ಉಸಿರಾಡಲು ರಂಧ್ರವಿರುವ N-95 ಮಾಸ್ಕ್ ಅಪಾಯಕಾರಿ: ಕೇಂದ್ರದ ವಾರ್ನಿಂಗ್!

By Suvarna News  |  First Published Jul 21, 2020, 1:20 PM IST

ಉಸಿರಾಡಲು ರಂಧ್ರವಿರುವ N-95 ಮಾಸ್ಕ್ ಅಪಾಯಕಾರಿ| ಇದನ್ನು ಬಳಸದಿರುವುದೇ ಉತ್ತಮ| ಈ ಮಾಸ್ಕ್‌ನಿಂದ ಸೋಂಕಿತ ವ್ಯಕ್ತಿಯ ದೇಹದಿಂದ ಹೊರಗೆ ಬರುವುದನ್ನು ತಪ್ಪಿಸಲಾಗದು


ನವದೆಹಲಿ(ಜು.21): ಕೊರೋನಾ ವೈರಸ್ ಎಂಬ ಮಹಾಮಾರಿ ಮನುಷ್ಯರ ಜೀವನ ಶೈಲಿಯನ್ನೇ ಬದಲಾಯಿಸಿದೆ. ಮಹಾಮಾರಿ ಹರಡುವ ಭಯದಿಂದ ಜನರರು ತಮ್ಮ ಮನೆಗಳಲ್ಲೇ ಉಳಿದುಕೊಳ್ಳುತ್ತಿದ್ದಾರೆ. ಅಗತ್ಯವೆಂದಾಗಲಷ್ಟೇ ಮನೆಯಿಂದ ಹೊರಗೆ ಕಾಲಿಡುತ್ತಿದ್ದಾರೆ. ಹೀಗಿರುವಾಗ ಮಾಸ್ಕ್ ಧಾರಣೆ ಜೀವನದ ಅಂಗವಾಗಿದೆ. ಇದು ಅಗತ್ಯ ವಸ್ತುಗಳಲ್ಲಿ ಒಂದಾಗಿ ಮಾರ್ಪಾಡಾಗಿದೆ. ಹೀಗಿರುವಾಗ ವಿವಿಧ ಬಗೆಯ ಮಾಸ್ಕ್‌ಗಳೂ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಆದರೀಗ ಈ ಮಾಸ್ಕ್ ಸಂಬಂಧ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ಕೊಟ್ಟಿದೆ. 

ಕೊರೋನಾ ತಾಂಡವ: ಯಾವ ಮಾಸ್ಕ್‌ ಎಷ್ಟು ಸೇಫ್‌? ಇಲ್ಲಿದೆ ವಿವರ

Tap to resize

Latest Videos

ಹೌದು ಉಸಿರಾಡಲು ರಂಧ್ರವಿರುವ N-95 ಮಾಸ್ಕ್ ಬಳಕೆ ಅಪಾಯಕಾರಿ, ಇದು ಕೊರೋನಾ ತಡೆಯಲು ಅಸಮರ್ಥವಾಗಿದೆ. ಹೀಗಾಗಿ ಇದನ್ನು ಧರಿಸದಿರುವಂತೆ ಖುದ್ದು ಕೇಂದ್ರ ಸರ್ಕಾರವೇ ಎಚ್ಚರಿಕೆ ಮೂಲಕ ಮನವಿ ಮಾಡಿಕೊಂಡಿದೆ. 

"

ಕೊರೋನಾ ಹಾವಳಿ ಬಳಿಕ ವೈದ್ಯಕೀಯ ಸಿಬ್ಬಂದಿಗಳಷ್ಟೇ ಬಳಸುತ್ತಿದ್ದ N-95 ಮಾಸ್ಕ್‌ಗಳು ಭಾರೀ ಜನಪ್ರಿಯಗೊಂಡಿದ್ದವು. ಆದರೆ ಇದಾದ ಬಳಿಕ ಉಸಿರಾಡಲು ಸಹಾಯವಾಗುವಂತೆ ರಂಧ್ರವಿರುವ N-95 ಮಾಸ್ಕ್ ಕೂಡಾ ಬಂದಿತ್ತು.. ಸದ್ಯ ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ರಾಜೀವ್ ಗರ್ಗ್, ಎಲ್ಲಾ ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ

ಕೊರೋನಾ ಸಮರಕ್ಕೆ ಶಕ್ತಿ ತುಂಬಿದ 'ಮಾಸ್ಕ್ ಮಹಿಳೆ’ ಸುಹಾನಿಯ ಕಹಾನಿ!

ರಂಧ್ರಗಳಿರುವ N-95 ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಸ್ ದೇಹದೊಳಗೆ ಸೇರುವುದು ಹಾಗೂ ಸೋಂಕಿತ ವ್ಯಕ್ತಿಯ ದೇಹದಿಂದ ಹೊರಗೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ. ರಂಧ್ರಗಳಿರುವ N-95 ಮಾಸ್ಕ್ ಧರಿಸುವುದರಿಂದ ವೈರಸ್ ಹೊರ ಬರುವುದನ್ನು ತಪ್ಪಿಸಲಾಗುವುದಿಲ್ಲ N-95 ಮಾಸ್ಕ್ ಸರಿಯಾದ ಬಳಕೆಗೆ ಮಾರ್ಗಸೂಚಿ ಅಗತ್ಯವಿದೆ ಎಂದು ಹೇಳಿದೆ. ಈ ಮೂಲಕ N-95 ಮಾಸ್ಕ್‌ಗಳ ಬಳಕೆಯನ್ನು ತಡೆಯಲು ಸೂಕ್ತ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ರಾಜೀವ್ ಗರ್ಗ್ ಬರೆದಿರುವ ಪತ್ರದಲ್ಲಿ ಸ್ಪಷ್ಟ ಸೂಚನೆ ನೀಡಲಾಗಿದೆ.
 

click me!