
ಭುವನೇಶ್ವರ: ಒಡಿಶಾದ ರಾಯಗಡ ಜಿಲ್ಲೆಯ ಬುಡಕಟ್ಟು ಜೋಡಿಯೊಂದು ಸಮುದಾಯದ ಸಂಪ್ರದಾಯಗಳಿಗೆ ವಿರುದ್ಧವಾಗಿ ಮದುವೆ ಆಗಿದೆ ಎಂಬ ಆರೋಪ ಹೊರಿಸಿ ಅವರಿಗೆ ನೊಗ ಹೊರುವ ಶಿಕ್ಷೆ ನೀಡಿದ ಅಮಾನವೀಯ ಘಟನೆ ನಡೆದಿದೆ. ಬಳಿಕ ಆ ಜೋಡಿಗೆ ಊರು ಬಿಡುವಂತೆಯೂ ಗ್ರಾಮಸ್ಥರು ಸೂಚಿಸಿದ್ದಾರೆ.
ಕಲ್ಯಾಣ್‌ಸಿಂಗ್‌ಪುರ ಪೊಲೀಸ್ ವ್ಯಾಪ್ತಿಯ ಕಂಜಮಜೋಡಿ ಗ್ರಾಮದಲ್ಲಿ ರಕ್ತಸಂಬಂಧಿಕರಲ್ಲೇ ಮದುವೆ ಆಗಲು ನಿಷೇಧವಿದೆ. ಹೀಗೆ ಆದರೆ ಮಳೆ-ಬೆಳೆ ಬರಲ್ಲ ಎಂಬ ಮೂಢನಂಬಿಕೆ ಇದೆ.
ಆದರೆ ಈ ನಿಯಮದ ವಿರುದ್ಧ ಇತ್ತೀಚಗೆ ಯುವಕ-ಯುವತಿ ಮದುವೆ ಆಗಿದ್ದರು. ಹೀಗಾಗಿ ಗ್ರಾಮಸ್ಥರು ಇವರಿಗೆ ಸಾರ್ವಜನಿಕ ಶಿಕ್ಷೆ ನೀಡಿದ್ದು, ಹೆಗಲ ಮೇಲೆ ನೊಗ ಹಾಕಿಕೊಂಡು ಹೊಲವನ್ನು ಉಳುಮೆ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದರಿಂದ ಗ್ರಾಮ ಶುದ್ಧಿ ಆಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರಿ ಅಧಿಕಾರಿಗಳು ಶನಿವಾರ ಗ್ರಾಮಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
ಮಂಡ್ಯ ಹುಡುಗಿ ಲವ್ ಮಾಡಿ ಮದುವೆಯಾದ ನವೀನ ತುಮಕೂರಲ್ಲಿ 25 ಬಾರಿ ಚುಚ್ಚಿ ಕೊಲೆ ಮಾಡಿದ
ಮಂಡ್ಯದ ಹುಡುಗಿಯನ್ನು ಕಳೆದ 3 ವರ್ಷಗಳ ಹಿಂದ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ಮದುವೆ ಮಾಡಿಕೊಂಡಿದ್ದ ನವೀನ 3 ವರ್ಷಗಳ ಕಾಲ ಸಂಸಾರ ಮಾಡಿದ್ದಾನೆ. ಇತ್ತೀಚೆಗೆ ವೈವಾಹಿಕ ಕಲಹ ಹೆಚ್ಚಾಗಿ ಹೆಂಡತಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಅಂತರಸನಹಳ್ಳಿ ಪ್ರದೇಶದಲ್ಲಿ ನಡೆದಿದೆ. ಮಂಡ್ಯ ಮೂಲದ ಗೀತಾ (22) ಎಂಬ ಯುವತಿಯನ್ನೇ ಪತಿ ನವೀನ್ (25) ಚಾಕುವಿನಿಂದ 25ಕ್ಕೂ ಹೆಚ್ಚು ಬಾರಿ ಚುಚ್ಚಿ ಅಮಾನುಷವಾಗಿ ಹತ್ಯೆ ಮಾಡಿ ಪರಾರಿ ಆಗಿದ್ದಾನೆ.
ಕೊರಟಗೆರೆ ತಾಲ್ಲೂಕಿನ ಅಮೃತಗಿರಿ ಗ್ರಾಮದ ನವೀನ್ ಹಾಗೂ ಮಂಡ್ಯ ಜಿಲ್ಲೆ ಗಣನೂರಿನ ಗೀತಾ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಕಳೆದ ಒಂದೂವರೆ ವರ್ಷಗಳಿಂದ ತುಮಕೂರು ಹೊರವಲಯದ ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆಗೆ ವಾಸವಾಗಿದ್ದರು. ಈ ದಂಪತಿಗೆ ಒಂದೂವರೆ ವರ್ಷದ ಗಂಡು ಮಗು ಕೂಡ ಇದೆ. ಗೀತಾ ಈಚೆಗೆ ಮಗುವನ್ನು ತವರು ಮನೆಗೆ ಕಳುಹಿಸಿದ್ದರು.
ಮದುವೆಯಾದ ನಂತರ ಪತಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ವೈವಾಹಿಕ ಕಲಹಗಳ ಹಿನ್ನಲೆಯಲ್ಲಿ ಇಬ್ಬರ ನಡುವೆ ಪದೇಪದೇ ಜಗಳ ನಡೆಯುತ್ತಿದ್ದುದಾಗಿ ನೆರೆಹೊರೆಯವರು ಹೇಳುತ್ತಿದ್ದಾರೆ. ಕೆಲವೊಮ್ಮೆ ಮನೆಯ ಮಾಲೀಕರೇ ಜಗಳ ಬಿಡಿಸುವಂತ ಸ್ಥಿತಿಯೂ ಉಂಟಾಗಿತ್ತು. ಈ ಮಧ್ಯೆ ಕೆಲವು ತಿಂಗಳು ಬಾಡಿಗೆ ಕೊಡುವ ಸ್ಥಿತಿಯಲ್ಲಿಲ್ಲವೆಂದು ನವೀನ್ ಅವರು ಮನೆ ಖಾಲಿ ಮಾಡಿಕೊಂಡಿದ್ದರು. ಆದರೆ ಇದೀಗ ಮತ್ತೆ ಹಿಂದಿನ ಬಾಡಿಗೆ ಮನೆಯಲ್ಲಿಯೇ ವಾಸವಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ