
ನವದೆಹಲಿ(ಮಾ.23): ಕೊರೋನಾ ವೈರಸ್ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ ಭಾನುವಾರ ನಡೆದ ‘ಜನತಾ ಕಫä್ರ್ಯ’ ಬಳಿಕ ಇನ್ನೊಂದು ಸುದೀರ್ಘ ‘ಬಂದ್’ಗೆ ಭಾರತ ಸಜ್ಜಾಗುತ್ತಿದೆ. ದೇಶದ 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಪೂರ್ಣ ಅಥವಾ ಭಾಗಶಃ ಬಂದ್ ಸಾರಲಾಗಿದೆ. ಬಹುತೇಕ ಕಡೆ ಮಾಚ್‌ರ್ 31ರವರೆಗೆ ಅನ್ವಯವಾಗುವಂತೆ ಈ ಲಾಕ್‌ಡೌನ್ ಜಾರಿಯಲ್ಲಿರಲಿದೆ.
ಲಾಕ್‌ಡೌನ್ ಘೋಷಿತವಾದ ಪ್ರದೇಶಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿದರೆ ಮಿಕ್ಕ ಯಾವ ಸೇವೆಯೂ ಲಭ್ಯವಿರುವುದಿಲ್ಲ. ಅಗತ್ಯ ಇದ್ದರೆ ಮಾತ್ರ ಜನರು ಹೊರಬರಬೇಕು ಎಂದು ಸೂಚಿಸಲಾಗಿದೆ.
ಇಡೀ ರಾಜಸ್ಥಾನ, ಪಂಜಾಬ್, ರಾಷ್ಟ್ರ ರಾಜಧಾನಿ ದಿಲ್ಲಿ, ತೆಲಂಗಾಣ, ಉತ್ತರಾಖಂಡ, ಚಂಡೀಗಢಗಳನ್ನು ಮಾಚ್‌ರ್ 31ರವರೆಗೆ ಸಂಪೂರ್ಣ ಬಂದ್ ಮಾಡಲಾಗಿದೆ. ಈಶಾನ್ಯ ರಾಜ್ಯ ನಾಗಾಲ್ಯಾಂಡ್ ಅನಿರ್ದಿಷ್ಟಅವಧಿಯವರೆಗೆ ಬಂದ್ ಘೋಷಿಸಿಕೊಂಡಿದೆ.
ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ 9 ಜಿಲ್ಲೆ, ಹರ್ಯಾಣದ 7 ಜಿಲ್ಲೆಗಳು, ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆ, ಬಿಹಾರದ ನಗರ ಪ್ರದೇಶಗಳನ್ನು ಲಾಕ್‌ಡೌನ್ ಮಾಡಲು ಅಲ್ಲಿನ ಸರ್ಕಾರಗಳು ನಿರ್ಧರಿಸಿವೆ.
ಗೋವಾದಲ್ಲಿ ‘ಜನತಾ ಕಫä್ರ್ಯ’ವನ್ನು ಮಾಚ್‌ರ್ 25ರವರೆಗೆ ವಿಸ್ತರಿಸಲಾಗಿದೆ. ಉತ್ತರಪ್ರದೇಶದಲ್ಲಿ 15 ಜಿಲ್ಲೆಗಳನ್ನು ಬುಧವಾರದವರೆಗೆ ಬಂದ್ ಮಾಡಲಾಗಿದೆ.
ಆಂಧ್ರಪ್ರದೇಶವು ಅಂತಾರಾಜ್ಯ ಗಡಿಗಳನ್ನು ತಿಂಗಳಾಂತ್ಯದವರೆಗೆ ಬಂದ್ ಮಾಡುವುದಾಗಿ ಹೇಳಿದ್ದು, ಅಗತ್ಯ ಇದ್ದರೆ ಮಾತ್ರ ಜನರು ಮನೆಯಿಂದ ಹೊರಬನ್ನಿ ಎಂದು ಸೂಚಿಸಿದೆ.
ಜನತಾ ಕರ್ಫ್ಯೂಗೆ ಒಂದಾದ ಭಾರತ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ.ಬಂಗಾಳದ ಕೋಲ್ಕತಾ ಹಾಗೂ ಇತರ ಪ್ರದೇಶಗಳನ್ನು ಸೋಮವಾರ ಸಂಜೆ 5ರಿಂದ ಬಂದ್ ಮಾಡುವುದಾಗಿ ಸರ್ಕಾರ ಪ್ರಕಟಿಸಿದೆ. ಗುಜರಾತ್‌ನ ಗಾಂಧಿನಗರದಲ್ಲಿ ಭಾಗಶಃ ಲಾಕ್‌ಡೌನ್ ಸಾರಲಾಗಿದೆ.
ಒಡಿಶಾದ 5 ಜಿಲ್ಲೆ ಹಾಗೂ 5 ಜಿಲ್ಲೆಗಳಲ್ಲಿ ಬಂದ್ ಪ್ರಕಟಿಸಲಾಗಿದೆ.ಇನ್ನುಳಿದಂತೆ ಹೆಚ್ಚು ಕೊರೋನಾ ಬಾಧಿತವಾಗಿರುವ ಮಹಾರಾಷ್ಟ್ರ, ಕೇರಳದಲ್ಲೂ ಭಾಗಶಃ ಲಾಕ್‌ಡೌನ್ ಘೋಷಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ