ಬೆಂಗಳೂರು(ಮೇ.22): ವ್ಯಾಕ್ಸೀನ್ ಪಡೆದ ಜನರಿಗೆ ಪ್ರಯಾಣ ನಿರ್ಬಂಧ ನಿಯಮಗಳಲ್ಲಿ ಹಲವು ರಾಷ್ಟ್ರಗಳು ಕೆಲವು ಸಡಿಲಿಕೆಗಳನ್ನು ಮಾಡಿವೆ. ಆದರೆ ಭಾರತ್ ಬಯೋಟೆಕ್ ತಯಾರಿಸಿದ ಕೊವ್ಯಾಕ್ಸೀನ್ ಎರಡು ಡೋಸ್ ಪಡೆದರೂ ಭಾರತೀಯರಿಗೆ ವಿದೇಶ ಪ್ರಯಾಣ ಸದ್ಯಕ್ಕೆ ಸಾಧ್ಯವಾಗುವ ಸೂಚನೆ ಇಲ್ಲ.
ಹಲವು ದೇಶಗಳು ತಮ್ಮಲ್ಲಿ ನಿರ್ಮಿಸಲಾದ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಅಂಗೀಕರಿಸಿದ ವ್ಯಾಕ್ಸೀನ್ ಪಡೆದವರನ್ನು ಮಾತ್ರ ಸದ್ಯಕ್ಕೆ ಪ್ರಯಾಣದಲ್ಲಿ ಪರಿಗಣಿಸುತ್ತಿದೆ. ಸೆರಂನ ಕೊವಿಶೀಲ್ಡ್, ಮೊಡರ್ನಾ, ಫೈಝರ್, ಅಸ್ಟ್ರಾಝೆನಕಾ, ಜನ್ಸೆನ್ ಇವುಗಳೆಲ್ಲ ಇರೋ ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್‌ನಲ್ಲಿ ಕೊವ್ಯಾಕ್ಸೀನ್ ಇಲ್ಲ.
undefined
ಕರ್ಫ್ಯೂ ಉಲ್ಲಂಘಿಸಿದ್ದಕ್ಕೆ ಪೊಲೀಸರ ಥಳಿತ: ಯುವಕ ಸಾವು
ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ನಿಯಮಾವಳಿ ದಾಖಲೆಯ ಪ್ರಕಾರ ತಮ್ಮ ಲಸಿಕೆ ಲಿಸ್ಟ್‌ನಲ್ಲಿ ಸೇರಿಸಲು ಭಾರತ್ ಬಯೋಟೆಕ್ ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾಗಿದೆ. ಪ್ರೀ ಸಬ್‌ಮಿಷನ್ ಸಭೆ ಮೇ ಅಥವಾ ಜೂನ್‌ನಲ್ಲಿ ನಡೆಯಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೊವ್ಯಾಕ್ಸೀನ್ ಲಿಸ್ಟ್‌ಗೆ ಸೇರಿಸಲು ಬಹಳಷ್ಟು ಪ್ರಕ್ರಿಯೆಗಳಿವೆ. ಪ್ರತಿ ಹಂತಕ್ಕೂ ಕನಿಷ್ಟ ವಾರಗಳ, ಕೆಲವೊಮ್ಮೆ ತಿಂಗಳ ಅಗತ್ಯವೂ ಇದೆ.
ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್‌ನಲ್ಲಿ ಇರದ ಲಸಿಕೆ ಪಡೆದವರನ್ನು ವಿದೇಶದಲ್ಲಿ ಲಸಿಕೆ ಪಡೆಯದವರೆಂದೇ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾದರೆ ಬಹಳಷ್ಟು ಭಾರತೀಯರು ಮುಂದಿನ ಹಲವು ತಿಂಗಳು ವಿದೇಶ ಪ್ರಯಾಣ ಮಾಡಲು ಸಾಧ್ಯವಾಗದು.