ಅಯೋಧ್ಯೆ ರಾಮ ಮಂದಿರಕ್ಕೆ 100 ಕೋಟಿ ರೂ.: 17ರಿಂದ ನಿರ್ಮಾಣ ಶುರು!

By Kannadaprabha NewsFirst Published Oct 5, 2020, 8:07 AM IST
Highlights

ಮಂದಿರಕ್ಕೆ 100 ಕೋಟಿ| 17ರಿಂದ ನಿರ್ಮಾಣ ಶುರು| ದೇಣಿಗೆಗೆ ತೆರಿಗೆ ವಿನಾಯ್ತಿ

ಅಯೋಧ್ಯೆ(ಅ.05): ರಾಮ ಮಂದಿರ ನಿರ್ಮಾಣಕ್ಕಾಗಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಇದುವರೆಗೆ 100 ಕೋಟಿ ರು. ದೇಣಿಗೆಯನ್ನು ಸ್ವೀಕರಿಸಿದ್ದು, ನವರಾತ್ರಿಯ ಮೊದಲ ದಿನವಾದ ಅ.17ರಂದು ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಅಂದು ದೇವಾಲಯ ಆಧಾರ ಸ್ತಂಭಗಳನ್ನು ನಿರ್ಮಿಸಲಾಗುವುದು ಎಂದು ವರದಿಗಳು ತಿಳಿಸಿವೆ.

ಆ.5ರಂದು ಪ್ರಧಾನಿ ನರೇಂದ್ರ ಮೋದಿ ರಾಮಮಂದಿರಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಎಲ್‌ ಆ್ಯಂಡ್‌ ಟಿ ಕಂಪನಿ ದೇವಾಲಯ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಮಂದಿರ ನಿರ್ಮಾಣಕ್ಕೆ ದೇಶದೆಲ್ಲೆಡೆಯಿಂದ ದೇಣಿಗೆ ಹರಿದು ಬರುತ್ತಿದೆ.

ಇದೇ ವೇಳೆ, ಕೇಂದ್ರ ಸರ್ಕಾರ ರಾಮ ಜನ್ಮಭೂಮಿ ಟ್ರಸ್ಟ್‌ ಅನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 80 ಜಿ ಅಡಿಯಲ್ಲಿ ತಂದಿದೆ. ಹೀಗಾಗಿ ದೇವಾಲಯಕ್ಕೆ ನೀಡುವ ದೇಣಿಗೆಗಳಿಗೆ 2020​-21ನೇ ಸಾಲಿನಲ್ಲಿ ತೆರಿಗೆ ವಿನಾಯಿತಿಗಳು ಸಿಗಲಿವೆ. ಅಯೋಧ್ಯೆಯಲ್ಲಿ ನಿರ್ಮಾಣ ಆಗಲಿರುವ ರಾಮ ಮಂದಿರದ ಐತಿಹಾಸಿಕ ಮಹತ್ವ ಹಾಗೂ ಅದೊಂದು ಸಾರ್ವಜನಿಕ ಪೂಜಾ ಸ್ಥಳವಾದ ಕಾರಣ ಕೇಂದ್ರೀಯ ನೇರ ತೆರಿಗೆ ಮಂಡಳಿ ಟ್ರಸ್ಟ್‌ ಸ್ವೀಕರಿಸುವ ಹಣಕ್ಕೆ ತೆರಿಗೆ ವಿನಾಯಿತಿ ನೀಡಿದೆ.

click me!