Khalistan Allegation ಕೇಜ್ರಿವಾಲ್‌ಗೆ ಉಗ್ರರ ನಂಟು ಆರೋಪದ ತನಿಖೆ, ಕುಟುಕಿದ ಕುಮಾರ್ ವಿಶ್ವಾಸ್‌ಗೆ ಕೇಂದ್ರದ ಭದ್ರತೆ?

Published : Feb 19, 2022, 02:30 AM IST
Khalistan Allegation ಕೇಜ್ರಿವಾಲ್‌ಗೆ ಉಗ್ರರ ನಂಟು ಆರೋಪದ ತನಿಖೆ, ಕುಟುಕಿದ ಕುಮಾರ್ ವಿಶ್ವಾಸ್‌ಗೆ ಕೇಂದ್ರದ ಭದ್ರತೆ?

ಸಾರಾಂಶ

ನಾನು ಜಗತ್ತಿನ ಪ್ರೀತಿಯ ಉಗ್ರ, ನನ್ನ ಮೇಲಿನ ಆರೋಪ ಹಾಸ್ಯಾಸ್ಪದ ಕೇಜ್ರಿಗೆ ಉಗ್ರ ನಂಟು: ಪರಿಶೀಲನೆಗೆ ಶಾ ಸಮ್ಮತಿ ಖಲಿಸ್ತಾನಿ ನಂಟಿನ ತನಿಖೆಗೆ ಆಗ್ರಹಿಸಿದ್ದ ಚನ್ನಿ  

ನವದೆಹಲಿ(ಫೆ.19): ಕೇಂದ್ರ ಸರ್ಕಾರವು ಮಾಜಿ ಆಮ್‌ ಆದ್ಮಿ ಪಕ್ಷದ ನಾಯಕ ಕುಮಾರ ವಿಶ್ವಾಸ್‌ಗೆ(Kumar vishwas) ಕೇಂದ್ರೀಯ ಭದ್ರತಾ ಪಡೆಗಳ ಮೂಲಕ ರಕ್ಷಣೆ ಒದಗಿಸಬಹುದು ಎಂದು ಅಧಿಕೃತ ಮೂಲಗಳು ಶುಕ್ರವಾರ ಮಾಹಿತಿ ನೀಡಿವೆ.

ಕುಮಾರ್‌ ವಿಶ್ವಾಸ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌(Arvind Kejriwal) ವಿರುದ್ಧ ಗಂಭೀರ ಆರೋಪ(Khalistan Link Allegation) ಮಾಡಿದ ಹಿನ್ನೆಲೆಯಲ್ಲಿ ಸರ್ಕಾರವು ಅವರ ಭದ್ರತಾ ವ್ಯವಸ್ಥೆಯ ಮರುಪರಿಶೀಲನೆ ನಡೆಸುತ್ತಿದೆ. ಗುಪ್ತಚರ ಇಲಾಖೆಯ ಮಾಹಿತಿಯಂತೆ ಇವರಿಗೆ ಪ್ರಾಣ ಬೆದರಿಕೆಯೊಡ್ಡುವ ಸಾಧ್ಯತೆಯ ಕಾರಣದಿಂದ ಕೇಂದ್ರೀಯ ಏಜೆನ್ಸಿ ಮೂಲಕ ರಕ್ಷಣೆ ಒದಗಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ನಾನು ಭಯೋತ್ಪಾದಕ ಆಗಿದ್ದರೆ ಯಾಕೆ ಅರೆಸ್ಟ್‌ ಮಾಡಲಿಲ್ಲ? ಮೋದಿ, ರಾಹುಲ್‌ಗೆ ಕೇಜ್ರಿ ಸವಾಲು!

ನಾನು ಜಗತ್ತಿನ ಪ್ರೀತಿಯ ಉಗ್ರ,(Am sweetest terrorist) ನನ್ನ ಮೇಲಿನ ಆರೋಪ ಹಾಸ್ಯಾಸ್ಪದ: ಕೇಜ್ರಿವಾಲ್‌ ತಾವು ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುತ್ತಿರುವ ಕುಮಾರ್‌ ವಿಶ್ವಾಸ್‌ ಆರೋಪದ ವಿರುದ್ಧ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕಿಡಿಕಾರಿದ್ದು, ತಾವು ಜಗತ್ತಿನ ಪ್ರೀತಿಯ ಉಗ್ರ ಎಂದು ಹೇಳಿದ್ದಾರೆ.

‘ಎರಡು ಬಗೆಯ ಉಗ್ರರಿರುತ್ತಾರೆ- ಒಬ್ಬರು ಜನರಲ್ಲಿ ಭಯ ಹುಟ್ಟಿಸುವವರು, ಇನ್ನೊಬ್ಬರು ಭ್ರಷ್ಟರಲ್ಲಿ ಭಯ ಹುಟ್ಟಿಸುವವರು. 100 ವರ್ಷದ ಹಿಂದೆ ಭಗತ್‌ಸಿಂಗ್‌ರನ್ನೂ ಉಗ್ರ ಎನ್ನಲಾಗಿತ್ತು. ಇಂದು ಭ್ರಷ್ಟರೆಲ್ಲ ಸೇರಿ ಭಗತ್‌ಸಿಂಗ್‌ ಅನುಯಾಯಿಯಾದ ನನ್ನನ್ನು ಉಗ್ರರೆನ್ನುತ್ತಿದ್ದಾರೆ. ಇದು ನಿಜವಾದರೆ ನಾನು ಜಗತ್ತಿನ ಪ್ರೀತಿಯ ಉಗ್ರ, ಶಾಲೆ, ಆಸ್ಪತ್ರೆ, ರಸ್ತೆ ಸೌಲಭ್ಯ ಒದಗಿಸುವ ಉಗ್ರ’ ಎಂದಿದ್ದಾರೆ.

ಪಂಜಾಬ್ ಸಿಎಂ ಆಗ್ತೇನೆ, ಇಲ್ಲವೇ ಸ್ವತಂತ್ರ ದೇಶದ ಪಿಎಂ ಆಗ್ತೇನೆ, ಕೇಜ್ರೀವಾಲ್ ವಿರುದ್ಧ ಕುಮಾರ್ ವಿಶ್ವಾಸ್ ಆರೋಪ!

‘ಬಿಜೆಪಿ, ಕಾಂಗ್ರೆಸ್‌ ನನ್ನ ವಿರುದ್ಧ ಗುಂಪುಕಟ್ಟಿ, ನನಗೆ ಉಗ್ರನ ಪಟ್ಟಕಟ್ಟುತ್ತಿದ್ದಾರೆ. ಇದು ಹಾಸ್ಯಾಸ್ಪದ. ಇದೇ ನಿಜವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಇನ್ನುವರೆಗೆ ನನಗೆ ಯಾಕೆ ಬಂಧಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಮಾಜಿ ಆಪ್‌ ನಾಯಕ ಕುಮಾರ್‌ ವಿಶ್ವಾಸ ಕೇಜ್ರಿವಾಲ್‌ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿದ್ದು, ಪ್ರತ್ಯೇಕ ರಾಷ್ಟ್ರದ ಪ್ರಥಮ ಪ್ರಧಾನಿಯಾಗಬೇಕೆಂದು ತಮ್ಮೊಡನೆ ಚರ್ಚಿಸಿದ್ದರು ಎಂದು ವಿಡಿಯೋದಲ್ಲಿ ಆರೋಪಿಸಿದ್ದರು. 

 ಕೇಜ್ರಿಗೆ ಉಗ್ರ ನಂಟು: ಪರಿಶೀಲನೆಗೆ ಶಾ ಸಮ್ಮತಿ
‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಖಲಿಸ್ತಾನಿ ಪ್ರತ್ಯೇಕ ರಾಷ್ಟ್ರದ ಪ್ರಧಾನಿಯಾಗಬೇಕೆಂದು ಬಯಸಿದ್ದರು’ ಎಂದು ಮಾಜಿ ಆಪ್‌ ನಾಯಕ ಕುಮಾರ ವಿಶ್ವಾಸ್‌ ಮಾಡಿದ ಆರೋಪ ಮಹತ್ವದ ತಿರುವು ಪಡೆದಿದೆ. ಈ ಆರೋಪದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ವಿಶ್ವಾಸ್‌ ಆರೋಪದ ಬಗ್ಗೆ ತನಿಖೆಗೆ ಪಂಜಾಬ್‌ ಮುಖ್ಯಮಂತ್ರಿ ಚರಣಜೀತ್‌ ಸಿಂಗ್‌ ಚನ್ನಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ರಾಜಕೀಯ ಪಕ್ಷ ಉಗ್ರವಾದಿ ಸಂಘಟನೆಗಳೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವುದು, ಅವುಗಳ ಬೆಂಬಲ ಪಡೆಯುವುದು ಅತ್ಯಂತ ಗಂಭೀರ ವಿಚಾರ. ಅಧಿಕಾರ ಪಡೆದುಕೊಳ್ಳಲು ಪ್ರತ್ಯೇಕತಾವಾದಿಗಳೊಡನೆ ಕೈ ಜೋಡಿಸುವುದು ಅತ್ಯಂತ ಖಂಡನೀಯ. ಇಂತಹ ಸಂಘಟನೆಗಳ ಅಜೆಂಡಾ ರಾಷ್ಟ್ರ ವಿರೋಧಿಗಳ ಅಜೆಂಡಾಗಿಂತ ಭಿನ್ನವೇನಲ್ಲ. ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ನಾನೇ ಸ್ವತಃ ಇದನ್ನು ಆಳವಾಗಿ ಪರಿಶೀಲಿಸುತ್ತೇನೆ. ದೇಶದ ಏಕತೆ, ಸಮಗ್ರತೆಯೊಂದಿಗೆ ಯಾರಿಗೂ ಆಟವಾಡಲು ಅವಕಾಶ ನೀಡುವುದಿಲ್ಲ’ ಎಂದು ಚನ್ನಿಗೆ ಆಶ್ವಾಸನೆ ನೀಡಿದ್ದಾರೆ.

ಕುಮಾರ್ ವಿಶ್ವಾಸ್ ಆರೋಪ:
‘2017ರ ವಿಧಾನಸಭೆ ಚುನಾವಣೆ ವೇಳೆ ಉಗ್ರ ಸಂಘಟನೆಗಳು, ಖಲಿಸ್ತಾನಿ ಚಳವಳಿಯಿಂದ ಅಂತರ ಕಾಯ್ದುಕೊಳ್ಳುವಂತೆ ಕೇಜ್ರಿವಾಲ್‌ಗೆ ಸಲಹೆ ನೀಡಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ಜತೆಗೆ ನಾನು ಪಂಜಾಬ್‌ಗೆ ಮುಖ್ಯಮಂತ್ರಿಯಾಗುತ್ತೇನೆ ಅಥವಾ ಖಲಿಸ್ತಾನದ ಮೊದಲ ಪ್ರಧಾನ ಮಂತ್ರಿಯಾಗುತ್ತೇನೆ ಎಂದಿದ್ದರು’ ಎಂದು ಈ ಹಿಂದೆ ಕೇಜ್ರಿವಾಲ್‌ ಅವರ ಅತ್ಯಾಪ್ತರಾಗಿದ್ದ ವಿಶ್ವಾಸ್‌ ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು