
ನವದೆಹಲಿ(ಏ.23): ಮಾರಕ ಕೊರೋನಾ ವೈರಸ್ ಕೇವಲ 20 ದಿನಗಳ ಅಂತರದಲ್ಲಿ ದೇಶದ 219 ಜಿಲ್ಲೆಗಳಿಗೆ ಹೊಸದಾಗಿ ವ್ಯಾಪಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಮೂಲಕ ಸದ್ಯ ದೇಶದ 430 ಜಿಲ್ಲೆಗಳಿಗೆ ವೈರಸ್ ಲಗ್ಗೆ ಇಟ್ಟಂತಾಗಿದೆ.
ಏ.2ರಂದು ದೇಶದ 211 ಜಿಲ್ಲೆಗಳಲ್ಲಿ ಕೊರೋನಾ ಕಂಡುಬಂದಿತ್ತು. ಆದರೆ ಬುಧವಾರದ (ಏ.22) ಹೊತ್ತಿಗೆ ಕೊರೋನಾ ಸೋಂಕು ಕಂಡುಬಂದಿರುವ ಜಿಲ್ಲೆಗಳ ಸಂಖ್ಯೆ 430ಕ್ಕೆ ಹೆಚ್ಚಳವಾಗಿದೆ. ದೇಶದ 6 ನಗರಗಳಲ್ಲಿ 500ಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, ದೇಶದ ಒಟ್ಟು ಕೊರೋನಾಪೀಡಿತರ ಸಂಖ್ಯೆಯಲ್ಲಿ ಈ ನಗರಗಳ ಪಾಲೇ ಶೇ.45ರಷ್ಟಿದೆ.
ಅಮೆರಿಕಕ್ಕೆ ಕೈಕೊಟ್ಟ ಹೈಡ್ರೋಕ್ಸಿಕ್ಲೋರೋಕ್ವಿನ್: ಮಾತ್ರೆ ಬಳಸಿದ ಅನೇಕರು ಸಾವು!
3000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವ ಮುಂಬೈ 6 ನಗರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. 2081 ಪ್ರಕರಣಗಳೊಂದಿಗೆ ದೆಹಲಿ, 1298 ಸೋಂಕಿತರೊಂದಿಗೆ ಅಹಮದಾಬಾದ್, 915 ವೈರಸ್‌ಪೀಡಿತರ ಮೂಲಕ ಇಂದೋರ್ ಕೂಡ ಸ್ಥಾನ ಪಡೆದಿದೆ. ನಂತರ ಪುಣೆ (660) ಹಾಗೂ ಜೈಪುರ (537) ಇವೆ. ಮತ್ತೊಂದೆಡೆ ಮಹಾರಾಷ್ಟ್ರ, ಗುಜರಾತ್, ದೆಹಲಿ, ರಾಜಸ್ಥಾನ ಹಾಗೂ ತಮಿಳುನಾಡಿನಲ್ಲಿ ದೇಶದ ಒಟ್ಟು ಕೊರೋನಾಪೀಡಿತರ ಪೈಕಿ ಶೇ.60ರಷ್ಟುಸೋಂಕಿತರು ಇದ್ದಾರೆ.
ಮೈಮರೆತರೆ ಮೇ 3ರ ನಂತರವೂ ಲಾಕ್‌ಡೌನ್
ಹೊಸದಾಗಿ ಮತ್ತಷ್ಟುಜಿಲ್ಲೆಗಳಿಗೆ ಕೊರೋನಾ ವ್ಯಾಪಿಸಿದ್ದರೂ, ದೇಶದಲ್ಲಿ ಸೋಂಕು ದ್ವಿಗುಣವಾಗುವ ಪ್ರಮಾಣ 3.4 ದಿನದಿಂದ 7.5 ದಿನಕ್ಕೆ ಏರಿದೆ. ಸೋಂಕಿನ ವೇಗ ತಗ್ಗಲು ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಕಾರಣ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ