
ನವದೆಹಲಿ (ಫೆ. 17) ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ (India)ಹೊಸದಾಗಿ 30,615 ಪ್ರಕರಣಗಳು (Coronavirus) ದಾಖಲಾಗಿವೆ. ಇದೇ ಅವಧಿಯಲ್ಲಿ 514 ಸೋಂಕಿತರು (Death) ಸಾವಿಗೀಡಾಗಿದ್ದಾರೆ. ಸತತ 10 ದಿನಗಳಿಂದ ದೈನಂದಿನ ಪ್ರಕರಣಗಳ ಸಂಖ್ಯೆ 1 ಲಕ್ಷಕ್ಕಿಂತ ಕಡಿಮೆ ದಾಖಲಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ 52,887 ಸಕ್ರಿಯ ಪ್ರಕರಣಗಳು ಕಡಿಮೆಯಾಗುವ ಮೂಲಕ ಒಟ್ಟು ಸಕ್ರಿಯ ಪ್ರಕರಣಗಳು 3.7 ಲಕ್ಷಕ್ಕೆ ಕುಸಿದಿದೆ. ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳು 0.87ರಷ್ಟಿದೆ. ಇನ್ನೂ ದೈನಂದಿನ ಪಾಸಿಟಿವಿಟಿ ದರ ಶೇ.2.45ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.3.32ರಷ್ಟಿದೆ. ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳು 4.27 ಕೋಟಿಗೆ ಮತ್ತು ಒಟ್ಟು ಸಾವು 5.09 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 173.86 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ.
Corbevax Vaccine: 12-18 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್ ಲಸಿಕೆ: ಅನುಮತಿ ಕೋರಿಕೆ
ಬೆಂಗಳೂರಿನಲ್ಲಿ ಇಳಿಕೆ: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕೊರೋನಾ ಸೋಂಕು ಪ್ರಕರಣಗಳು ತುಸು ಹೆಚ್ಚಳವಾಗಿದ್ದು, ಸಾವು ಇಳಿಕೆಯಾಗಿದೆ. ಸಕ್ರಿಯ ಸೋಂಕು ಪ್ರಕರಣಗಳು 10 ಸಾವಿರಕ್ಕಿಂತ ಕೆಳಕ್ಕಿಳಿದಿವೆ.
ಬುಧವಾರ 835 ಮಂದಿಗೆ ಸೋಂಕು ತಗುಲಿದ್ದು, 4 ಜನರು ಸಾವಿಗೀಡಾಗಿದ್ದಾರೆ. 1979 ಮಂದಿ ಗುಣಮುಖರಾಗಿದ್ದಾರೆ. ಸದ್ಯ 9955 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 43 ಸಾವಿರ ಪರೀಕ್ಷೆ ನಡೆದಿದ್ದು, ಶೇ.2.3ರಷ್ಟುಪಾಸಿಟಿವಿಟಿ ದರ ದಾಖಲಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ನಾಲ್ಕು ಸಾವಿರ ಇಳಿಕೆಯಾಗಿವೆ. ಆದರೆ, ಹೊಸ ಪ್ರಕರಣಗಳ ಸಂಖ್ಯೆ 70 ಏರಿಕೆಯಾಗಿವೆ (ಮಂಗಳವಾರ 765 ಕೇಸ್).
ಹೊಸ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿ, ಗುಣಮುಖರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಸಕ್ರಿಯ ಸೋಂಕು ಪ್ರಕರಣಗಳು 40 ದಿನಗಳ ಬಳಿಕ (ಜ.7) 10 ಸಾವಿರಕ್ಕಿಂತ ಕಡಿಮೆಯಾಗಿವೆ. ಸಕ್ರಿಯ ಸೋಂಕಿತರಲ್ಲಿ 486 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 161 ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿದ್ದಾರೆ. ಉಳಿದ 9 ಸಾವಿರಕ್ಕೂ ಅಧಿಕ ಸೋಂಕಿತರು ಮನೆ ಆರೈಕೆಯಲ್ಲಿದ್ದಾರೆ.
ಸಾವಿಗೀಡಾದ ನಾಲ್ಕು ಸೋಂಕಿತರ ಪೈಕಿ ಎಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.73 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.46 ಲಕ್ಷಕ್ಕೆ, ಸಾವಿನ ಸಂಖ್ಯೆ 16,785ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಐದಕ್ಕಿಂತ ಕಡಿಮೆ ಕೊರೋನಾ ಪ್ರಕರಣವಿರುವ 7 ಸಕ್ರಿಯ ಕಂಟೈನ್ಮೆಂಟ್ ವಲಯ, ಐದಕ್ಕೂ ಹೆಚ್ಚು ಕೊರೋನಾ ಪ್ರಕರಣವಿರುವ 11 ಕ್ಲಸ್ಟರ್ ವಲಯಗಳಿವೆ ಎಂದು ಬಿಬಿಎಂಪಿ ವರದಿಯಲ್ಲಿ ತಿಳಿಸಲಾಗಿದೆ.
ನಿಯಮ ಸಡಿಲ: ಎಲ್ಲ ರಾಜ್ಯಗಳಲ್ಲಿಯೂ ಕೊರೋನಾ ನಿಯಂತ್ರಂಣಕ್ಕೆ ಬರುತ್ತಲಿದ್ದು ಉಳಿಸಿಕೊಂಡಿರುವ ನಿಯಮಗಳನ್ನು ಸಡಿಲ ಮಾಡಬಹುದೆ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಕೇಳಿದೆ. ಜಿಮ್, ಈಜುಕೋಳ ಸೇರಿದಂತೆ ಕೆಲವೆಡೆ ಕೊರೋನಾ ನಿಯಮಗಳು ಇವೆ. ಸುರಕ್ಷತೆಯ ಮಾನದಂಡಗಳನ್ನು ಯಾವ ಕಾರಣಕ್ಕೂ ಮರಯಬೇಡಿ ಎಂದು ಕೇಂದ್ರ ಮತ್ತೊಮ್ಮೆ ತಿಳಿಸಿದೆ. ಮೂರನೇ ಅಲೆ ಅಂತ್ಯವಾಗುವ ಲಕ್ಷಣಗಳು ಕಂಡುಬಂದಿದ್ದು ಕರ್ನಾಟಕದಲ್ಲಿನ ಸೂತ್ರಗಳು ಫಲ ತಂದುಕೊಟ್ಟಿವೆ.
ಹೈದ್ರಾಬಾದ್ ಮೂಲದ ಬಯೋಲಾಜಿಕಲ್ ಇ (Bio E) ಕಂಪನಿ ಅಭಿವೃದ್ಧಿಪಡಿಸಿರುವ ಕೋರ್ಬೆವ್ಯಾಕ್ಸ್ ಕೋವಿಡ್ ಲಸಿಕೆಯ (Corbevax Vaccine) 5 ಕೋಟಿ ಡೋಸ್‌ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ತೆರಿಗೆ ಹೊರತುಪಡಿಸಿ ಪ್ರತಿ ಡೋಸ್‌ಗೆ ತಲಾ 145 ರು. ನಂತೆ 5 ಕೋಟಿ ಡೋಸ್ ಲಸಿಕೆ ಪೂರೈಸಲು ಕಳೆದ ತಿಂಗಳ ಅಂತ್ಯದಲ್ಲಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ