Covid 19 : ಕೋವಿಡ್‌ ಇಳಿಕೆ 2.51 ಲಕ್ಷ ಕೇಸು ದಾಖಲು, 627 ಸಾವು

By Kannadaprabha NewsFirst Published Jan 29, 2022, 4:15 AM IST
Highlights

- ಸಕ್ರಿಯ ಕೇಸು 21 ಲಕ್ಷಕ್ಕೆ, ಪಾಸಿಟಿವಿಟಿ ಶೇ.15ಕ್ಕೆ ಇಳಿಕೆ
* ಕೇರಳದಲ್ಲಿ 54, 537 ಹೊಸ ಕೋವಿಡ್‌ ಕೇಸ್‌, 352 ಸಾವು
* ಕೋವ್ಯಾಕ್ಸಿನ್‌ ಇಂಟ್ರಾ ನೇಸಲ್‌ ಲಸಿಕೆಯ 3ನೇ ಹಂತದ ಪರೀಕ್ಷೆಗೆ ಅಸ್ತು

ನವದೆಹಲಿ (ಜ. 28): ದೇಶದಲ್ಲಿ ಹೊಸ ಕೊರೋನಾ (Coronavirus)ಪ್ರಕರಣಗಳು ಶುಕ್ರವಾರ ಇಳಿಕೆ ದಾಖಲಿಸಿವೆ. ಒಂದೇ ದಿನದಲ್ಲಿ 35 ಸಾವಿರ ಕಡಿಮೆ ಪ್ರಕರಣಗಳು ದಾಖಲಾಗಿದ್ದು, ಶುಕ್ರವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಳ್ಳುವ 24 ಗಂಟೆ ಅವಧಿಯಲ್ಲಿ 2,51,209 ಪ್ರಕರಣಗಳು ದಾಖಲಾಗಿವೆ. ಆದರೆ ಸಾವಿನ ಸಂಖ್ಯೆ ಕೊಂಚ ಏರುಗತಿಯಲ್ಲೇ ಇದ್ದು 627 ಮಂದಿ ಸಾವನ್ನಪ್ಪಿದ್ದಾರೆ.

ಗುಣಮುಖರ ಸಂಖ್ಯೆ ಹೆಚ್ಚಾಗಿದ್ದರಿಂದ (3.37 ಲಕ್ಷ ಮಂದಿ ಗುಣ) ಸಕ್ರಿಯ ಸೋಂಕಿತರ ಸಂಖ್ಯೆ 21,05,611ಕ್ಕೆ ಇಳಿದಿದೆ. ಇದೇ ವೇಳೆ, 20ರ ಸನಿಹಕ್ಕೆ ಹೋಗಿದ್ದ ಪಾಸಿಟಿವಿಟಿ ದರ ಶೇ.15.88ಕ್ಕೆ ಇಳಿಮುಖವಾಗಿದೆ. ಇದೇ ವೇಳೆ, 164.44 ಕೋಟಿ ಡೋಸ್‌ ಲಸಿಕೆಯನ್ನು ಈವರೆಗೆ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇರಳದಲ್ಲಿ 54,537 ಹೊಸ ಕೋವಿಡ್‌ ಕೇಸ್‌, 352 ಸಾವು
ತಿರುವನಂತಪುರ: ಕೇರಳದಲ್ಲಿ (Kerala) ಶುಕ್ರವಾರ 54,537 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಇಲಾಖೆಯ ಪ್ರಕಾರ 352 ಜನರು ಸಾವನ್ನಪ್ಪಿದ್ದು, ಈವರೆಗೆ ಒಟ್ಟು 52,786 ಜನರು ಸೋಂಕಿಗೆ ಬಲಿಯಾಗಿದ್ದಾರೆ. 352 ಸಾವಿನ ಪೈಕಿ 94 ಹೊಸ ಪ್ರಕರಣಗಳು. ಉಳಿದ 258 ಪರಿಷ್ಕೃತ ಮಾರ್ಗಸೂಚಿ ಅನುಸಾರ ದೃಢಪಟ್ಟಹಳೆಯ ಸಾವುಗಳು.
ರಾಜ್ಯದಲ್ಲಿ ಪ್ರಸ್ತುತ 3,33,447 ಸಕ್ರಿಯ ಸೋಂಕಿತ ಪ್ರಕರಣಗಳಿದ್ದು, ಅವರಲ್ಲಿ ಕೇವಲ ಶೇ. 3.5 ಜನರು ವಿವಿಧ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶುಕ್ರವಾರ 30,225 ಜನರು ಗುಣಮುಖರಾಗಿದ್ದಾರೆ. ರಾಜ್ಯದ ಮೂರು ಜಿಲ್ಲೆಗಳಾದ ಎರ್ನಾಕುಲಂ (10,571), ತಿರುವನಂತಪುರ (6,735) ಹಾಗೂ ತ್ರಿಶ್ಶೂರಲ್ಲಿ (6,082)ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Covid Testing Guidelines ಕೊರೋನಾ ಪರೀಕ್ಷೆ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ
ರಾಜಸ್ಥಾನ, ಹರಾರ‍ಯಣದಲ್ಲಿ ಕೋವಿಡ್‌ ನಿರ್ಬಂಧ ಸಡಲಿಕೆ
ಜೈಪುರ:
ರಾಜಸ್ಥಾನ (Rajasthan), ಹರಾರ‍ಯಣದಲ್ಲಿ (Haryana) ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಗಳು ನಿರ್ಬಂಧಗಳ ಸಡಲಿಕೆಗೆ ನಿರ್ಧರಿಸಿವೆ. ರಾಜಸ್ಥಾನದಲ್ಲಿ ಜ. 31 ರಿಂದ ಮಾಲ್‌, ಅಂಗಡಿಗಳನ್ನು ರಾತ್ರಿ 10 ರವೆಗೆ ತೆರೆಯಲು ಅನುಮತಿಸಲಾಗಿದೆ. ಶಾಲಾ-ಕಾಲೇಜುಗಳು ತೆರೆಯಲಿದ್ದು 10-12 ನೇ ತರಗತಿಗಳು ಫೆ.1 ರಿಂದ, 6-9 ತರಗತಿಗಳು ಫೆ. 10 ರಿಂದ ಆರಂಭವಾಗಲಿವೆ. ಆದರೆ ರಾತ್ರಿ ಕರ್ಫ್ಯೂ 11 ರಿಂದ ಬೆಳಿಗ್ಗೆ 5 ರವೆರೆಗೆ ಜಾರಿಯಲ್ಲಿರಲಿದೆ. ಹರಾರ‍ಯಣದಲ್ಲಿ ಎಲ್ಲ ಚಿತ್ರಮಂದಿರಗಳನ್ನು ಶೇ. 50 ಆಸನ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯ, ಕಾಲೇಜು, ಶಾಲೆ, ಕೋಚಿಂಗ್‌ ಕೇಂದ್ರಗಳು ಫೆ.1 ರಿಂದ ತೆರೆಯಲಿವೆ.

Covid 19 Crisis Bengaluru:  ಸಾವಿರಕ್ಕೂ ಹೆಚ್ಚು ಬೆಡ್‌ ಖಾಲಿ ಇದ್ರೂ ಖಾಸಗಿ ಆಸ್ಪತ್ರೆಗಳಿಗೆ ಡಿಮ್ಯಾಂಡ್!
ಕೋವ್ಯಾಕ್ಸಿನ್‌ ಇಂಟ್ರಾ ನೇಸಲ್‌ ಲಸಿಕೆ: 3ನೇ ಹಂತದ ಪರೀಕ್ಷೆಗೆ ಅಸ್ತು
ನವದೆಹಲಿ:
ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆ (Bharat Biotech) ಅಭಿವೃದ್ಧಿಪಡಿಸಿದ ಮೂಗಿನ ಮೂಲಕ ಹಾಕಬಹುದಾದ ಕೋವ್ಯಾಕ್ಸಿನ್‌ ( Nasal Booster Dose)ಲಸಿಕೆಯ 3ನೇ ಹಂತದ ಪರೀಕ್ಷೆಗೆ ಭಾರತೀಯ ಔಷಧಗಳ ಪ್ರಧಾನ ನಿಯಂತ್ರಕ (ಡಿಸಿಜಿಐ) ಶುಕ್ರವಾರ ಅನುಮೋದನೆ ನೀಡಿದೆ. ಈ ಪ್ರಕಾರ ಈಗಾಗಲೇ 2 ಡೋಸ್‌ಗಳನ್ನು ಪಡೆದವರಿಗೆ 3ನೇ ಹಂತದ ಲಸಿಕೆ ಪರೀಕ್ಷೆ ವೇಳೆ ಬೂಸ್ಟರ್‌ ಡೋಸ್‌ ಆಗಿ ನೀಡಬಹುದಾಗಿದೆ. ಬಿಬಿವಿ154 ಹೆಸರಿನ ಈ ಲಸಿಕೆಯು ಬೂಸ್ಟರ್‌ ಡೋಸ್‌ ಆಗಿ ಎಷ್ಟುಪರಿಣಾಮಕಾರಿ ಮತ್ತು ಸುರಕ್ಷತೆ ಎಂಬ ಬಗ್ಗೆ ಅಧ್ಯಯನ ನಡೆಸಲು ಭಾರತ್‌ ಬಯೋಟೆಕ್‌ ಜ.27ರಂದು ಡಿಸಿಜಿಐನಿಂದ   (DCGI)ಅನುಮತಿ ಪಡೆದಿದೆ. ದೆಹಲಿಯ ಏಮ್ಸ್‌ ಸೇರಿದಂತೆ ದೇಶದ 5 ಕಡೆಗಳಲ್ಲಿ ಈ ಲಸಿಕೆಯ ಪ್ರಯೋಗ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

click me!