ಡಿಸ್ಚಾಜ್ರ್ ಆಗಿದ್ದ ಇಬ್ಬರಿಗೆ ಮತ್ತೆ ಕೊರೋನಾ ಸೋಂಕು!|ನೋಯ್ಡಾ ಆಸ್ಪತ್ರೆಗೆ ದಾಖಲು: ದೇಶಾದ್ಯಂತ ಆತಂಕ
ನೋಯ್ಡಾ(ಏ.14): ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಕಳೆದ ಶುಕ್ರವಾರ ಡಿಸ್‌ಚಾಜ್‌ರ್ ಆಗಿದ್ದ ಇಬ್ಬರಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯ ಹೊರವಲಯದಲ್ಲಿರುವ ನೋಯ್ಡಾದಲ್ಲಿ ನಡೆದ ಈ ಘಟನೆಯಿಂದ ದೇಶಾದ್ಯಂತ ಆತಂಕ ಉಂಟಾಗಿದೆ.
ಕೊರೋನಾ ಸೋಂಕಿನಿಂದ ಇವರು ಗುಣಮುಖರಾಗಿದ್ದಾರೆಂದು ಖಚಿತಪಡಿಸಿಕೊಳ್ಳಲು 24 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಟೆಸ್ಟ್ ಮಾಡಲಾಗಿತ್ತು. ಎರಡೂ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿತ್ತು. ನಂತರ ಮತ್ತೊಂದು ಸ್ವಾಬ್ ಸಂಗ್ರಹಿಸಿ ಡಿಸ್‌ಚಾಜ್‌ರ್ ಮಾಡಲಾಗಿತ್ತು. ಅದನ್ನು ಪರೀಕ್ಷಿಸಿದಾಗ ಪಾಸಿಟಿವ್ ಬಂದಿದೆ. ಹೀಗಾಗಿ ಇಬ್ಬರನ್ನೂ ಸೋಮವಾರ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾಕ್‌ಡೌನ್‌ನಿಂದ ದೇಶಕ್ಕೆ 8 ಲಕ್ಷ ಕೋಟಿ ರು. ನಷ್ಟ!
ವೈದ್ಯರು ಪರಿಶೀಲಿಸಿದ ನಂತರ ಈ ಕುರಿತು ವಿಸ್ತೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಅತಿಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದಾಗಿದೆ. ಇಲ್ಲಿನ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿ ನೋಯ್ಡಾ ಬರುತ್ತದೆ.