ಕೊರೋನಾ ಅಬ್ಬರ: ದೇಶಾದ್ಯಂತ ಶಾಲೆ, ಕಾಲೇಜು ಬಂದ್‌!

By Kannadaprabha News  |  First Published Mar 17, 2020, 10:25 AM IST

 ಕೊರೋನಾ ಮತ್ತಷ್ಟುಮಂದಿಗೆ ಹಬ್ಬದಂತೆ ತಡೆಯಲು ದೇಶಾದ್ಯಂತ ಶಾಲಾ-ಕಾಲೇಜುಗಳು ಬಂದ್| ಅನಗತ್ಯ ಸುತ್ತಾಟದಿಂದ ದೂರವಿರಿ


ನವದೆಹಲಿ[ಮಾ.17]: ಕೊರೋನಾ ಮತ್ತಷ್ಟುಮಂದಿಗೆ ಹಬ್ಬದಂತೆ ತಡೆಯಲು ದೇಶಾದ್ಯಂತ ಶಾಲಾ-ಕಾಲೇಜುಗಳು, ವಿಶ್ವ ವಿದ್ಯಾಲಯಗಳು, ಜಿಮ್‌, ವಸ್ತು ಸಂಗ್ರಹಾಲಯಗಳು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೇಂದ್ರಗಳು, ಸ್ವಿಮ್ಮಿಂಗ್‌ ಪೂಲ್‌ಗಳು ಹಾಗೂ ಥಿಯೇಟರ್‌ಗಳನ್ನು ಮಾ.31ರವರೆಗೆ ಬಂದ್‌ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಅಲ್ಲದೆ ಅನಗತ್ಯ ಸುತ್ತಾಟದಿಂದ ದೂರವಿರುವಂತೆ ಜನಸಾಮಾನ್ಯರಿಗೆ ಸಲಹೆ ನೀಡಿದೆ.

Tap to resize

Latest Videos

ಖಾಸಗಿ ಕಂಪನಿಗಳು ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ರೆಸ್ಟೋರೆಂಟ್‌ಗಳಲ್ಲಿ ಕೈತೊಳೆಯುವ ಶಿಷ್ಟಾಚಾರ ಪಾಲನೆಯಾಗಲೇಬೇಕು. ರೆಸ್ಟೋರೆಂಟ್‌ ಸಿಬ್ಬಂದಿ ಗ್ರಾಹಕರ ಟೇಬಲ್‌ನಿಂದ 1 ಮೀಟರ್‌ ದೂರವಿರಬೇಕು. ಜೊತೆಗೆ, ಸ್ಥಳೀಯ ರಾಜಕೀಯ ಮುಖಂಡರು, ಧಾರ್ಮಿಕ ನಾಯಕರು ಹಾಗೂ ಇತರ ನಾಯಕರು ಬಹುವಾಗಿ ಸೇರಲ್ಪಡುವ ಜನಸಂದಣಿ ಕಾರ್ಯಕ್ರಮವನ್ನು ಏರ್ಪಡಿಸಬಾರದು ಅಥವಾ ಮುಂದೂಡಬೇಕು ಎಂದು ಅವರಿಗೆ ಸ್ಥಳೀಯ ಆಡಳಿತ ಸೂಚಿಸಬೇಕು ಎಂದು ಸೂಚಿಸಲಾಗಿದೆ.

click me!