ಕೊರೋನಾ ವೈರಸ್ ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ಸ್ಥಿತಿಗತಿಗಳ ಪರಿಶೀಲನೆ ನಡೆಸುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಮಂತ್ರಿ ಮಂಡಲ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಇಷ್ಟೇ ಅಲ್ಲ ಮಹತ್ವದ ಸೂಚನೆ ನೀಡಿದ್ದಾರೆ.
ನವದೆಹಲಿ(ಏ.30): ಭಾರತ ಹಿಂದೆಂದೂ ಎದುರಿಸದ ಅತ್ಯಂತ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಶತಮಾನದ ಬಿಕ್ಕಟ್ಟಾಗಿ ಉಲ್ಬಣಿಸಿರು ಕೊರೋನಾ ಸೋಂಕು, ಜನರ ಜೀವವನ್ನು ಹಿಂಡುತ್ತಿದೆ. ಪರಿಸ್ಥಿತಿ ನಿಯಂತ್ರಕ್ಕೆ ಕೇಂದ್ರ ಸರ್ಕಾರ ಅವಿರತ ಶ್ರಮವಹಿಸುತ್ತಿದೆ. ಇದೀಗ ಕೇಂದ್ರ ಮಂತ್ರಿ ಮಂಡಲ ಜೊತೆ ಸಭೆ ನಡೆಸಿದ ಮೋದಿ, ಮಹತ್ವ ಸೂಚನೆ ನೀಡಿದ್ದಾರೆ.
ಆಕ್ಸಿಜನ್ ಕೊರತೆಗೆ ಮೋದಿ ಪರಿಹಾರ; ಸರ್ಕಾರಿ ಆಸ್ಪತ್ರೆಗಳಲ್ಲಿ 551 ಉತ್ಪಾದಕ ಘಟಕ ಸ್ಥಾಪನೆ!..
undefined
ಕೊರೋನಾ ಬಿಕ್ಕಟ್ಟು ಎದುರಸಲು ಸರ್ಕಾರದ ಎಲ್ಲಾ ವಿಭಾಗಗಳು, ಸಂಸ್ಥಗಳು ಒಗ್ಗಟ್ಟಾಗಿ ಹಾಗೂ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಪರಿಸ್ಥಿತಿ ಎದುರಿಸಲು ಪ್ರಯತ್ನಿಸುತ್ತಿದೆ. ಆಯಾ ಸಚಿವರು ತಮ್ಮ ತಮ್ಮ ಕ್ಷೇತ್ರದ ಜನರ ಸಂಪರ್ಕದಲ್ಲಿರಬೇಕು. ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಶೀಘ್ರದಲ್ಲೇ ಪರಿಹಾರ ಒದಿಸಬೇಕು. ಜನರ ಪ್ರತಿಕ್ರಿಯೆ ಕೂಡ ಅತ್ಯವಶ್ಯಕವಾಗಿದೆ ಎಂದು ಮೋದಿ ಸಭೆಯಲ್ಲಿ ಹೇಳಿದ್ದಾರೆ.
ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಗುರುತಿಸಿ, ಪರಿಹರಿಸಲಾಗಿದೆಯಾ ಅನ್ನೋದನ್ನು ಖಾತ್ರಿಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಮೋದಿ ಕಿವಿ ಮಾತು ಹೇಳಿದ್ದಾರೆ. ಸಭೆಯಲ್ಲಿ ಕಳೆದ 14 ತಿಂಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ಕಾರ್ಯಗಳ ಕುರಿತು ಮೋದಿ ಪರಿಶೀಲಿಸಿದರು.
ಕೊರೋನಾ 2ನೇ ಅಲೆ, ಒಂದೇ ವಾರದಲ್ಲಿ ಮೋದಿ ಮಾಡಿದ್ದಿಷ್ಟು!
ಕೊರೋನಾ 2ನೇ ಅಲೆ ಕಾರಣ ದೇಶ ಎದುರಿಸಿದ ಆಸ್ಪತ್ರೆ, ಬೆಡ್, ಆಕ್ಸಿಜನ್, ವೆಂಟಿಲೇಟರ್, ಆಕ್ಸಿಜನ್ ಸಾಗಾಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸುವುದರ ಕುರಿತು ಮೋದಿ ಕೆಲ ಸೂಚನೆಗಳನ್ನು ನೀಡಿದ್ದಾರೆ. ಮೂಲ ಸೌಕರ್ಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳ ಜೊತೆ ಕೇಂದ್ರ ಸರ್ಕಾರ ಮಾಡಿದ ಪ್ರಯತ್ನಗಳನ್ನೂ ಈ ವೇಳೆ ವಿವರಿಸಲಾಯಿತು
ಇನ್ನು ಬಡವರು ಸೇರಿದಂತೆ ತೀವ್ರ ಸಂಕಷ್ಟದಲ್ಲಿರುವ ವರ್ಗದವರಿಗೆ ಆಹಾರ-ಧಾನ್ಯ ಒದಿಗಿಸಲು ಹಾಗೂ ಜನ್ ಧನ್ ಖಾತೆ ಮೂಲ ಹಣಕಾಸಿನ ನೆರವು ನೀಡಲು ಸೂಚಿಸಲಾಗಿದೆ. ಭಾರತದಲ್ಲಿನ ಲಸಿಕೆ ಅಭಿಯಾನ ಸೇರಿದಂತೆ ಕೊರೋನಾ ವಿರಿದ್ಧ ಹೋರಾಡಲು ಜನರಲ್ಲಿ ಆತ್ಮಸ್ಥೈರ್ಯ, ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಮೋದಿ ಹೇಳಿದ್ದಾರೆ.
ಕೊರೋನಾ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಒತ್ತು ನೀಡಬೇಕು. ಒಗ್ಗಟ್ಟಾಗಿ ಹೋರಾಡಿದರೆ ಕೊರೋನಾ ಗೆಲ್ಲೋ ವಿಶ್ವಾಸವಿದೆ ಎಂದು ಮೋದಿ ಕೇಂದ್ರ ಮಂತ್ರಿ ಮಂಡಲ ಸಭೆಯಲ್ಲಿ ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ
#ANCares #IndiaFightsCorona