ವಿದೇಶಕ್ಕೆ ಆ.31ರವರೆಗೂ ವಿಮಾನಯಾನ ನಿಷೇಧ

Kannadaprabha News   | Asianet News
Published : Jul 31, 2021, 10:28 AM ISTUpdated : Jul 31, 2021, 11:10 AM IST
ವಿದೇಶಕ್ಕೆ ಆ.31ರವರೆಗೂ ವಿಮಾನಯಾನ ನಿಷೇಧ

ಸಾರಾಂಶ

ಕೋವಿಡ್‌ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ನಿರ್ಬಂಧ  ವಿಮಾನ ರದ ಮೇಲೆ ನಿರ್ಬಂಧ ಆಗಸ್ಟ್‌ 31ರವರೆಗೆ ವಿಸ್ತರಣೆ ಕೊರೋನಾ ಪ್ರಕರಣಗಳ ಏರಿಳಿತ ಗಮನದಲ್ಲಿರಿಸಿಕೊಂಡು ಕೆಲವೊಂದು ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಅವಕಾಶ 

ನವದೆಹಲಿ (ಜು.31): ಕೋವಿಡ್‌ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಆಗಸ್ಟ್‌ 31ರವರೆಗೆ ವಿಸ್ತರಿಸಲಾಗಿದೆ.

ವಿಮಾನಯಾನ ಸೇವೆ ನಿಷೇಧಿಸಿದ್ದಾಗಿ ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಆದರೆ ಕೊರೋನಾ ಪ್ರಕರಣಗಳ ಏರಿಳಿತ ಗಮನದಲ್ಲಿರಿಸಿಕೊಂಡು ಕೆಲವೊಂದು ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದೆ. 

ದುರ್ಗಮ ಪ್ರದೇಶಗಳಲ್ಲೂ ಏರ್‌ಪೋರ್ಟ್‌: ಮಸೂದೆ ಪಾಸ್‌!

ಕೋವಿಡ್‌ ಹಿನ್ನಲೆಯಲ್ಲಿ 2020ರ ಮಾರ್ಚ್ 23ರಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನು ನಿಷೇಧಿಸಲಾಗಿತ್ತು. ದ್ವಿಪಕ್ಷೀಯ ಒಪ್ಪಂದದೊಂದಿಗೆ ಕೆಲವು ದೇಶಗಳಿಗೆ ಭಾರತದ ವಿಮಾನಗಳು ‘ಏರ್‌ ಬಬಲ್‌’ ವ್ಯವಸ್ಥೆಯೊಡನೆ ಜುಲೈ 2020ರಿಂದ ವಿಮಾನಯಾನ ಸೌಲಭ್ಯ ಒದಗಿಸುತ್ತಿವೆ.

ದೇಶದಲ್ಲಿಯೂ ಈಗ ದಿನದಿನವೂ ಕೊರೋನಾ ಸೋಂಕಿನ ಸಂಖ್ಯೆ ಏರುತ್ತಲೇ ಇದೆ. ಸದ್ಯ ದೇಶದಲ್ಲಿ 4 ಲಕ್ಷ ಸಕ್ರೀಯ ಕೇಸುಗಳಿದ್ದು 40 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಕೇರಳದಲ್ಲಿ ಅತ್ಯಂತ ಹೆಚ್ಚಿನ ಸೋಂಕು ಪತ್ತೆಯಾಗಿದೆ. ಈಗ ದೇಶದ ಲಸಿಕೆ ಹಂಚಿಕೆ ಪ್ರಕ್ರಿಯೆ ತೀವ್ರಗೊಳಿಸುತ್ತಿದ್ದು, 3ನೇ ಅಲೆಯ ಆತಂಕದಲ್ಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

22 ಕಾರ್ಮಿಕರ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ 17 ಸಾವು, 4 ದಿನ ಬಳಿಕ ಘಟನೆ ಬೆಳಕಿಗೆ
ಪ್ರತಿಷ್ಠಿತ ಶಾಲೆಯ ಮೇಲೆ ಐಟಿ ರೈಡ್: ಕೋಟಿ ಕೋಟಿ ಹಣ ಪತ್ತೆ: ಹಣ ಎಣಿಸುವ ಯಂತ್ರ ತರಿಸಿದ ಅಧಿಕಾರಿಗಳು