Amit Shah : ಆಪ್ ಹಾಗೂ ನಿಷೇಧಿತ SFJ ನಡುವಿನ ಸಂಬಂಧದ ಬಗ್ಗೆ ತನಿಖೆ!

By Suvarna News  |  First Published Feb 18, 2022, 9:59 PM IST

ನಿಷೇಧಿತ ಸಿಖ್ ಸಂಘಟನೆ ಜೊತೆ ಆಮ್ ಆದ್ಮಿ ಪಾರ್ಟಿ ಲಿಂಕ್ ಆರೋಪ
ಪ್ರಧಾನಿ ನರೇಂದ್ರ ಮೋದಿಗೆ ಈ ಕುರಿತಾಗಿ ಪತ್ರ ಬರೆದಿದ್ದ ಪಂಜಾಬ್ ಮುಖ್ಯಮಂತ್ರಿ
ಸೂಕ್ತ ರೀತಿಯಲ್ಲಿ ತನಿಖೆಯ ಭರವಸೆ ನೀಡಿದ ಅಮಿತ್ ಷಾ


ನವದೆಹಲಿ (ಫೆ.18): ನಿಷೇಧಿತ ಸಿಖ್ ಫಾರ್ ಜಸ್ಟೀಸ್ (ಎಸ್ ಎಫ್ ಜೆ) ಹಾಗೂ ಆಮ್ ಆದ್ಮಿ ಪಾರ್ಟಿ ನಡುವಿನ ಸಂಬಂಧದ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಪಂಜಾಬ್ ಮುಖ್ಯಮಂತ್ರಿ  ಚರಂಜಿತ್ ಸಿಂಗ್ ಚನ್ನಿ (Punjab Chief Minister Charanjit Singh Channi), ಪ್ರಧಾನಮಂತ್ರಿ ನರೇಂದ್ರ ಮೋದಿಗೆ (PM Modi)ಬರೆದಿದ್ದ ಪತ್ರಕ್ಕೆ ಉತ್ತರ ಸಿಕ್ಕಿದೆ.  ಚನ್ನಿ ಬರೆದಿರುವ ಪತ್ರಕ್ಕೆ ಶುಕ್ರವಾರ ಉತ್ತರ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ( Union Minister Amit Shah), ಇಡೀ ಪ್ರಕರಣದ ಕುರಿತಾಗಿ ಸೂಕ್ತ ರೀತಿಯಲ್ಲಿ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ. ಅದಲ್ಲದೆ, ಎಸ್ ಎಫ್ ಜೆ (SFJ) ಹಾಗೂ ಆಪ್ (AAP) ನಡುವಿನ ಸಂಬಂಧದ ಆರೋಪಗಳ ಬಗ್ಗೆ ಖುದ್ದು ತನಿಖೆ ನಡೆಸಲಿದ್ದೇನೆ ಇದು ನನ್ನ ವಾಗ್ದಾನ ಎಂದಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಮಾಜಿ ಸ್ನೇಹಿತ ಕುಮಾರ್ ವಿಶ್ವಾಸ್ (Kumar Vishwas) ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ ಆಮ್ ಆದ್ಮಿ ಪಾರ್ಟಿ (Aam Admi Party) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಹಾಗೂ ನಿಷೇಧಿತ ಸಿಖ್ ಸಂಘಟನೆಗಳ ನಡುವೆ ಲಿಂಕ್ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಈ ಕುರಿತಾಗಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, "'ಪಂಜಾಬ್ ಸಿಎಂ ಆಗಿ, ಕುಮಾರ್ ವಿಶ್ವಾಸ್ ಅವರು ಇತ್ತೀಚೆಗೆ ಹೇಳಿದ ಬಗ್ಗೆ ನ್ಯಾಯಯುತ ತನಿಖೆ ನಡೆಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿನಂತಿಸುತ್ತೇನೆ. ಈ ವಿಚಾರದಲ್ಲಿ ರಾಜಕೀಯವನ್ನು ಸಂಪೂರ್ಣವಾಗಿ ಬದಿಗೆ ಸರಿಸಿ. ಪ್ರತ್ಯೇಕತಾವಾದದ ವಿರುದ್ಧ ಹೋರಾಡುವಾಗ ಪಂಜಾಬ್‌ನ ಜನರು ಭಾರಿ ಬೆಲೆ ನೀಡಿದ್ದಾರೆ. ಪ್ರತಿಯೊಬ್ಬ ಪಂಜಾಬಿಗಳ ಕಳವಳವನ್ನು ಪ್ರಧಾನಿ ಪರಿಹರಿಸಬೇಕಿದೆ' ಎಂದು ಬರೆದಿದ್ದಲ್ಲದೆ, ಪ್ರಧಾನಮಂತ್ರಿಗೆ ಕಳುಹಿಸಿರುವ ಪತ್ರವನ್ನೂ ಪೋಸ್ಟ್ ಮಾಡಿದ್ದರು.

ಇಂದು ಸಿಎಂ ಚನ್ನಿ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ರಾಜಕೀಯ ಪಕ್ಷವೊಂದು ರಾಷ್ಟ್ರವಿರೋಧಿ, ಪ್ರತ್ಯೇಕತಾವಾದಿ ಮತ್ತು ನಿಷೇಧಿತ ಸಂಘಟನೆಯೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಚುನಾವಣೆಯಲ್ಲಿ ಸಹಕಾರ ಪಡೆಯುವುದು ತುಂಬಾ ಗಂಭೀರ ವಿಚಾರ. ದೇಶದ ಸಮಗ್ರತೆ. ಇಂತಹ ಅಂಶಗಳ ಅಜೆಂಡಾ ದೇಶದ ಶತ್ರುಗಳ ಕಾರ್ಯಸೂಚಿಗಿಂತ ಭಿನ್ನವಾಗಿಲ್ಲ. ಇಂತಹವರು ಪಂಜಾಬ್ ಮತ್ತು ದೇಶವನ್ನು ಒಡೆಯಲು ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸುವ ಹಂತಕ್ಕೆ ಹೋಗುವುದು ಅತ್ಯಂತ ಖಂಡನೀಯ' ಎಂದು ಹೇಳಿದ್ದಾರೆ.

HM Amit Shah in a letter to Punjab CM assures him that GoI has taken the matter seriously and that he'll personally ensure that the matter is looked into in detail

Punjab CM had written to HM alleging that banned org 'Sikhs for Justice' is in touch with Aam Aadmi Party. pic.twitter.com/1SQwU7KUSd

— ANI (@ANI)


ದೇಶದ ಏಕತೆ ಮತ್ತು ಸಮಗ್ರತೆಯ ಜೊತೆ ಆಟವಾಡಲು ಯಾರಿಗೂ ಅವಕಾಶವಿಲ್ಲ:  'ಈ ವಿಷಯದ ಬಗ್ಗೆ, ದೇಶದ ಏಕತೆ ಮತ್ತು ಸಮಗ್ರತೆಯೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಭಾರತ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ನಾನೇ ವಿಷಯವನ್ನು ಆಳವಾಗಿ ಪರಿಶೀಲಿಸುತ್ತೇನೆ' ಎಂದು ಅಮಿತ್ ಷಾ ಬರೆದುಕೊಂಡಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೂಡ, ಆಮ್ ಆದ್ಮಿ ಪಕ್ಷದಿಂದ ಈ ವಿಚಾರವಾಗಿ ದೇಶದ ಜನರಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಪಂಜಾಬ್ ಸಿಎಂ ಆಗ್ತೇನೆ, ಇಲ್ಲವೇ ಸ್ವತಂತ್ರ ದೇಶದ ಪಿಎಂ ಆಗ್ತೇನೆ, ಕೇಜ್ರೀವಾಲ್ ವಿರುದ್ಧ ಕುಮಾರ್ ವಿಶ್ವಾಸ್ ಆರೋಪ!
ಏನಿದು ವಿವಾದ: ದೇಶದ ಖ್ಯಾತ ಕವಿ ಮತ್ತು ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ ಬುಧವಾರ ದೆಹಲಿ ಮುಖ್ಯಮಂತ್ರಿ ಮತ್ತು ಅವರ ಮಾಜಿ ಸಹೋದ್ಯೋಗಿ ಅರವಿಂದ್ ಕೇಜ್ರಿವಾಲ್ ಮೇಲೆ ದೊಡ್ಡ ಆರೋಪ ಮಾಡಿದ್ದರು. ಅರವಿಂದ್ ಕೇಜ್ರಿವಾಲ್ ಪಂಜಾಬ್‌ನಲ್ಲಿ ಪ್ರತ್ಯೇಕತಾವಾದಿಗಳ ಬೆಂಬಲಿಗರಾಗಿದ್ದಾರೆ ಎಂದು ಅವರು ಹೇಳಿದ್ದರು. ಹಿಂದೊಮ್ಮೆ ಅವರು ತನ್ನ ಬಳಿ ನಾನು ಒಂದೋ ಪಂಜಾಬ್‌ನ ಮುಖ್ಯಮಂತ್ರಿಯಾಗುತ್ತೇನೆ ಅಥವಾ ಸ್ವತಂತ್ರ ರಾಷ್ಟ್ರವಾದ ಖಲಿಸ್ತಾನದ ಮೊದಲ ಪ್ರಧಾನಿಯಾಗುತ್ತೇನೆ ಎಂದು ಹೇಳಿದ್ದರು ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ. ಪ್ರತ್ಯೇಕತಾವಾದಿಗಳ ಸಹಾಯ ಪಡೆಯಲು ಕೇಜ್ರಿವಾಲ್‌ಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ. ಪಂಜಾಬ್ ಒಂದು ರಾಜ್ಯವಲ್ಲ. ಪಂಜಾಬ್ ಒಂದು ಭಾವನೆ. ಪಂಜಾಬಿಗರು ಎಂಬುವುದು ಪ್ರಪಂಚದಾದ್ಯಂತ ಒಂದು ಭಾವನೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತ್ಯೇಕತಾವಾದಿಗಳ ಪರವಾಗಿ ನಿಲ್ಲಬೇಡಿ ಎಂದು ನಾನು ಒಮ್ಮೆ ಹೇಳಿದ್ದೆ. ಆಗ ಅವರು ಇಲ್ಲ-ಇಲ್ಲ ನಡೆಯುವುದಿಲ್ಲ ಎಂದು ಹೇಳಿದ್ದರು ಎಂದಿದ್ದಾರೆ.

Latest Videos

click me!