
ನವದೆಹಲಿ(ಜೂ. 30) ಪತಂಜಲಿ ಬಾಬಾ ರಾಮ್ ದೇವ್ ಕೊರೋನಾಕ್ಕೆ ಔಷಧ ಕಂಡುಹಿಡಿದಿದ್ದು ಕೋರೋನಿಲ್ ಕಿಟ್ ಹೆಸರಿನಲ್ಲಿ ಮಾರಾಟಕ್ಕೆ ಸಂಸ್ಥೆ ಅಣಿಯಾಗಿದೆ ಎಂಬ ಸುದ್ದಿ ಬಂದು ನಂತರ ಈ ರೀತಿ ಜಾಹೀರಾತು ನೀಡುವುದನ್ನು ನಿಲ್ಲಿಸಿ ಎಂದು ಆಯುಷ್ ಇಲಾಖೆ ಹೇಳಿದ್ದು ಸುದ್ದಿಯಾಗಿತ್ತು. ಆದರೆ ಈಗ ಈ ಎಲ್ಲ ವಿಚಾರಗಳಿಗೆ ಬಾಬಾ ರಾಮ್ ದೇವ್ ಸ್ಪಷ್ಟನೆ ನೀಡಿದ್ದಾರೆ.
ಉತ್ತರಾಖಂಡ ಆರೋಗ್ಯ ಇಲಾಖೆಗೆ ನೀಡಿರುವ ಸ್ಪಷ್ಟನೆಯಲ್ಲಿ ಅನೇಕ ಮಾಹಿತಿ ತಿಳಿಸಿಕೊಟ್ಟಿದ್ದಾರೆ. ಕೊರೋನಾ ಕಿಟ್ ಎಂಬ ಹೆಸರಿನಲ್ಲಿ ನಾವು ತಯಾರು ಮಾಡಿಲ್ಲ, ಆ ಹೆಸರಿನಲ್ಲಿಯೂ ರವಾನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕೊರೋನಾಕ್ಕೆ ಔಷಧಿ ಎಂದ ಬಾಬಾ ರಾಮ್ ದೇವ್ ಮೇಲೆ ಕ್ರಿಮಿನಿಲ್ ಕೇಸ್
ಈ ಔಷಧಿಯಿಂದ ಕೊರೋನಾ ಗುಣವಾಗುತ್ತದೆ ಎಂದು ನಾವು ಹೇಳಿಲ್ಲ. ದಿವ್ಯ ಸ್ವಸರಿ ವಾತಿ, ದಿವ್ಯಾ ಕರೋನಿಲ್ ಟ್ಯಾಬ್ಲೆಟ್ ಮತ್ತು ದಿವ್ಯಾ ಅನು ತೈಲ್ ಅನ್ನು ನಾವು ಸಿದ್ಧ ಮಾಡಿದ್ದೇವೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ರವಾನೆ ಮಾಡಲು, ಪ್ಯಾಕಿಂಗ್ ಮಾಡಲು ಕೊರೋನಲ್ ಕಿಟ್ ಎಂದು ಹೆಸರು ಬಳಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ವಾಣಿಜ್ಯ ಉದ್ದೇಶದಿಂದ ಕೊರೋನಾ ವಿರುದ್ಧ ಹೋರಾಟ ಮಾಡುತ್ತದೆ, ಕೊರೋನಾ ನಿವಾರಣೆಯಾಗುತ್ತದೆ ಎಂದು ಯಾವ ಪ್ರಾಡೆಕ್ಟ್ ಮಾರಾಟ ಮಾಡಿಲ್ಲ. ಆ ರೀತಿಯ ಜಾಹೀರಾತನ್ನು ನೀಡಿಲ್ಲ ಎಂದು ರಾಮ್ ದೇವ್ ಸ್ಪಷ್ಟನೆ ನೀಡಿದ್ದಾರೆ.
ಕೊರೋನಾದಿಂದ ಬಳಲುತ್ತಿರುವ ರೋಗಿಗಳಿಗೆಂದೇ ಕೊರೋನಿಲ್ ಮಾತ್ರೆ ಸಿದ್ಧ ಮಾಡಿದ್ದು ನಿಜ. ಸಂಶೋದನೆ ಮತ್ತು ಆಯುರ್ವೇದ ಪದ್ಧತಿಗೆ ಅನುಗುಣವಾಗಿಯೇ ಇದನ್ನು ತಯಾರು ಮಾಡಿದ್ದೇವೆ. ಈ ಬಗ್ಗೆ ಕೇಸ್ ಸ್ಟಡಿ ಒಂದನ್ನು ಮಾಡಿದ್ದು ಶೇ. 69 ರೋಗಿಗಳು ಮೂರು ದಿನದಲ್ಲಿ ಗುಣಮುಖವಾದರೆ ಶೇ. 100 ರೋಗಿಗಳು 7 ದಿನದಲ್ಲಿ ಗುಣಮುಖರಾಗಿದ್ದಾರೆ ಎಂದು ರಾಮ್ ದೇವ್ ಟ್ಯಾಬ್ಲೆಟ್ ಲಾಂಚ್ ವೇಳೆ ಹೇಳಿದ್ದರು.
ಇದಾದ ಮೇಲೆ ಕೇಂದ್ರ ಆಯುಷ್ ಇಲಾಖೆ ಕೊರೋನಾ ಗುಣವಾಗುತ್ತದೆ ಎಂದು ಜಾಹೀರಾತು ನೀಡುವುದನ್ನು ನಿಲ್ಲಿಸಿ ಎಂದು ತಿಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ