ಅರ್ನಬ್ ಗೋಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ: ಹಲ್ಲೆ ಆರೋಪವೂ ವಜಾ!

By Suvarna NewsFirst Published Nov 5, 2020, 3:33 PM IST
Highlights

ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣ| ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ಬಂಧಿಸಿದ್ದ ಮುಂಬೈ ಪೊಲೀಸ್| 14 ದಿನ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನ್ಯಾಯಾಲಯ

ಮುಂಬೈ(ನ.05): ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣ ಸಂಬಂಧ 'ರಿಪಬ್ಲಿಕ್ ಟಿವಿ'ಯ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿಗೆ ಆಲೀಭಾಗ್ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅರ್ನಬ್ ಗೋಸ್ವಾಮಿ ಹಾಗೂ ಈ ಪ್ರಕರಣದ ಇನ್ನಿಬ್ಬರು ಆರೋಪಿಗಳು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ. 

ಇನ್ನು ಅರ್ನಬ್ ಮಾಡಿದ್ದ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಅರ್ನಬ್ ಮಾಡಿರುವ ಆರೋಪವನ್ನೂ ಕೋರ್ಟ್‌ ತಳ್ಳಿ ಹಾಕಿದೆ. ಇಷ್ಟೇ ಅಲ್ಲದೇ ನ್ಯಾಯಾಲಯದೊಳಗೆ ಫೋನ್ ಬಳಸದಂತೆ ಹಾಗೂ ತನಿಖೆಯ ಪ್ರಸಾರ ಲೈವ್ ಮಾಡಿದ್ದಕ್ಕೂ ಕ್ಲಾಸ್ ತೆಗೆದುಕೊಂಡಿದೆ.

ಮುಂಬೈ ಪೊಲೀಸರು ಅರ್ನಬ್ ಗೋಸ್ವಾಮಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸುವಂತೆ ಮನವಿ ಮಾಡಿತ್ತು. ಈ ವೇಳೆ ನ್ಯಾಯಾಲಯ ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದಿತ್ತು. ಇನ್ನು ಗೋಸ್ವಾಮಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ ಬಳಿಕ ಅವರ ವಕೀಲ ಅಬಾದಾ ಪೋಂಡಾ ಹಾಗೂ ಗೌರವ್ ಪಾರ್ಕರ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಪೋಂಡಾ ಕೋರ್ಟ್‌ ಪೊಲೀಸರಿಗೆ ಉತ್ತರಿಸುವಂತೆ ಹೇಳಿದೆ ಹಾಗೂ ಪ್ರಕರಣದ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ನಿಗಧಿಪಡಿಸಿದೆ.
 

click me!