ಜೂ​ನ್‌​ನಲ್ಲಿ 10 ಕೋಟಿ ಡೋಸ್‌: ಕೇಂದ್ರಕ್ಕೆ ಸೀರಂ ಭರ​ವ​ಸೆ!

Published : May 31, 2021, 08:09 AM ISTUpdated : May 31, 2021, 10:07 AM IST
ಜೂ​ನ್‌​ನಲ್ಲಿ 10 ಕೋಟಿ ಡೋಸ್‌: ಕೇಂದ್ರಕ್ಕೆ ಸೀರಂ ಭರ​ವ​ಸೆ!

ಸಾರಾಂಶ

* ಕೋವಿಡ್‌ ಲಸಿ​ಕೆ​ಗಳ ಕೊರತೆ ಬಗ್ಗೆ ರಾಜ್ಯ ಸರ್ಕಾ​ರ​ಗಳ ದೂರು *  ಜೂನ್‌ ತಿಂಗ​ಳಲ್ಲಿ ಕೋವಿ​ಶೀಲ್ಡ್‌ ಲಸಿ​ಕೆಯ 9-10 ಕೋಟಿಯಷ್ಟು ಡೋಸ್‌ ಉತ್ಪಾ​ದಿಸಿ ಪೂರೈಕೆ * ಕೇಂದ್ರ ಸರ್ಕಾ​ರಕ್ಕೆ ಸೀರಂ ಇನ್‌​ಸ್ಟಿ​ಟ್ಯೂಟ್‌ ಭರ​ವಸೆ

ನವ​ದೆ​ಹ​ಲಿ(ಮೇ.31): ಕೋವಿಡ್‌ ಲಸಿ​ಕೆ​ಗಳ ಕೊರತೆ ಬಗ್ಗೆ ರಾಜ್ಯ ಸರ್ಕಾ​ರ​ಗಳ ದೂರಿನ ಬೆನ್ನಲ್ಲೇ, ಜೂನ್‌ ತಿಂಗ​ಳಲ್ಲಿ ಕೋವಿ​ಶೀಲ್ಡ್‌ ಲಸಿ​ಕೆಯ 9-10 ಕೋಟಿಯಷ್ಟುಡೋಸ್‌​ಗ​ಳನ್ನು ಉತ್ಪಾ​ದಿಸಿ ಪೂರೈ​ಸ​ಲಾ​ಗು​ತ್ತದೆ ಎಂದು ಕೇಂದ್ರ ಸರ್ಕಾ​ರಕ್ಕೆ ಸೀರಂ ಇನ್‌​ಸ್ಟಿ​ಟ್ಯೂಟ್‌ ಭರ​ವಸೆ ನೀಡಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಈ ಕುರಿ​ತಾಗಿ ಇತ್ತೀ​ಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವ​ರಿಗೆ ಪತ್ರ ಬರೆದ ಕೋವಿ​ಶೀಲ್ಡ್‌ ಲಸಿಕೆ ಉತ್ಪಾ​ದಿ​ಸುವ ಹೊಣೆ ಹೊತ್ತಿ​ರುವ ಪುಣೆಯ ಸೀರಂ ಇನ್‌​ಸ್ಟಿ​ಟ್ಯೂ​ಟ್‌​(​ಎಸ್‌​ಐ​ಐ), ಕೊರೋ​ನಾ​ದಿಂದ ಎದು​ರಾ​ಗಿ​ರುವ ಸವಾ​ಲು​ಗಳ ಮಧ್ಯೆಯೇ ಲಸಿಕೆ ಉತ್ಪಾ​ದನೆ ಹೆಚ್ಚ​ಳ​ಕ್ಕಾಗಿ ನಮ್ಮ ಸಿಬ್ಬಂದಿ ಹಗ​ಲಿ​ರುಳು ಎನ್ನದೇ ಕಾರ್ಯ ನಿರ್ವ​ಹಿ​ಸು​ತ್ತಿ​ದ್ದಾ​ರೆ. ಮೇ ತಿಂಗ​ಳಲ್ಲಿ 6.4 ಕೋಟಿಯಷ್ಟುಡೋಸ್‌​ಗ​ಳನ್ನು ಉತ್ಪಾ​ದಿಸಿ, ಪೂರೈ​ಸ​ಲಾ​ಗಿದೆ. ಆದರೆ ಜೂನ್‌ ತಿಂಗ​ಳಲ್ಲಿ 10 ಕೋಟಿಯಷ್ಟುಡೋಸ್‌​ಗ​ಳನ್ನು ನೀಡಲಾಗುವುದು ಎಂದು ಆಶ್ವಾ​ಸ​ನೆ ನೀಡಿದೆ.

ಕೋವಿ​ಶೀಲ್ಡ್‌, ಕೋವ್ಯಾ​ಕ್ಸಿನ್‌ ಮತ್ತು ರಷ್ಯಾದ ಸ್ಪುಟ್ನಿ​ಕ್‌-5 ಎಂಬ ಮೂರು ಕೊರೋನಾ ಲಸಿ​ಕೆ​ಗ​ಳನ್ನು ಭಾರತದಲ್ಲಿ ಬಳ​ಸ​ಲಾ​ಗು​ತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

E20 Petrol: ಸಿಜೆಪಿ ಬೆನ್ನಲ್ಲೇ E20 Janata Party ಹೆಸರಲ್ಲಿ ಹೊಸದೊಂದು ಅಭಿಯಾನ ಶುರು! ಇದರ ಬೇಡಿಕೆ ಏನು?
ರೋಡ್​ನಲ್ಲಿ ನೋಟು ಸಿಕ್ಕಿತೆಂದು ಬಗ್ಗಿದ್ರೆ ನಿಮ್ಮ ಕಥೆ ಫಿನಿಷ್​: ಶುರುವಾಗಿದೆ ಹೊಸ ಸ್ಕ್ಯಾಮ್​- ಪೊಲೀಸರ ಅಲರ್ಟ್​