
ಚೆನ್ನೈ(ಜೂ. 24) ಕೊರೋನಾ ವೈರಸ್ ಹಾವಳಿ ಯಾವ ಮಹಾನಗರವನ್ನು ಬಿಟ್ಟಿಲ್ಲ. ಚೆನ್ನೈ ಸಹ ಕೊರೋನಾ ಕಾಟಕ್ಕೆ ಬಳಲಿ ಬೆಂಡಾಗಿದೆ.
ಚೆನ್ನೈ ಆಡಳಿತದ ಜವಾಬ್ದಾರಿ ಹೊತ್ತಿರುವ ದಿ ಗ್ರೇಟರ್ ಚೆನ್ನೈ ಕಾರ್ಪೋರೇಶನ್ ಮಾತ್ರ ಮಾದರಿ ಕೆಲಸ ಮಾಡಿಕೊಂಡು ಬರುತ್ತಿದೆ. ಫೋಕಸ್ (ಫ್ರೆಂಡ್ ಆಫ್ ಕೋವಿಡ್ ಸಿಟಿಜನ್ ಅಂಡರ್ ಸರ್ವಿಲೆನ್ಸ್) ಹೆಸರಿನಲ್ಲಿ 15 ಜೋನ್ ಗಳ 200 ವಾರ್ಡ್ ಗಳಲ್ಲಿ ಮನೆ ಮನೆಗೆ ಸೇವೆ ನೀಡುತ್ತಿದೆ.
ವಿವಿಧ ಕಾರಣಕ್ಕೆ ಹೋಂ ಕ್ವಾರಂಟೈನ್ ನಲ್ಲಿರುವ ಪ್ರತಿಯೊಬ್ಬರ ಮನೆಗೂ ಫೋಕಸ್ 3500 ಸ್ವಯಂ ಸೇವಕರು ಭೇಟಿ ನೀಡಿ ಅವರ ಆಗು-ಹೋಗು ಆಲಿಸುತ್ತಿದ್ದಾರೆ. ಇದು ಪ್ರತಿ ಮೂರು ದಿನಕ್ಕೆ ಒಮ್ಮೆ ಮಾಡುತ್ತಿರುವ ಕೆಲಸ.
ಪಾಕ್ ಕ್ರಿಕೆಟಿಗರ ಬೆನ್ನು ಬಿದ್ದ ಕೊರೋನಾ
ಕ್ವಾರಂಟೈನ್ ನಿಯಮಗಳನ್ನು ಮುರಿಯದಂತೆ ನೋಡಿಕೊಳ್ಳುವುದು, ಮನೆ ಬಳಕೆಗೆ ಅಗತ್ಯವಾದ ದಿನಸಿ ಸೇರಿತಂದೆ ಇತರ ಸಾಮಗ್ರಿ ಪೂರೈಕೆ ಎಲ್ಲವನ್ನು ಸ್ವಯಂ ಸೇವಕರು ಮಾಡಿಕೊಂಡು ಬಂದಿದ್ದಾರೆ.
ಇದಲ್ಲದೇ ಕಾರ್ಪೋರೇಶನ್ ಆರೋಗ್ಯ ಶಿಬಿರಗಳ ಮೂಲಕ ಕೊರೋನಾ ಪತ್ತೆ ಕೆಲಸವನ್ನು ಮಾಡಿಕೊಂಡು ಬಂದಿದೆ. ಜೂನ್ 8 ರಿಂದ ಇಲ್ಲಿಯವರೆಗೆ 6811 ಕ್ಯಾಂಪ್ ಮಾಡಲಾಗಿಗಿದ್ದು 4,33,857 ಜನರು ಪ್ರಯೋಜನ ಪಡೆದುಕೊಂಡಿದ್ದಾರೆ.
ಕೊರೋನಾ ಪ್ರಕರಣಗಳು ಮಿತಿಮೀರಿದ ಪರಿಣಾಮ 1,450 ಡಬಲ್ ಬೆಡ್ ರೂಂ ಅಪಾರ್ಟ್ ಮೆಂಟ್ ಗಳನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಮಾಡಲಾಗಿದೆ. ಚೆನ್ನೈನಲ್ಲಿ ಜೂನ್ 23 ರ ವೇಳೆಗೆ 24,670 ಕೊರೋನಾ ರೋಗಿಗಳು ಗುಣಮುಖರಾಗಿದ್ದು 645 ಜನ ಸಾವನ್ನಪ್ಪಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ