
ನವದೆಹಲಿ(ಜೂ. 16) ಕೊರೋನಾ ಮಹಾಮಾರಿ ಆರ್ಭಟದ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಜರಾತ್ ಮಾದರಿಯನ್ನು ಎಳೆದು ತಂದಿದ್ದಾರೆ. ಗುಜರಾತ್ ಮಾದರಿಯನ್ನು ಲೇವಡಿ ಮಾಡಿದ್ದಾರೆ, ಅದಕ್ಕೆ ಕಾರಣ ಕೊರೋನಾ ಸಾವಿನ ಪ್ರಮಾಣ.
ಮಾಧ್ಯಮವೊಂದರ ವರದಿ ಆಧರಿಸಿ ಟ್ವೀಟ್ ಮಾಡಿರುವ ರಾಹುಲ್ ಗುಜರಾತ್ ನಲ್ಲಿಯೇ ಅತಿ ಹೆಚ್ಚಿನ ಸಾವು ಸಂಭವಿಸಿದೆ, ಇದು ಗುಜರಾತ್ ಮಾಡೆಲ್ ಎಂದು ವ್ಯಂಗ್ಯವಾಡಿದ್ದಾರೆ.
ಗುಜರಾತ್‌ನಲ್ಲಿ ಮರಣ ಪ್ರಮಾಣ ಶೇ.6.25ರಷ್ಟಿದೆ ಮಹಾರಾಷ್ಟ್ರದಲ್ಲಿ 3.73 ಇದೆ, ರಾಜಸ್ಥಾನದಲ್ಲಿ ಶೇ.2.32, ಪಂಜಾಬ್ ಶೇ.2.17, ಪುದುಚೆರಿ ಶೇ.1.98, ಜಾರ್ಖಂಡ್ ಶೇ.0.5, ಛತ್ತೀಸ್‌ಗಢ ಶೇ.0.35 ರಷ್ಟಿದೆ ಎಂಬುದನ್ನು ಟ್ವೀಟ್ ಮಾಡಿದ್ದಾರೆ. ಸಾವಿನ ಪ್ರಮಾಣ ಏರಿಕೆಯಾಗುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗಾಂಧಿ ಆರೋಪಿಸಿದ್ದಾರೆ.
ಸಿಎಂ ಸಂವಾದದ ನಂತರ ಮಹತ್ವದ ಸುಳಿವು ಕೊಟ್ಟ ಪ್ರಧಾನಿ
ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಹಾಗೂ ಬಿಜೆಪಿ ಆಡಳಿತವಿರುವ ಗುಜರಾತ್‌ನ್ನು ಕಾಂಗ್ರೆಸ್ ಆಡಳಿತವಿರುವ ಉಳಿದ ರಾಜ್ಯಗಳೊಂದಿಗೆ ರಾಹುಲ್ ಗಾಂಧಿ ಹೋಲಿಕೆ ಮಾಡಿ ಗುಜರಾತ್ ಮಾದರಿಯನ್ನು ಪ್ರಶ್ನಿಸಿದ್ದಾರೆ.
ಗುಜರಾತ್‌ನಲ್ಲಿ ಶೇ.75 ರಷ್ಟು ಭಾಗವನ್ನು ಕೊರೊನಾ ಸೋಂಕು ಆವರಿಸಿಕೊಂಡಿದೆ. ಗುಜರಾತ್ ನಲ್ಲಿ ಕೊರೋನಾ ಉಲ್ಬಣವಾಗಲು ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣವಾಗಿತ್ತು ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ