ಲಾಕ್‌ ಡೌನ್ ನಂತರ ಮೊದಲು ವಿಮಾನ ಹಾರಾಡುತ್ತಾ? ರೈಲು ಓಡುತ್ತಾ?

By Kannadaprabha NewsFirst Published Apr 24, 2020, 4:55 PM IST
Highlights

 ಮೇ 4 ರಿಂದ ಲಾಕ್‌ ಸಡಿಲಿಕೆ ನಂತರ ದೇಶಿಯ ವಿಮಾನ ಹಾರಾಟಕ್ಕೆ ಅವಕಾಶ ಕೊಡಬೇಕು. ಇಲ್ಲವಾದರೆ ವಿಮಾನ ಕಂಪನಿಗಳು ದಿವಾಳಿ ಎದ್ದು ಹೋಗುತ್ತವೆ. 20 ಲಕ್ಷ ಉದ್ಯೋಗ ಹೋಗುತ್ತದೆ ಎಂದು ಪುರಿ ಹೇಳತೊಡಗಿದಾಗ, ಪೀಯೂಷ್ ಗೋಯಲ್ ಕೂಡಾ ರೈಲು ಸಂಚಾರಕ್ಕೆ ಅವಕಾಶ ಕೊಡಬೇಕೆಂದು ಕೇಳಿಕೊಂಡರು. 

ಲಾಕ್‌ಡೌನ್ ನಂತರ ಮೊದಲು ವಿಮಾನವೋ? ರೈಲೋ?: ಹೀಗೊಂದು ಬಿಸಿ ಬಿಸಿ ಚರ್ಚೆ 4 ದಿನಗಳ ಹಿಂದೆ ನಡೆದ ಸಚಿವರ ಟಾಸ್ಕ್‌ ಫೋರ್ಸ್‌ ಸಭೆಯಲ್ಲಿ ವಿಮಾನಯಾನ ಸಚಿವ ಹರದೀಪ್‌ ಪುರಿ ಮತ್ತು ರೈಲ್ವೆ ಸಚಿವ ಹೇಳತೊಡಗಿದಾಗ, ಪಿಯೂಷ್‌ ಗೋಯಲ್ ‘ಬಡವರು ಪ್ರಯಾಣಿಸುವ ರೈಲ್ವೆಗಿಂತ ಮೊದಲು ವಿಮಾನ ಹಾರಾಟ ಆರಂಭಿಸಿದರೆ ವಲಸೆ ಕಾರ್ಮಿಕರು ದಂಗೆ ಎದ್ದಾರು. ರೈಲ್ವೆ ಚಲಿಸದಿದ್ದರೆ ಹತ್ತು ಲಕ್ಷ ಉದ್ಯೋಗಿಗಳಿಗೆ ಸಂಬಳ ಎಲ್ಲಿಂದ ಕೊಡಲಿ’ ಎಂದು ಹೇಳಿದರಂತೆ. ‘ನೋಡೋಣ, ಈ ಬಗ್ಗೆ ಪ್ರಧಾನಿ ಮೋದಿ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈಗ ಸುಮ್ಮನಿರಿ’ ಎಂದು ರಾಜನಾಥ ಸಿಂಗ್‌ ಚರ್ಚೆಗೆ ಬ್ರೇಕ್‌ ಹಾಕಿದರಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!