
ನವದೆಹಲಿ [ಮಾ.09]: ಇರಾನ್‌ನಿಂದ ಮರಳಿದ್ದ, ಕೊರೋನಾ ರೀತಿಯ ಲಕ್ಷಣ ಹೊಂದಿದ್ದ ಲಡಾಖ್‌ನ ಮಹಮ್ಮದ್ ಅಲಿ (76) ಎಂಬುವರು ಭಾನುವಾರ ಸಾವನ್ನಪ್ಪಿದ್ದಾರೆ. ರಕ್ತ ಪರೀಕ್ಷೆ ವರದಿ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ಕೊರೋನಾದಿಂದಲೇ ಸಾವನ್ನಪ್ಪಿದ್ದರೆ, ಆ ಸೋಂಕಿಗೆ ಬಲಿಯಾದ ದೇಶದ ಮೊದಲ ವ್ಯಕ್ತಿ ಅಲಿ ಆಗಲಿದ್ದಾರೆ.
ಕೊರೋನಾ ಸೋಂಕಿನ ರೀತಿಯ ಲಕ್ಷಣಗಳಿಂದ ಅಲಿ ಬಳಲುತ್ತಿದ್ದ ಹಿನ್ನೆಲೆಯಲ್ಲಿ, ಪ್ರಕರಣ ಸಾಕಷ್ಟುಆತಂಕಕ್ಕೆ ಕಾರಣವಾಗಿದೆ. ಆದರೆ ರಕ್ತಪರೀಕ್ಷೆ ವರದಿ ಬಂದ ಬಳಿಕವಷ್ಟೇ ಮಹಮ್ಮದ್ ಅಲಿ ಅವರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇರಾನ್‌ನಿಂದ ಅಲಿ ಬಂದ ವಿಮಾನದಲ್ಲಿದ್ದ ಇನ್ನಿಬ್ಬರು ವ್ಯಕ್ತಿಗಳಲ್ಲಿ ಕೂಡಾ ಈಗಾಗಲೇ ಕೊರೋನಾ ಸೋಂಕು ಖಚಿತಪಟ್ಟಿತ್ತು.
ಕೊರೋನಾ ಎಫೆಕ್ಟ್: ಮಾರ್ಚ್ 31ರ ವರೆಗೆ ಶಾಲೆಗಳಿಗೆ ರಜಾ...
ಒಂದು ವೇಳೆ ಅಲಿ ಅವರು ಕೊರೋನಾದಿಂದಲೇ ಸಾವನ್ನಪ್ಪಿದ್ದು ಖಚಿತವಾದರೆ, ಅದು ಸೋಂಕಿಗೆ ದೇಶದಲ್ಲಿ ಆದ ಮೊದಲ ಬಲಿಯಾಗಲಿದೆ.
ವಿಶ್ವಾದ್ಯಂತ ಈಗಾಗಲೇ ತೀವ್ರ ಆತಂಕ ಮೂಡಿಸಿರುವ ಮಾರಕ ಕೊರೋನಾ ವೈರಸ್ ವ್ಯಾಧಿ ತನ್ನ ಕಬಂಧ ಬಾಹುವನ್ನು ಮತ್ತಷ್ಟುವಿಸ್ತರಿಸಿದೆ. ಕೇರಳದಲ್ಲಿ ಮತ್ತೆ ಐವರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಭಾರತದ ಕೊರೋನಾಪೀಡಿತರ ಸಂಖ್ಯೆ ಭಾನುವಾರ 39ಕ್ಕೇರಿದೆ. ಹೊಸ ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಕೇರಳದಲ್ಲಿ ಹೈ ಅಲರ್ಟ್ ಸಾರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ