆ.

10 ರಾಜ್ಯಗಳಲ್ಲಿ 71% ಸೋಂಕು:

ಶುಕ್ರವಾರ ಪತ್ತೆಯಾಗಿರುವ ಹೊಸ ಪ್ರಕರಣಗಳ ಪೈಕಿ ಶೇ.71.81ರಷ್ಟುಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಕೇವಲ 10 ರಾಜ್ಯಗಳಲ್ಲಿ ದೃಢಪಟ್ಟಿದೆ. ಉತ್ತರಪ್ರದೇಶ, ದೆಹಲಿ, ಕೇರಳ, ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ರಾಜಸ್ಥಾನ ಉಳಿದ ರಾಜ್ಯಗಳು.

ಹಾಗೆಯೇ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ.81.04ರಷ್ಟುಕೇಸುಗಳು ಕರ್ನಾಟಕ ಸೇರಿ 12 ರಾಜ್ಯಗಳಲ್ಲಿವೆ. ಶುಕ್ರವಾರ ಸಾವಿಗೀಡಾದರ ಪೈಕಿ ಶೇ.74.48ರಷ್ಟುಸಾವು ಕೇವಲ 10 ರಾಜ್ಯಗಳಲ್ಲಿ ಸಂಭವಿಸಿದೆ. ಮಹಾರಾಷ್ಟ್ರವೊಂದರಲ್ಲಿಯೇ 853, ಉತ್ತರ ಪ್ರದೇಶದಲ್ಲಿ 350, ದೆಹಲಿಯಲ್ಲಿ 335, ಕರ್ನಾಟಕದಲ್ಲಿ 328, ಛತ್ತೀಸ್‌ಗಢದಲ್ಲಿ 212 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!