ಕಸದ ರಾಶಿಯಲ್ಲಿ ಸಿಕ್ಕ 100 ಗ್ರಾಂ ಚಿನ್ನದ ನಾಣ್ಯವನ್ನು ಮಾಲೀಕರಿಗೆ ಹಿಂತಿರುಗಿಸಿದ ಪೌರ ಕಾರ್ಮಿಕೆ!

By Suvarna NewsFirst Published Oct 19, 2021, 10:06 PM IST
Highlights
  • ಕಸದ ರಾಶಿಯಲ್ಲಿ 7.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ನಾಣ್ಯ ಪತ್ತೆ
  • 100 ಗ್ರಾಂ ಚಿನ್ನದ ನಾಣ್ಯ ಹೆಕ್ಕಿ ತೆಗೆದು, ಮಾಲೀಕರಿಗೆ ನೀಡಿದ ಪೌರ ಕಾರ್ಮಿಕೆ
  • ಪೌರ ಕಾರ್ಮಿಕೆಗೆ ಪೊಲೀಸ್ ಇಲಾಖೆಯಿಂದ ಸನ್ಮಾನ
     

ತಮಿಳುನಾಡು(ಅ.19):  ಕಾಲ ಅದೆಷ್ಟೇ ಬದಲಾದರೂ ಮಾನವೀಯತೆ, ಆದರ್ಶ, ಸತ್ಯದ ಮಾರ್ಗದಲ್ಲಿ ಮುನ್ನಡೆಯವವರು ಇದ್ದೇ ಇರುತ್ತಾರೆ. ಹೀಗಾಗಿ ಈಗಲೂ ಕೆಲ ಘಟನೆಗಳು ಪ್ರಶಂಸೆಗೆ ಪಾತ್ರವಾಗುತ್ತದೆ. ಇದೀಗ ಪೌರ ಕಾರ್ಮಿಕೆ ನಿರ್ಧಾರ ಹಾಗೂ ನಡತೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅಚಾತುರ್ಯದಿಂದ ಕಸದ ತೊಟ್ಟಿಗೆ ಎಸೆದ 100 ಗ್ರಾಂ ಚಿನ್ನದ ನಾಣ್ಯಗಳನ್ನು ಮಾಲೀಕರಿಗೆ ಹಿಂತಿರುಗಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಪೌರ ಕಾರ್ಮಿಕರಿಗೆ ಸಂತಸದ ಸುದ್ದಿ..!

ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗಣೇಶ್ ರಾಮನ್ ತಮ್ಮ ದುಡಿಮೆಯಲ್ಲಿ ಉಳಿತಾಯ ಮಾಡಿ 100 ಗ್ರಾಂ ಚಿನ್ನದ ನಾಣ್ಯಗಳನ್ನು ಖರೀದಿಸಿದ್ದರು. ಸುಮಾರು 7.5 ಲಕ್ಷ ರೂಪಾಯಿ ಮೌಲ್ಯದ ನಾಣ್ಯಗಳನ್ನು ಖರೀದಿಸಿ ಮನೆಯ ಬೆಡ್‌ರೂಂನ ಬೆಡ್ ಅಡಿಯಲ್ಲಿ ಇಟ್ಟಿದ್ದಾರೆ. ಆದರೆ ಪತ್ನಿ ಮನೆ ಕ್ಲೀನ್ ಮಾಡುವ ಬರದಲ್ಲಿ ಮನೆಯೊಳಗಿನ ಅನಗತ್ಯ ವಸ್ತುಗಳನ್ನು ತೆಗೆದು ಕಸದ ತೊಟ್ಟಿಗೆ ಎಸೆದಿದ್ದಾರೆ.

ಗಾಂಧಿ ಜಯಂತಿ: ಸಂಸದ ರಾಜೀವ್ ಚಂದ್ರಶೇಖರ್‌ರಿಂದ ಪೌರಕಾರ್ಮಿಕರಿಗೆ ಸನ್ಮಾನ

ಕಸ ಸಂಗ್ರಹಿಸಲು ಬಂದ ಪೌರ ಕಾರ್ಮಿಕರ ಪೈಕಿ ಮೇರಿ, ಕಸ ಸಂಗ್ರಹದ ವೇಳೆ ನಾಣ್ಯದ ಸದ್ದುಗಳು ಕೇಳಿಸಿದೆ. ಪ್ಲಾಸ್ಟಿಕ್ ಚೀಲ ಪೌರ ಕಾರ್ಮಿಕೆ ಗಮನಕ್ಕೆ ಬಂದಿದೆ. ತಕ್ಷಣವೇ ಚೀಲ ಪರಿಶೀಲಿಸಿದ ಪೌರ ಕಾರ್ಮಿಕೆಗೆ ಚಿನ್ನದ ನಾಣ್ಯಗಳು ಪತ್ತೆಯಾಗಿದೆ. ಇತ್ತ ತನ್ನ ಹಿರಿಯ ಪೌರ ಕಾರ್ಮಿಕರ ಸೂಪರ್‌ವೈಸರ್ ಗಮನಕ್ಕೆ ತಂದ ಮೇರಿ, ಮಾಲೀಕರಿಗೆ ಹಿಂತಿರುಗಿಸಲು ಸೂಚಿಸಿದ್ದಾರೆ.

ಇತ್ತ ಪತ್ನಿ ಎಸೆತದ ಅನಗತ್ಯ ವಸ್ತು, ಕಸದ ರಾಶಿಯಲ್ಲಿ 7.5 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ಚಿನ್ನದ ನಾಣ್ಯ ಕಸದ ತೊಟ್ಟಿ ಸೇರಿದೆ. ಮನೆಗೆ ಬಂದು ನೋಡಿದಾಗ ಗಣೇಶ್ ರಾಮನ್‌ಗೆ ಚಿನ್ನದ ನಾಣ್ಯ ಮಿಸ್ಸಿಂಗ್ ಗೊತ್ತಾಗಿದೆ. ಪತ್ನಿಯ ಕೇಳಿದಾಗ ಪರಿಸ್ಥಿತಿ ಅರ್ಥವಾಗಿದೆ. ತಕ್ಷಣವೇ ಸಿಸಿಟಿವಿ ಪರೀಶೀಲಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗರ್ಭಿಣಿ, 50 ವರ್ಷ ಮೇಲ್ಪಟ್ಟ ಪೌರ ಕಾರ್ಮಿಕರಿಗೆ ವೇತನ ಸಹಿತ ರಜೆ

ಪೌರ ಕಾರ್ಮಿಕ ಇಲಾಖೆ ಅಧಿಕಾರಿ ಈ ಚಿನ್ನದ ನಾಣ್ಯವನ್ನು ಸ್ಥಳೀಯ ಸಾಥಗುಲಂ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ವೇಳೆ ಮಾಲೀಕ ಗಣೇಶ್ ರಾಮನ್ ಅವರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಬಳಿಕ ಚಿನ್ನದ ನಾಣ್ಯಗಳನ್ನು ಹಸ್ತಾಂತರಿಸಿದ್ದಾರೆ. ಪೌರ ಕಾರ್ಮಿಕೆಗೆ ಪೊಲೀಸರು ಸನ್ಮಾನ ಮಾಡಿದ್ದಾರೆ.
 

click me!