ಕೊರೋನಾ ಅಚ್ಚುಕಟ್ಟಾದ ವರದಿಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ!

By Suvarna NewsFirst Published Jul 26, 2020, 8:04 PM IST
Highlights

ಕೊರೋನಾ ವೈರಸ್ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಅನ್ನೋ ಆರೋಪಗಳಿವೆ. ಇತರ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ. ಆದರೆ ಇತರ ರಾಜ್ಯಗಳು ಕೊರೋನಾ ನಿಯಂತ್ರಣವಾಗಿದೆ ಎಂದು ತೋರಿಸಲು ವರದಿಯಲ್ಲಿ ಕೆಲ ತಪ್ಪುಗಳನ್ನು ಮಾಡುತ್ತಿದೆ ಅನ್ನೋ ಆರೋಪಗಳಿವೆ. ಈ ಕುರಿತು ಸಮೀಕ್ಷೆಯೊಂದು ಬಿಡುಗಡೆಯಾಗಿದ್ದು, ಅಚ್ಚುಕಟ್ಟಾದ ವರದಿ ನೀಡಿದ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

ನವದೆಹಲಿ(ಜು.26): ಕೊರೋನಾ ವೈರಸ್ ಪ್ರಕರಣ ದಿನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಯಾ ರಾಜ್ಯಗಳು ಪ್ರತಿ ದಿನ ಕೊರೋನಾ ಸೋಂಕಿತರ ಸಂಖ್ಯೆ, ಗುಣಮುಖರಾವದವರ ಸಂಖ್ಯೆ ಹಾಗೂ ಬಲಿಯಾದವರ ಸಂಖ್ಯೆ ಕುರಿತು ವರದಿಯನ್ನು ಬಿಡುಗಡೆ ಮಾಡುತ್ತಿದೆ. ಇಷ್ಟೇ ಅಲ್ಲ ಈ ವರದಿಯನ್ನು ಕೇಂದ್ರ ಆರೋಗ್ಯ ಇಲಾಖೆಗೂ ನೀಡುತ್ತಿದೆ. ಈ ರೀತಿ ವಸ್ತುನಿಷ್ಠ ವರದಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ ಲಭ್ಯವಾಗಿದೆ.

ಭಾನುವಾರ ರಾಜ್ಯದ 30 ಜಿಲ್ಲೆಗಳಲ್ಲಿ ಕೊರೋನಾ ಆರ್ಭಟ: ಇಲ್ಲಿದೆ ಜಿಲ್ಲಾವಾರು ಅಂಕಿ-ಅಂಶ.

ಕೊರೋನಾ ವೈರಸ್ ಪ್ರಕರಣ ಕುರಿತು ಕರ್ನಾಟಕ ವಸ್ತುನಿಷ್ಠ ವರದಿ ನೀಡುತ್ತಿದೆ. ಹೀಗಾಗಿ ಅಗ್ರಸ್ಥಾನ ಸಂಪಾದಿಸಿದೆ. ಕೋವಿಡ್ 19 ಟಾಟಾ ರಿಪೋರ್ಟಿಂಗ್ ಸ್ಕೋರ್‌ನಲ್ಲಿ(CDRS) ಕರ್ನಾಟಕ ಮೊದಲ ಸ್ಥಾನ ಪಡೆದಕೊಂಡಿದೆ. ಈ ಪಟ್ಟಿಯಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶ ಅಂತಿಮ ಸ್ಥಾನದಲ್ಲಿದೆ.

 ಅಂಕದ ಕೊರೋನಾ ವೈರಸ್ ವರದಿಯಲ್ಲಿ ಕರ್ನಾಟಕದ CDRS ಸ್ಕೂರ್ 0.61 (ಉತ್ತಮ), ಕೊನೆಯ ಸ್ಥಾನದಲ್ಲಿರುವ ಬಿಹಾರ ಹಾಗೂ ಉತ್ತರ ಪ್ರದೇಶದ CDRS ಸ್ಕೋರ್  0.0 . 
 

click me!