Covaxin: ಅಧ್ಯಯನದಲ್ಲಿ ಬಯಲಾಯ್ತು ಕೋವ್ಯಾಕ್ಸಿನ್‌ ಬಗೆಗಿನ ಮಹತ್ವದ ಅಂಶ!

By Suvarna NewsFirst Published Nov 25, 2021, 5:00 AM IST
Highlights

* ರೋಗಲಕ್ಷಣದ ಸೋಂಕಿತರ ಮೇಲೆ ಅಧ್ಯಯನ

* ಕೋವ್ಯಾಕ್ಸಿನ್‌ ಕೇವಲ ಶೇ.50ರಷ್ಟುಪರಿಣಾಮಕಾರಿ

* ಲ್ಯಾನ್ಸೆಟ್‌’ನ ಇತ್ತೀಚಿನ ಪರೀಕ್ಷೆಯಲ್ಲಿ ಬಹಿರಂಗ

* ಈ ಮುನ್ನ ಶೇ.77.8ರಷ್ಟುಪರಿಣಾಮಕಾರಿ ಎನ್ನಲಾಗಿತ್ತು

ನವದೆಹಲಿ(ನ.25): ‘ಭಾರತ್‌ ಬಯೋಟೆಕ್‌’ನ (Bharat Biotech) ಸ್ವದೇಶಿ ಉತ್ಪಾದಿತ ಕೋವಿಡ್‌ ಲಸಿಕೆ ‘ಕೋವ್ಯಾಕ್ಸಿನ್‌’ (*Covid 19 Vaccine, Covaxin), ರೋಗಲಕ್ಷಣ ಹೊಂದಿದ ಕೊರೋನಾ ಸೋಂಕಿತರ ಮೇಲೆ ಕೇವಲ ಶೇ.50ರಷ್ಟುಪರಿಣಾಮಕಾರಿಯಾಗಿ ಹೊರಹೊಮ್ಮಿದೆ ಎಂದು ‘ಲ್ಯಾನ್ಸೆಟ್‌’ (Lancet)ವೈದ್ಯಕೀಯ ನಿಯತಕಾಲಿಕೆಯ ಅಧ್ಯಯನ ಹೇಳಿದೆ. ಈ ಮುನ್ನ 3ನೇ ಹಂತದ ಪ್ರಯೋಗದ ಬಳಿಕ ಕೋವ್ಯಾಕ್ಸಿನ್‌ (Covaxin) ಶೇ.77.8ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿತ್ತು ಎಂದು ‘ಲ್ಯಾನ್ಸೆಟ್‌’ನಲ್ಲಿ ವರದಿಯಾಗಿತ್ತು. ಆದರೆ ಈಗ ಕೋವ್ಯಾಕ್ಸಿನ್‌ ಎರಡೂ ಡೋಸ್‌ ಪಡೆದ ಲಸಿಕೆ ಪಡೆದ ದಿಲ್ಲಿ ಏಮ್ಸ್‌ ಆಸ್ಪತ್ರೆಯ ಸಿಬ್ಬಂದಿಯನ್ನು ‘ರಿಯಲ್‌ ಟೈಂ’ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ವೇಳೆ ರೋಗಲಕ್ಷಣ ಉಳ್ಳ ಸೋಂಕಿತರ ಮೇಲೆ ಲಸಿಕೆ ಶೇ.50ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ‘ಲ್ಯಾನ್ಸೆಟ್‌’ನಲ್ಲಿ ತಿಳಿಸಲಾಗಿದೆ.

23 ಸಾವಿರ ಏಮ್ಸ್‌ ಸಿಬ್ಬಂದಿಗೆ ಜನವರಿ-ಫೆಬ್ರವರಿಯಲ್ಲೇ 28 ದಿನಗಳ ಅಂತರದಲ್ಲಿ ಎರಡೂ ಡೋಸ್‌ ಕೋವ್ಯಾಕ್ಸಿನ್‌ ಲಸಿಕೆ ನೀಡಲಾಗಿತ್ತು. ಈ ಪೈಕಿ ಡೆಲ್ಟಾ ತಳಿ (Delta Varient) ಅಬ್ಬರ ಹೆಚ್ಚಿದ ಅವಧಿಯಾದ ಏ.15ರಿಂದ ಮೇ 15ರವರೆಗೆ 2714 ಸಿಬ್ಬಂದಿಯನ್ನು ಕೋವಿಡ್‌ ಟೆಸ್ಟ್‌ಗೆ ಒಳಪಡಿಸಲಾಯಿತು. ಈ ವೇಳೆ 1617 ಸಿಬ್ಬಂದಿಗೆ ರೋಗಲಕ್ಷಣವುಳ್ಳ ಕೊರೋನಾ ಅಂಟಿದ್ದು ಖಚಿತಪಟ್ಟಿತು. 1097 ಸಿಬ್ಬಂದಿಗೆ ಪರೀಕ್ಷೆಯಲ್ಲಿ ನೆಗೆಟಿವ್‌ ಬಂತು. ಇದರಿಂದಾಗಿ ರೋಗಲಕ್ಷಣವುಳ್ಳವರ ಮೇಲೆ ಕೋವ್ಯಾಕ್ಸಿನ್‌ ಶೇ.50ರಷ್ಟು ಪರಿಣಾಮ ಬೀರಿದೆ ಎಂದು ಸಾಬೀತಾಯಿತು ಎಂದು ಅಧ್ಯಯನ ವಿವರಿಸಿದೆ.

ಪರಿಪೂರ್ಣ ಅಧ್ಯಯನ ಅಲ್ಲ- ತಜ್ಞರು:

‘ಆದರೆ ಸದಾ ರೋಗಿಗಳ ಜತೆ ಇರುವ ವೈದ್ಯಕೀಯ ಸಿಬ್ಬಂದಿ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಸಾಮಾನ್ಯ ಜನರ ಮೇಲಲ್ಲ. ಹೀಗಾಗಿ ಇದನ್ನು ಪರಿಪೂರ್ಣ ಅಧ್ಯಯನ ಎನ್ನಲಾಗದು’ ಎಂದು ಕೆಲವು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಯೂರೋಪ್‌ನಲ್ಲಿ ಕೊರೋನಾ ಆತಂಕ, ಮತ್ತೆ 7 ಲಕ್ಷ ಸಾವು ಸಂಭವ

ಯುರೋಪ್‌ನಲ್ಲಿ ಕೊರೊನಾವೈರಸ್ (Covid cases In Europe) ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ವೇಗವಾಗಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಉನ್ನತ ಆರೋಗ್ಯ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ (World Health Organisation) ಮತ್ತು ತಜ್ಞರನ್ನು ಅಚ್ಚರಿಗೊಳಿಸಿದೆ. ಪ್ರಕರಣಗಳು ಇದೇ ರೀತಿ ಹೆಚ್ಚಾಗುತ್ತಾ ಹೋದರೆ, ಯುರೋಪ್‌ನಲ್ಲಿ (Europe) ಕೋವಿಡ್ -19 ನಿಂದ 7 ಲಕ್ಷ ಸಾವುಗಳು ಸಂಭವಿಸಬಹುದು ಎಂದು WHO ಎಚ್ಚರಿಕೆ ನೀಡಿದೆ. WHO ಯುರೋಪ್ ಕಚೇರಿ ಮುನ್ಸೂಚನೆ ಇಲ್ಲಿನ 53 ದೇಶಗಳಲ್ಲಿ ಮುಂಬರುವ ತಿಂಗಳಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಏಳು ಲಕ್ಷ ಜನರು ಸಾಯಬಹುದು ಎಂದು ಹೇಳಲಾಗಿದೆ. ಇದರಿಂದ ಸೋಂಕಿನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಎರಡು ಮಿಲಿಯನ್‌ಗಿಂತಲೂ ಹೆಚ್ಚಾಗಬಹುದು.

WHO ಯುರೋಪ್ ಕಚೇರಿಯು ಡೆನ್ಮಾರ್ಕ್‌ನ (Denmark) ರಾಜಧಾನಿ ಕೋಪನ್‌ಹೇಗನ್‌ನಲ್ಲಿದೆ. ಸೋಂಕಿನಿಂದ ರಕ್ಷಿಸಲು ಕ್ರಮಗಳ ಕೊರತೆ ಮತ್ತು ಸಣ್ಣ ಕಾಯಿಲೆಗಳನ್ನು ಬಹಿರಂಗಪಡಿಸುವ ಲಸಿಕೆಗಳ ಹೆಚ್ಚುತ್ತಿರುವ ಪುರಾವೆಗಳನ್ನು ಸಂಸ್ಥೆ ಉಲ್ಲೇಖಿಸಿದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು, 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಮತ್ತು ಆರೋಗ್ಯ ಕಾರ್ಯಕರ್ತರು, ಅತ್ಯಂತ ದುರ್ಬಲ ಜನಸಂಖ್ಯೆಯನ್ನು ಒಳಗೊಂಡಂತೆ ಲಸಿಕೆಯ ಬೂಸ್ಟರ್ ಡೋಸ್ ನೀಡುವಲ್ಲಿ ಆದ್ಯತೆ ನೀಡಬೇಕು ಎಂದು ಹೇಳಿದೆ.

click me!