ಭಾರತೀಯ ವಿಜ್ಞಾನಿಗಳಿಂದ ಕೊರೋನಾ ಮಹಾಮಾರಿಗೆ ಲಸಿಕೆ; ನಿತಿನ್ ಗಡ್ಕರಿ!

By Suvarna NewsFirst Published Jun 16, 2020, 6:34 PM IST
Highlights

ಕೊರೋನಾ ವೈರಸ್ ವ್ಯಾಪಕವಾಗುತ್ತಿದ್ದಂತೆ ಆತಂಕ ಹೆಚ್ಚಾಗಿದೆ. ಇದರ ನಡುವೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತುಗಳು ಜನರಲ್ಲಿ ಕೊಂಚ ಸಮಾಧಾನ ಮೂಡಿಸಿದೆ. ಕೊರೋನಾ ಲಸಿಕೆ ಕುರಿತು ನಿತಿನ್ ಗಡ್ಕರಿ ಹೇಳಿದ ಮಾತುಗಳು ಇಲ್ಲಿವೆ.

ನವದೆಹಲಿ(ಜೂ.16):  ವಿಶ್ವವೇ ಕೊರೋನಾ ವೈರಸ್‌ಗೆ ತತ್ತರಿಸಿದೆ. ಭಾರತದಲ್ಲಿ ದಿನದಿನಂದ ದಿನಕ್ಕೆ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವೈರಸ್ ಹರಡುವಿಕೆ ಜೊತೆಗೆ ಆರ್ಥಿಕತೆ ಕುಸಿಯುತ್ತಿದೆ. ಲಾಕ್‌ಡೌನ್, ಸೀಲ‌ಡೌನ್ ಸೇರಿದಂತೆ ಹಲವು ಕ್ರಮಗಳು ಕೊರೋನಾ ಹರಡುವಿಕೆಯನ್ನು ನಿಯಂತ್ರಿಸುತ್ತಿಲ್ಲ. ಇದೀಗ ಲಸಿಕೆಯೊಂದೇ ಮಾರ್ಗ. ಭಾರತೀಯ ವಿಜ್ಞಾನಿಗಳು ಕೊರೋನಾ ವೈರಸ್‌ಗೆ ಲಸಿಕೆ ಅಭಿವೃದ್ದಿ ಪಡಿಸುತ್ತಿದ್ದಾರೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಸಿಎಂಗಳ ಜತೆ ಮೊದಲ ದಿನದ ವಿಡಿಯೋ ಸಂವಾದದ ಬಳಿಕ ಮಹತ್ವದ ಸುಳಿವು ಕೊಟ್ಟ ಮೋದಿ

ಭಾರತದ ಹಲವು ಸಂಸ್ಥೆಗಳು ಹಾಗೂ ವಿಜ್ಞಾನಿಗಳು ಕೊರೋನಾ ವೈರಸ್ ಲಸಿಕೆ ಅಭಿವೃದ್ದಿಯಲ್ಲಿ ತೊಡಗಿದ್ದಾರೆ. ಇದುವರೆಗೆ ಕೊರೋನಾ ವೈರಸ್‌ಗೆ ಲಸಿಕೆ ಬಂದಿಲ್ಲ. ಆದರೆ ಭಾರತದ ವಿಜ್ಞಾನಿಗಳು ಇತರ ಸಂಶೋಧಕರಿಗಿಂತ ಮುಂದಿದ್ದಾರೆ. ಶೀಘ್ರದಲ್ಲೇ ಕೊರೋನಾ ಹೊಡೆದೊಡಿಸಲು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ ಲಸಿಕೆ ಲಭ್ಯವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರೋರಿಗೆ ಹೊಸ ರೂಲ್ಸ್.

ವಿಶ್ವದಲ್ಲಿ 120 ಸಂಸ್ಥೆಗಳು ಕೊರೋನಾ ಲಸಿಕೆ ಕಂಡುಹಿಡಿಯಲು ಸಂಶೋಧನೆ ನಡೆಸುತ್ತಿದೆ. ಇದರಲ್ಲಿ ಹಲವು ಲಸಿಕೆಗಳು ಪ್ರಯೋಗ ಹಂತದಲ್ಲಿದೆ. ಇತ್ತ ಭಾರತದಲ್ಲೂ ಲಸಿಕೆ ಕಂಡು ಹಿಡಿಯಲಾಗುತ್ತಿದೆ. ಪ್ರಯೋಗ ಸೇರಿದಂತೆ ಹಲವು ಪರೀಕ್ಷೆಗಳು ಪ್ರಗತಿಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಸೋಂಕು ಹರಡುವಿಕೆ ಪ್ರಮಾಣ ತಗ್ಗಿದೆ ಎಂದು ಗಡ್ಕರಿ ಹೇಳಿದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 3,43,091 ಆಗಿದೆ. ಇನ್ನು ವಿಶ್ವದಲ್ಲಿ ಕೊರೋನಾ ಸೋಂಕಿನಿಂದ 434,214 ಮಂದಿ ಸಾವನ್ನಪ್ಪಿದ್ದಾರೆ. 

click me!