
ನವದೆಹಲಿ(ಏ.21): ದೇಶಾದ್ಯಂತ ಲಾಕ್‌ಡೌನ್‌ನ ಪರಿಣಾಮ ನಿಚ್ಚಳವಾಗಿ ಗೋಚರಿಸುತ್ತಿದ್ದು, ಸೋಂಕಿತರ ಸಂಖ್ಯೆ ದುಪ್ಪಟ್ಟಾಗುವ ದಿನಗಳ ಸಂಖ್ಯೆ 7.5ಕ್ಕೆ ಏರಿದೆ. ಅಂದರೆ, ಲಾಕ್‌ಡೌನ್‌ಗಿಂತ ಮುಂಚೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸರಾಸರಿ 3.5 ದಿನಗಳಿಗೊಮ್ಮೆ ದುಪ್ಪಟ್ಟಾಗುತ್ತಿತ್ತು. ಈಗ ಸರಾಸರಿ 7.5 ದಿನಗಳಿಗೆ ದುಪ್ಪಟ್ಟಾಗುತ್ತಿದೆ. ಕರ್ನಾಟಕದಲ್ಲಿ ಈ ಪ್ರಮಾಣ ಇನ್ನೂ ಆಶಾದಾಯಕವಾಗಿದ್ದು, 9.2 ದಿನಗಳಿಗೊಮ್ಮೆ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇನ್ನು ಸೋಂಕು ನಿಗ್ರಹದಲ್ಲಿ ಕೇರಳ ಮತ್ತು ಒಡಿಶಾ ರಾಜ್ಯಗಳು ದೇಶದಲ್ಲೇ ಅತ್ಯುತ್ತಮ ಸಾಧನೆ ಮಾಡಿವೆ. ಕೇರಳದಲ್ಲಿ ಪ್ರತಿ 72 ದಿನಕ್ಕೆ ಒಮ್ಮೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದ್ದರೆ, ಒಡಿಶಾದಲ್ಲಿ ಈ ಪ್ರಮಾಣ 39.8 ದಿನಗಳದ್ದಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಕೊರೋನಾಗೆ ಬಲಿಯಾದ ವೈದ್ಯನ ಅಂತ್ಯಸಂಸ್ಕಾರ ವೇಳೆಯೂ ಕಲ್ಲು ತೂರಾಟ
23 ರಾಜ್ಯಗಳ 59 ಕೊರೋನಾಪೀಡಿತ ಜಿಲ್ಲೆಗಳಲ್ಲಿ ಕಳೆದ 14 ದಿನಗಳಲ್ಲಿ ಒಂದೂ ಹೊಸ ಸೋಂಕು ಪತ್ತೆಯಾಗಿಲ್ಲ. ಇನ್ನು ಕರ್ನಾಟಕದ ಕೊಡಗು, ಪುದುಚೇರಿಯ ಮಾಹೆ ಮತ್ತು ಉತ್ತರಾಖಂಡದ ಪೌರಿಗರ್ವಾಲ್ ಜಿಲ್ಲೆಗಳಲ್ಲಿ ಕಳೆದ 28 ದಿನಗಳಲ್ಲಿ ಒಂದೂ ಹೊಸ ಪ್ರಕರಣ ದಾಖಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೆಹಲಿ 8.5
ಕರ್ನಾಟಕ 9.2
ತೆಲಂಗಾಣ 9.4
ಒಡಿಶಾ 39.8
ಕೇರಳ 72.2
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ